ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಹೆಚ್ಚುತ್ತಿಲ್ಲ ಜಾನುವಾರು ‌ಸಂಖ್ಯೆ; ಕಳೆದ 10 ವರ್ಷದಿಂದ ಇಳಿಕೆಯತ್ತ ಸಾಗಿದ ಗೋ ಸಂತತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 19, 2024 | 6:27 PM

ಬೀದರ್ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಜಾನುವಾರು ಸಂತತಿ ಕಡಿಮೆಯಾಗುತ್ತಿದೆ. ಅದರಲ್ಲಿಯೂ ಎತ್ತುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕ್ಷೀಣಿಸುತ್ತಿದ್ದು, ಗೋ ಪ್ರೀಯರಲ್ಲಿ ಆತಂಕ ಹೆಚ್ಚಿಸಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಜಾನುವಾರುಗಳ ಸಂಖ್ಯೆ ಇಳಿಕೆಯತ್ತ ಸಾಗಿದ್ದು, ಅಧಿಕಾರಿಗಳನ್ನ ಚಿಂತೆಗೀಡು ಮಾಡಿದೆ.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಹೆಚ್ಚುತ್ತಿಲ್ಲ ಜಾನುವಾರು ‌ಸಂಖ್ಯೆ; ಕಳೆದ 10 ವರ್ಷದಿಂದ ಇಳಿಕೆಯತ್ತ ಸಾಗಿದ ಗೋ ಸಂತತಿ
ಬೀದರ್​ನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಹೆಚ್ಚುತ್ತಿಲ್ಲ ಜಾನುವಾರು ‌ಸಂಖ್ಯೆ
Follow us on

ಬೀದರ್, ಜೂ.19: ಮಹಾರಾಷ್ಟ್ರ ತೆಲಂಗಾಣ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾನುವಾರು(Cow) ಗಣತಿಯಿಂದ ಈ ವಿಚಾರ ಬೆಳೆಕಿಗೆ ಬಂದಿದ್ದು, ಗೋ ಪ್ರೀಯರನ್ನ ಚಿಂತೆಗೀಡು ಮಾಡಿದೆ. 2012 ರಲ್ಲಿ 19ನೇ ಜಾನುವಾರು ಗಣತಿಯಾಗಿದ್ದು, 2 ಲಕ್ಷ 35 ಸಾವಿರ 294 ಎತ್ತು ಹಾಗೂ ಆಕಳು ಸಂಖ್ಯೆಯಿತ್ತು. ನಂತರ 2019 ರಲ್ಲಿ 20ನೇ ಜಾನುವಾರು ಗಣತಿಯೂ ಇಡೀ ದೇಶದ್ಯಾಂತ ಎಲ್ಲಾ ಜಿಲ್ಲೆಯಲ್ಲಿಯೂ ನಡೆದಿದೆ. ಆ ಪ್ರಕಾರವಾಗಿ 2019 ರಲ್ಲಿ ನಡೆದ ಜಾನುವಾರು ಗಣತಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಆಕಳು ಮತ್ತು ಎತ್ತುಗಳ ಸಂಖ್ಯೆ ನೋಡುವುದಾದರೆ 1, 73, 634 ಇದೆ. ಅಂದರೆ ಎರಡು ಜಾನುವಾರು ಗಣತಿಯನ್ನ ಲೆಕ್ಕಹಾಕಿದರೆ 2012 ರಲ್ಲಿ 2019ರವರೆಗೆ 61, 660 ಜಾನುವಾರುಗಳ ಸಂಖ್ಯೆ ಇಳಿಕೆಯಾಗಿದೆ.

ಹತ್ತು ವರ್ಷದ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳ ಸಂಖ್ಯೆಯಲ್ಲಿ ಕಡಿಮೆ

ಇನ್ನು 2024ರ ಸಪ್ಟೆಂಬರ್ ನಲ್ಲಿ 21ನೇ ಜಾನುವಾರು ಗಣಿತಿ ನಡೆಯಲಿದೆ. ಈ ಗಣಿತಿಗೂ ಮುಂಚೆಯೇ ಪಶು ಸಂಗೋಪನೆ ಇಲಾಕೆಯಿಂದ ಕಾಲು ಬಾಯಿ ರೋಗಕ್ಕೆ ಲಸಿಕೆ ಹಾಕುವಾಗ ಜಾನುವಾರು ಸರ್ವೇ ಮಾಡಿದ್ದು, ಶೇಕಡಾ 20 ರಷ್ಟು ಕಡಿಮೆಯಾಗಿದೆ ಎಂದು ಪಶು ಸಂಗೋಪನಾ ಇಲಾಕೆಯ ಉಪನಿರ್ದೇಶಕ ನರಸಪ್ಪಾ ಅವರು ಹೇಳುತ್ತಿದ್ದಾರೆ. ಸುಮಾರು ಹತ್ತು ವರ್ಷದ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಇದರ ಬಗ್ಗೆ ಅಧಿಕಾರಿಗಳು ಮಾತ್ರ ಚಿಂತಿಸುತ್ತಿಲ್ಲ.

ಇದನ್ನೂ ಓದಿ:ಮೇವು, ನೀರಿಲ್ಲದೆ ಜಾನುವಾರುಗಳು ಪರದಾಟ, ಜಾತ್ರೆ-ಸಂತೆಗಳಲ್ಲಿ ಕಡಿಮೆ ಬೆಲೆಗೆ ರೈತರಿಂದ ಮಾರಾಟ

ಇತ್ತ ಜಾನುವಾರುಗಳ ಸಂತತಿ ಹೆಚ್ಚಿಸುವ ಉದ್ದೇಶದಿಂದ ಸರಕಾರ ಕೂಡ ಜಾನುವಾರು ಸಾಕಾಣಿಕೆ ರೈತರಿಗೆ ಹತ್ತಾರು ಯೋಜನೆಯನ್ನ ಜಾರಿಕೆ ತಂದಿದೆ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾನೂನು ತಿದ್ದುಪಡಿ ಕೂಡ ಮಾಡಿದೆ. ಇದರಿಂದಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಬಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದುಕೊಂಡಿದ್ದರು. ಆದರೆ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಕೂಡ ಜಾನುವಾರುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಗೋ ಪ್ರೀಯರಲ್ಲಿ ಮೂಡುತ್ತಿದೆ.

ಆಕಳುಗಳ ಸಂಖ್ಯೆಯಲ್ಲಿ ಅಷ್ಟೇನೂ ಕಡಿಯಾಗಿಲ್ಲ. ಆದರೆ, ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎತ್ತುಗಳು ಎಲ್ಲಿಗೆ ಹೋಗುತ್ತಿವೆ, ಎತ್ತುಗಳನ್ನ ವಧೆ ಮಾಡಲಾಗುತ್ತಿದೆಯಾ?, ರೋಗದಿಂದ ಬಳಲಿ ಅಸುನಿಗೂತ್ತಿವೇಯಾ? ಅಥವಾ ವಯಸ್ಸಾದ ಎತ್ತುಗಳನ್ನ ರೈತರು ಕಟುಕರಿಗೆ ಮಾರಾಟ ಮಾಡುತ್ತಿದ್ದಾರೇಯೇ?. ಈ ಎಲ್ಲಾ ಪ್ರಶ್ನೆಗಳು ಜನರಲ್ಲಿ ಮೂಡುತ್ತಿದೆ. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗೋ ಪ್ರೀಯರಿಗೆ ಉತ್ತರ ಕೊಡಬೇಕಾಗಿದೆ. ನಿನ್ನೆ(ಜೂ.18) ಬೀದರ್​ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಾನುವಾರುಗಳ ಸಂತತಿ ಕಡಿಮೆಯಾಗುತ್ತಿರುವ ಬಗ್ಗೆ ಬಸವಕಲ್ಯಾಣ ಶಾಸಕ ಶರಣು ಸಲಗರ್, ಬೀದರ್​ನ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಕಳವಳ ಕೂಡ ವ್ಯಕ್ತಪಡಿಸಿದ್ದು, ಜಾನುವಾರುಗಳನ್ನ ವಧೆ ಮಾಡಲಾಗುತ್ತಿದೆ, ಇದರಿಂದಾಗಿಯೇ ಜಾನುವಾರುಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

ಗೋ ಹತ್ಯೆ ಕಾನೂನು ಜಾರಿಯಾದರೂ ಕೂಡ ಗೋವುಗಳ ವಧೆ ನಿರಂತರವಾಗಿದ್ದು, ಇದೆ ಕಾರಣಕ್ಕೆ ಗೋವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಹಿಂದೂಪರ ಸಂಘಟನೆಯವರು ಹಾಗೂ ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಆದರೆ, ಪಶು ಸಂಗೋಪನಾ ಇಲಾಕೆಯ ಅಧಿಕಾರಿಗಳು ಹಾಲು ಕೊಡದ ಗೋವುಗಳ ಬಗ್ಗೆ, ವಯಸ್ಸಾದ ಎತ್ತುಗಳ ಬಗ್ಗೆ ರೈತರು ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದಾಗಿ ರೋಗಗಕ್ಕೆ ತುತ್ತಾಗಿ ಎತ್ತು, ಆಕಳುಗಳು ಸಾವನ್ನಪ್ಪುತ್ತಿವೆ ಎಂದು ಹೇಳುತ್ತಿದ್ದಾರೆ. ಏನೇ ಇರಲಿ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಜಾನುವಾರು ಗಣತಿಯಿಂದಲೇ ಬಹಿರಂಗವಾಗಿದೆ. ಇದು ಹೀಗೆ ಮುಂದು ವರೆದರೇ ಮುಂದಿನ ಪೀಳಿಗೆಗೆ ಜಾನುವಾರುಗಳನ್ನ ಫೋಟೋದಲ್ಲಿ ತೋರಿಸುವ ಕಾಲ ದೂರವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ