ಬೀದರ್: ಶಂಕು ಸ್ಥಾಪನೆಯಾಗಿ ವರ್ಷ ಉರುಳಿದರು ಅನುಭವ ಮಂಟಪದ (Anubhava mantapa) ಕಾಮಗಾರಿ ಇನ್ನೂ ಆರಂಭಿಸಿಲ್ಲ. ಉಪ ಚುನಾವಣೆಯ ಹೊಸ್ತಿಲಲ್ಲಿ ಇದ್ದಾಗ ಬಿಜೆಪಿ( BJP) ಸರ್ಕಾರ ಅನುಭವ ಮಂಟಪದ ಕಾಮಗಾರಿಯ ಶಂಕು ಸ್ಥಾಪನೆ ಮಾಡಿತ್ತು. ಜನವರಿ 6 ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ(b. s. yediyurappa) ಅನುಭವ ಮಂಟಪದ ಕಾಮಗಾರಿಯ ಶಂಕು ಸ್ಥಾಪನೆ ನೇರವೇರಿಸಿದ್ದರು. ಆದರೆ ವಿಶ್ವದ ಮೊದಲ ಸಂಸತ್ತಾದ ಅನುಭವ ಮಂಟಪದ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಇದು ಸಹಜವಾಗಿಯೇ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬಸವನಾಡು, ವಚನ ಕ್ರಾಂತಿಯ ಭೂಮಿ ಬಸವಕಲ್ಯಾಣದಲ್ಲಿ ಅಂದು ಉಪ ಚುನಾವಣಾ ಅಖಾಡವಾಗಿ ಜೋರಾಗಿತ್ತು. ಹೇಗಾದರೂ ಮಾಡಿ ಬಸವಕಲ್ಯಾಣದಲ್ಲಿ ಕಮಲ ಅರಳಿಸಲೇ ಬೇಕೆಂದು ಪಣತೊಟ್ಟಿದ್ದ ಬಿಜೆಪಿಯವರು ಬಸವಕಲ್ಯಾಣದಲ್ಲಿ 650 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುವುದಾಗಿ ಹೇಳಿ 6 ನೇ ಜನವರಿ 2021 ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅನುಭವ ಮಂಟಪದ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಿದರು. 25 ಎಕರೆ ಪ್ರದೇಶದಲ್ಲಿ, 650 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನೂರು ಅಡಿ ಸುತ್ತಳತೆಯ ಆರು ಅಂತಸ್ತು, ಜಗತ್ತಿನಲ್ಲೇ ದೊಡ್ಡದಾದ ಲಿಂಗಾಕಾರದ ಗೋಪುರದ ಅನುಭವ ಮಂಟಪ ನಿರ್ಮಾಣ ಮಾಡುವುದಾಗಿ ಹೇಳಿ ಶಂಕು ಸ್ಥಾಪನೆ ಸಹ ಮಾಡಿದರು. ಆದರೆ ವರ್ಷ ಕಳೆದರು ಇನ್ನೂ ಅನುಭವ ಮಂಟಪದ ಕಾಮಗಾರಿಯ ಕೆಲಸ ಆರಂಭವಾಗಿಲ್ಲ.
ಅನುಭವ ಮಂಟಪ ನಿರ್ಮಾಣಕ್ಕಾಗಿ ಗುರುತಿಸಿರುವ ಜಾಗವನ್ನು ಕೂಡಾ ಇನ್ನೂ ಭೂಸ್ವಾಧೀನ ಮಾಡಿಕೊಂಡಿಲ್ಲ. ಈಗಷ್ಟೇ ಅನುಭವ ಮಂಟಪದ ವಿಚಾರವನ್ನು ಕ್ಯಾಬಿನೇಟ್ಗೆ ತಂದಿದ್ದಾರೆ. ಇನ್ನೂ ಟೆಂಡರ್ ಕರೆದಿಲ್ಲ. ಇನ್ನೂ ಬಿಜೆಪಿ ಸರಕಾರ ಅನುಭವ ಮಂಟಪದ ಕಾಮಗಾರಿಗೆಯ ಸಲುವಾಗಿಯೇ 200 ಕೋಟಿ ರೂಪಾಯಿ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ. ಅದನ್ನು ಎಫ್ಡಿ ಸಹ ಮಾಡಿಲ್ಲ. ಹೀಗಾಗಿ ಇನ್ನೂರು ಕೋಟಿ ರೂಪಾಯಿ ಬಡ್ಡಿ ಏನಾಗಬೇಡ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪಕ್ಕೆ 200 ಕೋಟಿ ಅನುದಾನ ಒದಗಿಸಿದ್ದಾರೆ. ಆದರೆ, ಅನುಭವ ಮಂಟಪ ನಿರ್ಮಾಣಕ್ಕೆ 2021ರ ಜ.6ರಂದು ಶಿಲಾನ್ಯಾಸ ನೆರವೇರಿಸಿ ವರ್ಷ ಕಳೆದರೂ ಕಾಮಗಾರಿ ಪ್ರಾರಂಭಿಸಿಲ್ಲ. ಮಂಟಪದ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಬೇಕು. ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಕಾಮಗಾರಿಗೆ ಐಎಎಸ್ ಶ್ರೇಣಿಯ ಅಧಿಕಾರಿಯನ್ನು ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು ಎಂದು ಇಲ್ಲಿನ ಬಸವಾಭಿಮಾನಿಗಳು ಸರಕಾರಕ್ಕೆ ಒತ್ತಾಯಿಸುತ್ತಲೇ ಇದ್ದಾರೆ ಆದರೆ ಇನ್ನೂ ಅನುಭವ ಮಂಟಪದ ಕಾಮಗಾರಿ ಆರಂಭಿಸಿಲ್ಲ.
ಲಿಂಗಾಯರ ಮತಗಳನ್ನು ಸೇಳೆಯುವ ಉದ್ದೇಶದಿಂದ ಚುನಾವಣೆಯ ಹೊಸ್ತಲಲ್ಲಿ ತರಾತುರಿಯಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಿದರು. ಶಂಕುಸ್ಥಾಪನೆ ವೇಳೆ ಲಕ್ಷಾಂತರ ಜನರನ್ನು ಸೇರಿಸಿ ಒಂದೇ ವರ್ಷದಲ್ಲಿ ಅನುಭಮಂಟಪದ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆದುಕೊಂಡು ಬಂದು ಅನುಭವ ಮಂಟಪ ಉದ್ಘಾಟನೆ ಮಾಡಿಸುವುದಾಗಿ ಲಕ್ಷಾಂತರ ಜನರ ಮುಂದೆ ವಾಗ್ವಾದ ಮಾಡಿದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಇದರ ಬಗ್ಗೆ ಯಾರು ಕೂಡಾ ಮಾತನಾಡುತ್ತಿಲ್ಲ. ಇಂದು ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಬಸವಕಲ್ಯಾಣ ಉಪಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದರು ಅವರ ಸಮ್ಮುಖದಲ್ಲಿಯೇ ಯಡಿಯೂರಪ್ಪ ಸಹ ಅನಭವ ಮಂಟಪ ಕಾಮಗಾರಿಯನ್ನು ವರ್ಷದಲ್ಲಯೇ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಆದರೆ ಇನ್ನೂ ಅನುಭವ ಮಂಟಪದ ಕಾಮಗಾರಿ ಆರಂಭವೇ ಆಗಿಲ್ಲ. ಇನ್ನೂ ಈ ವಿಚಾರದ ಬಗ್ಗೆ ಬಸವಕಲ್ಯಾಣದ ಶಾಸಕರಾದ ಶರಣು ಸಲಗಾರ್ ಅವರನ್ನು ಕೇಳಿದರೆ ಶೀಘ್ರದಲ್ಲಿಯೇ ಅನುಭವ ಮಂಟಪದ ಕಾಮಗಾರಿ ಆರಂಭಿಸುವುದಾಗಿ ಹೇಳುತ್ತಿದ್ದಾರೆ.
ಜೀವಮಾನವಿಡಿ ಬಸವಾನುಯಾಯಿಯಾಗಿ ಅನುಭವ ಮಂಟಪಕ್ಕಾಗಿ ಸುಮಾರು ವರ್ಷಗಳ ಕಾಲ ಹೋರಾಡಿದ್ದ ನಾರಾಯಣರಾವ್ ಅವರ ಸಾವಿನಿಂದ ಎದುರಾದ ಉಪಚುನಾವಣೆ ಕಾರಣಕ್ಕಾಗಿ ಅನುಭವ ಮಂಟಪದ ಶಿಲಾನ್ಯಾಸ ನೆರವೇರಿರುವುದು ಮಾತ್ರ ಎಂತಹ ವಿಪರ್ಯಾಸ ಎಂಬ ಮಾತುಗಳು ಬಸವಕಲ್ಯಾಣ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಅನುಭವ ಮಂಟಪದ ಹೆಸರಿನಲ್ಲಿ ಗೆದ್ದು ಬೀಗಿದ ಬಿಜೆಪಿಯವರು ಇನ್ನೂ ಅನುಭವ ಮಂಟಪದ ಕಾಮಗಾರಿ ಆರಂಭಕ್ಕೆ ವಿಳಂಬ ಮಾಡಿದರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಬಸವಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ಅನುಭವ ಮಂಟಪಕ್ಕೆ 500ಕೋಟಿ.! ಎರಡೇ ವರ್ಷಗಳಲ್ಲಿ ಬಸವ ಕಲ್ಯಾಣದಲ್ಲಿ 12ನೇ ಶತಮಾನದ ಅನುಭವ ಮಂಟಪ ನಿರ್ಮಾಣ
ಅವನತಿಯ ಅಂಚಿನಲ್ಲಿ ಇತಿಹಾಸ ಪ್ರಶಿದ್ಧ ಬಸವಕಲ್ಯಾಣ ಕೋಟೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ