ಹಬ್ಬದ ಮನೆಯಲ್ಲೀಗ ಸೂತಕ: ಮಗಳು ಮನೆಗೆ ಬರುವ ಖುಷಿಯಲ್ಲಿದ್ದವನ ಜೀವ ತೆಗೆದ ಮಾಂಜಾ ದಾರ!

ಬೀದರ್‌ನಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಹಾಸ್ಟೆಲ್​​ನಿಂದ ಮಗಳನ್ನು ಕರೆತರಲು ವ್ಯಕ್ತಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಪ್ರದೀಪ್ ಗುಂಟಿ, ಮಾಂಜಾದಾರ‌ ಮಾರಾಟ ಹಾಗೂ ಬಳಕೆ ಎರಡು ಕೂಡಾ ಅಪರಾಧವಾಗಿದೆ. ಹೀಗಾಗಿ ಇಂತಹ ಸನ್ನಿವೇಶಗಳು ಕಂಡುಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳುವದಾಗಿ ಎಚ್ಚರಿಸಿದ್ದಾರೆ.

ಹಬ್ಬದ ಮನೆಯಲ್ಲೀಗ ಸೂತಕ: ಮಗಳು ಮನೆಗೆ ಬರುವ ಖುಷಿಯಲ್ಲಿದ್ದವನ ಜೀವ ತೆಗೆದ ಮಾಂಜಾ ದಾರ!
ಮೃತ ಸಂಜುಕುಮಾರ್ ಹೊಸಮನಿ
Edited By:

Updated on: Jan 14, 2026 | 5:19 PM

ಬೀದರ್​​, ಜನವರಿ 14: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಗಿ ಗ್ರಾಮದ ಬಳಿ ನಡೆದಿದೆ. ಬಂಬಳಗಿ ಗ್ರಾಮದ ಸಂಜುಕುಮಾರ್ ಹೊಸಮನಿ(48) ಮೃತ ದುರ್ದೈವಿಯಾಗಿದ್ದು, ಪೊಲೀಸ್ ವರದಿಯ ಪ್ರಕಾರ ಸಂಜುಕುಮಾರ್ ಸ್ಥಳೀಯ ಹಾಸ್ಟೆಲ್‌ನಿಂದ ತನ್ನ ಮಗಳನ್ನು ಕರೆತರಲು ತೆರಳುತ್ತಿದ್ದಾಗ ಅವಘಡ ನಡೆದಿದೆ. ಮೃತ ವ್ಯಕ್ತಿ ಲಾರಿ ಕ್ಲೀನರ್ ಆಗಿ ಉದ್ಯೋಗ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ.

ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಮೋಟರ್ ಸೈಕಲ್‌ನಲ್ಲಿಪ್ರಯಾಣಿಸುತ್ತಿದ್ದ ವೇಳೆ ತಳಮಡಗಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ಮಾಂಜಾ ದಾರ ಸಂಜುಕುಮಾರ್ ಹೊಸಮನಿ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ವೇಳೆ ಅರ್ಧ ಕುತ್ತಿಗೆ ಕಟ್ಟಾದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಸಂಜುಕುಮಾರ್ ಬೈಕ್​​ನಿಂದ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಆ ಮೂಲಕ ಸಂಕ್ರಾಂತಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.’

ಇದನ್ನೂ ಓದಿ: ಕರ್ನಾಟಕದಲ್ಲಿ ಮಾಂಜಾ ದಾರ ನಿಷೇಧ; ಗಾಳಿಪಟ ಹಾರಿಸಲು ಹತ್ತಿ ದಾರಕ್ಕೆ ಮಾತ್ರ ಅವಕಾಶ

ಮಾಂಜಾ ದಾರ ಮಾರಾಟಗಾರರಿಗೆ ಎಸ್ಪಿ ಎಚ್ಚರಿಕೆ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಪ್ರದೀಪ್ ಗುಂಟಿ, ಮಾಂಜಾ ದಾರ‌ ಮಾರಾಟ ಹಾಗೂ ಬಳಕೆ ಎರಡು ಕೂಡಾ ಅಪರಾಧವಾಗಿದೆ. ಹೀಗಾಗಿ ಇಂತಹ ಸನ್ನಿವೇಶಗಳು ಕಂಡುಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳುವದಾಗಿ ಎಚ್ಚರಿಸಿದ್ದಾರೆ. ಸಂಕ್ರಾಂತಿ ಹಬ್ಬದ ನಿಮಿತ್ತ ಮಾಂಜಾ ದಾರಗಳ ಮಾರಾಟ ನಡೆಯುವ ಸಾಧ್ಯತೆ ಇರುವ ಕಾರಣ ಈಗಾಗಲೇ ನಾವು ಜಿಲ್ಲೆಯಲ್ಲಿ ಹಲವು ಅಂಗಡಿಗಳ ಮೇಲೆ ದಾಳಿ ಮಾಡಿದ್ದೇವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದ್ದರೂ ಕೆಲವರು ಅವುಗಳ ಮಾರಾಟ ಮುಂದುವರಿಸಿದ್ದಾರೆ.
ಅಂತಹ ಅಂಗಡಿಗಳ ಕುರಿತು ಪರಿಶೀಲನೆ ಮುಂದುವರಿದಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.