ದಸರಾ ಎಂದಾಕ್ಷಣ ಮೈಸೂರು ನೆನಪಾಗುತ್ತದೆ, ಆದರೆ ಉತ್ತರ ಕರ್ನಾಟಕ-ಮುಂಬೈ ಕರ್ನಾಟಕದವರಿಗೆ ತುಳಜಾಪುರ ಪಾದಯಾತ್ರೆ ಪುಳಕಗೊಳಿಸುತ್ತದೆ! ಇಲ್ಲಿದೆ ವಿಶೇಷ

| Updated By: ಸಾಧು ಶ್ರೀನಾಥ್​

Updated on: Oct 25, 2023 | 2:25 PM

Tulajapur Padayatre: ಭಕ್ತರು ತುಳಜಾಪುರಕ್ಕೆ ಪಾದಯಾತ್ರೆ ಮೂಲಕ, ಸೈಕಲ್‌, ಬೈಕ್‌, ವಾಹನಗಳ ಮೂಲಕ ತೆರಳಿ ದೇವಿ ದರುಶನ ಪಡೆದುಕೊಂಡು, ತಮ್ಮ ಹರಕೆ ತೀರಿಸಿ ಬರುತ್ತಾರೆ. ಈ ಬಾರಿಯೂ ಕೂಡಾ ಅಪಾರ ಪ್ರಮಾಣದ ಭಕ್ತರು ಅಂಬಾಭವಾನಿಯ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಹೆಜ್ಜೆ ಹಾಕುತ್ತಿಹಾಕುತ್ತಿದ್ದಾರೆ

ದಸರಾ ಎಂದಾಕ್ಷಣ ಮೈಸೂರು ನೆನಪಾಗುತ್ತದೆ, ಆದರೆ ಉತ್ತರ ಕರ್ನಾಟಕ-ಮುಂಬೈ ಕರ್ನಾಟಕದವರಿಗೆ ತುಳಜಾಪುರ ಪಾದಯಾತ್ರೆ  ಪುಳಕಗೊಳಿಸುತ್ತದೆ! ಇಲ್ಲಿದೆ ವಿಶೇಷ
ಉತ್ತರ ಕರ್ನಾಟಕ-ಮುಂಬೈ ಕರ್ನಾಟಕದವರಿಗೆ 'ತುಳಜಾಪುರ' ಪಾದಯಾತ್ರೆ ಪುಳಕಗೊಳಿಸುತ್ತದೆ!
Follow us on

ದಸರಾ ಎಂದಾಕ್ಷಣ ದಕ್ಷಿಣ ಕರ್ನಾಟಕದವರಿಗೆ ಮೈಸೂರು ( Mysore Dasara) ನೆನಪಾದರೆ, ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದವರಿಗೆ (North Karnataka, Mumbai Karnataka) ಮಹಾರಾಷ್ಟ್ರದ ಅಂಬಾ ಭವಾನಿ ನೆಲೆವೀಡಾದ ‘ತುಳಜಾಪುರ’ ನೆನಪಾಗುತ್ತದೆ. ಭಕ್ತರು ತುಳಜಾಪುರಕ್ಕೆ ಪಾದಯಾತ್ರೆ ಮೂಲಕ, ಸೈಕಲ್‌, ಬೈಕ್‌, ವಾಹನಗಳ ಮೂಲಕ ತೆರಳಿ ದೇವಿ ದರುಶನ ಪಡೆದುಕೊಂಡು, ತಮ್ಮ ಹರಕೆ ತೀರಿಸಿ ಬರುತ್ತಾರೆ. ಈ ಬಾರಿಯೂ ಕೂಡಾ ಅಪಾರ ಪ್ರಮಾಣದ ಭಕ್ತರು ಅಂಬಾಭವಾನಿಯ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಹೆಜ್ಜೆ ಹಾಕುತ್ತಿಹಾಕುತ್ತಿದ್ದಾರೆ (Tulajapur Padayatre).

ಅಂಬಾಭವಾನಿ ದರ್ಶನಕ್ಕೆ ಹರಿದು ಹೋಗುತ್ತಿದೆ ಭಕ್ತರ ದಂಡು ರಸ್ತೆಯುದ್ದಕ್ಕೂ ಜನವೋ ಜನ…ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದ ಅಂಬಾಭವಾನಿ ದರ್ಶಕ್ಕೆ (Tuljapur Amba Bhavani, Osmanabad, Maharashtra) ಹೋಗುತ್ತಿದೆ ಅಪಾರ ಪ್ರಮಾಣದ ಭಕ್ತ ಗಣ…ನೂರಾರು ಕಿಲೋಮೀಟರ್ ‌ಗಟ್ಟಲೇ ಚಿಕ್ಕವರಿಂದ ವಯೋವೃದ್ಧರವರೆಗೂ ಪಾದಯಾತ್ರೆ ಮೂಲಕ ತೆರಳುತ್ತಿರುವ ಭಕ್ತರು…ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ಹೋಗುತ್ತಿದೆ ಭಕ್ತರ ದಂಡು….ನಡೆದುಕೊಂಡೆ ಹೋಗುತ್ತಾರೆ ನಾಲ್ಕು ದಿನಗಳ ಕಾಲ ರಸ್ತೆಯುದ್ದಕ್ಕೂ ಪ್ರಸಾದ ವ್ಯವಸ್ಥೆ ಮಾಡುವ ಭಕ್ತರು… ಹೌದು ಬೀದರ್ ಜಿಲ್ಲೆಯಿಂದ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದ ಅಂಬಾಭವಾನಿ ದರ್ಶಕ್ಕೆ ಹೋಗುತ್ತಿದ್ದಾರೆ.

ಸೀಗಿ ಹುಣ್ಣಿಮೆ ದಿನ ತುಳಜಾಪುರದ ಅಂಬಾಭವಾನಿ ದರ್ಶನಕ್ಕಾಗಿ ಅಪಾರ ಭಕ್ತ ಸಮೂಹ ಮಹಾರಾಷ್ಟ್ರದ ತುಳಜಾಪುರಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಸೀಗಿ ಹುಣ್ಣಿಮೆ ಬಂದರೆ ಸಾಕು ಅಂಬಾಭವಾನಿಯ ಭಕ್ತರಿಗೆ ಸಂಭ್ರಮವೋ ಸಂಭ್ರಮ. ತಗ್ಗು- ದಿನ್ನಿ ರಸ್ತೆಯಲ್ಲಿ ಭಕ್ತಿ ಪರವಶರಾಗಿ ಅಂಬಾಭವಾನಿಯ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಹಜ್ಜೆ ಹಾಕುತ್ತಿದ್ದಾರೆ. ನಾಡಿನ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ದೇವಿಗೆ ಕರ್ನಾಟಕದಲ್ಲೂ ಅಪಾರ ಭಕ್ತರಿದ್ದಾರೆ. ಮನೆಯಲ್ಲಿ ಶುಭ ಕಾರ್ಯಗಳಾದರೆ ತುಳಜಾಪುರಕ್ಕೆ ತೆರಳಿ ಹರಕೆ ತೀರಿಸುವುದು ಈ ಭಾಗದ ಭಕ್ತರ ರೂಢಿಯಾಗಿದ್ದು ಕಾಲ್ನಡಿಗೆಯಿಂದ ಅಂಬಾಭವಾನಿ ದರ್ಶನ ಮಾಡುವುದರಿಂದ ನಮಗೆ ನಮ್ಮ ಕುಟುಂಬಕ್ಕೆ ಒಳ್ಳೆಯದು ಆಗುತ್ತದೆ ಎಂದು ಪ್ರತಿ ನಾವೂ ಪಾದಯಾತ್ರೆಯ ಮೂಲಕ ದೇವಿಯ ದರ್ಶನಕ್ಕೆ ಹೋಗತ್ತಿದ್ದೇಬವೆಂದು ಭಕ್ತರು ಹೇಳುತ್ತಿದ್ದಾರೆ…

ಪ್ರತಿ ವರ್ಷ ಕೂಡಾ ಅಕ್ಟೋಬರ್ ತಿಂಗಳಿನಲ್ಲಿ ಕಲ್ಯಾಣ ಕರ್ನಾಟಕದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನಡೆದುಕೊಂಡು ತುಳಜಾಪುರಕ್ಕೆ ಹೋಗುತ್ತಾರೆ. ವಾರಗಟ್ಟಲೇ ಹೆಣ್ಣು ಗಂಡು, ಮಕ್ಕಳು ಅನ್ನೋ ಭೇದ ಭಾವವಿಲ್ಲದಂತೆ ಎಲ್ಲರು ಕೂಡಾ ನಡೆದುಕೊಂಡು ಹೋಗಿ ಅಬಾ ಭವಾನಿ ದೇವಿಯ ದರ್ಶನ ಪಡೆದುಕೊಂಡು ಬರುತ್ತಾರೆ. ಇನ್ನೂ ಅಂಬಾ ಭವಾನಿ ಭಕ್ತರು ಏನೇ ಕಳಿಕೊಂಡರು ಭಕ್ತರ ಇಷ್ಟಾರ್ಥಗಳನ್ನ ನೇರವೇರಿಸುತ್ತಾಳೆನ್ನುವ ಭಾವನೆ ಇಲ್ಲಿನ ಜನರಲ್ಲಿ ಬೇರೂರಿದೆ.ಬಡವರು, ಶ್ರೀಮಂತರು ಎನ್ನದೆ, ಜಾತಿ-ಮತ, ಪಂಥ ಬೇಧವಿಲ್ಲದೆ, ಎಲ್ಲ ವರ್ಗಗಳ ಜನರ ಅಂಬಾಭವಾನಿ ದರ್ಶನಕ್ಕಾಗಿ ಕಾಯುತ್ತಾರೆ.

 

ಪಾದಯಾತ್ರೆ ಮೂಲಕ ತುಳಜಾಪುರಕ್ಕೆ ತೆರಳಿ ದೇವಿಯ ದರ್ಶನ ಪಡೆದರೆ, ದೇವಿ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಈ ಹಿಂದೆ ಯಾರಾದರೂ ಯಾತ್ರಿಕರು, ಒಂದು ಊರಿನ ಮಾರ್ಗವಾಗಿ ಪ್ರಯಾಣಿಸುತ್ತಿದ್ದರೆ, ಅಂತಹವರಿಗಾಗಿಯೇ ಊರಿನ ಅಗಸಿ ಬಾಗಿಲಿನಲ್ಲಿ ಕಾದು ಕುಳಿತವರು ನಮ್ಮ ಮನೆಗೆ ಬನ್ನಿ ದಣಿವಾರಿಸಿಕೊಂಡು, ನಮ್ಮ ಅತಿಥ್ಯ ಸ್ವೀಕರಿಸಿ ಮುಂದೆ ಹೋಗಿ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತಿದ್ದರು. ಯಾತ್ರಿಕರು ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಶುಭಕೋರಿ ಮುನ್ನಡೆಯುತ್ತಿದ್ದರು.

ಇದೇ ಮಾದರಿಯ ಆತಿಥ್ಯವನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ. ಅಂಬಾಭವಾನಿ ದರ್ಶನಕ್ಕೆ ತೆರಳುವ ಪಾದಯಾತ್ರಿಗಳನ್ನು ಆಹ್ವಾನಿಸಿ, ಶುದ್ಧ ಮನಸ್ಸಿನಿಂದ ಸತ್ಕರಿಸಿ, ಅವರಲ್ಲಿ ದೈವತ್ವ ಕಾಣುವ ಜನತೆಗೆ ಇಂದಿಗೂ ಈ ಭಾಗದಲ್ಲಿ ಬರವಿಲ್ಲ. ಹೀಗಾಗಿಯೇ ಅಂಬಾಭವಾನಿ ದೇವಿಯ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುವ ದಾರಿಯುದ್ದಕ್ಕೂ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ ಪ್ರಸಾದ ಮಾಡಿ ಸೇವಿಸಿ ಭಕ್ತರು ಮತ್ತೆ ದೇವಿಯ ದರ್ಶನಕ್ಕೆ ನಡೆದುಕೊಂಡು ಹೋಗುತ್ತಾರೆ.

ಹೀಗಾಗಿ ಸಾಗೋರೋಪಾದಿಯಲ್ಲಿ ಭಕ್ತರು ತಮಗೆ ಅನಕೂಲವಾಗುವ ರೀತಿಯಲ್ಲಿ ಸೈಕಲ್, ಬೈಕ್, ಕಾರು, ಬಸ್ ಹಾಗೂ ನಡೆದುಕೊಂಡು ಹೋಗಿ ದೇವಿಯ ದರ್ಶನ ಪಡೆದಕೊಂಡು ಬರುತ್ತಾರೆ. ನವರಾತ್ರಿ ಸಂದರ್ಭದಲ್ಲಿ ತುಳಜಾಭವಾನಿ ದೇವಾಲಯ ಬಾಗಿಲು ಮುಚ್ಚಲಾಗಿರುತ್ತದೆ, ಸೀಗೆ ಹುಣ್ಣಿಮೆ ದಿನ ದೇವಾಲಯದ ಬಾಗಿಲು ತೆರೆಯಲಾಗುತ್ತದೆ, ಹೀಗಾಗಿ ತಾಯಿಯ ದರ್ಶನಕ್ಕೆ ಭಕ್ತರು ತಂಡೋಪ ತಂಡವಾಗಿ ಹೋಗುತ್ತಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಕಾಲ್ನಡಿಗೆ ಮೂಲಕ ನಡೆದುಕೊಂಡೆ ದೇವಿಯ ದರ್ಶನ ಪಡೆದು ಪುಣಿತರಾಗುತ್ತಾರೆ. ಕಾಲ್ನಡಿಗೆಯಲ್ಲಿ ಹೋಗುವ ಭಕ್ತರಿಗೆ ದಾರಿಯುದ್ದಕ್ಕೂ ಕುಡಿಯುವ ನೀರು, ಆಹಾರ, ಹಣ್ಣು ಹಂಪಲಗಳನ್ನ ಸಾರ್ವಜನಿಕರು ಭಕ್ತರಿಗೆ ನೀಡುತ್ತಿರುವುದು ವಿಶೇಷವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:17 pm, Wed, 25 October 23