ಬೀದರ್​: ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ, ಇಬ್ಬರ ಸಾವು

| Updated By: ವಿವೇಕ ಬಿರಾದಾರ

Updated on: Jan 22, 2024 | 7:55 AM

ಬೀದರ್​ ಜಿಲ್ಲೆಯ ಹುಮ್ನಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಮೃಪಟ್ಟಿದ್ದಾರೆ. ಎಂಟು ಜನರು ಅಸ್ವಸ್ಥರಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಣಾಪಾದಿಂದ ಪಾರಾಗಿದ್ದಾರೆ.

ಬೀದರ್​: ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ, ಇಬ್ಬರ ಸಾವು
ಕೆಮಿಕಲ್​​ ಕಾರ್ಖಾನೆ
Follow us on

ಬೀದರ್, ಜನವರಿ 22: ಹುಮ್ನಾಬಾದ್ (Humnabad) ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಲ್ಲಿ (Chemical factory) ವಿಷಾನಿಲ (Gas leak) ಸೋರಿಕೆಯಾಗಿ ಇಬ್ಬರು ಮೃಪಟ್ಟಿದ್ದಾರೆ. ಎಂಟು ಜನರು ಅಸ್ವಸ್ಥರಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಣಾಪಾದಿಂದ ಪಾರಾಗಿದ್ದಾರೆ. ಮಧ್ಯಪ್ರದೇಶ ಮೂಲದ ಮೊಹಮ್ಮದ್ ಶಾಬಾದ್ (21) ಇಂದ್ರಜೀತ್ (23) ಮೃತ ದುರ್ದೈವಿಗಳು. ರವಿವಾರ (ಜ.21) ರಾತ್ರಿ ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಎಂಬ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಹುಮ್ನಾಬಾದ್ ನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿ ಅಪ್ಡೇಟ್​ ಮಾಡಲಾಗುತ್ತಿದೆ…