ಅವನತಿಯ ಅಂಚಿನಲ್ಲಿ ಇತಿಹಾಸ ಪ್ರಶಿದ್ಧ ಬಸವಕಲ್ಯಾಣ ಕೋಟೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

12ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ನಿರ್ಮಿಸಲಾದ ಈ ಕೋಟೆಯನ್ನು 115 ಎಕರೆ ಪ್ರದೇಶದಲ್ಲಿ ಕರಿ ಕಲ್ಲಿನಿಂದ ಕಟ್ಟಲಾಗಿದೆ. ಬಿಜ್ಜಳ ರಾಜಾ ಸೇರಿದಂತೆ ಹತ್ತಾರು ರಾಜಮಹರಾಜರು ಈ ಕೋಟೆಯನ್ನು ಆಳಿದ್ದಾರೆ. ವಿಶಾಲ ಪ್ರವೇಶ ದ್ವಾರ, ಪ್ರಾಂಗಣ, ಅಂತರ ಗೋಪುರಗಳನ್ನು ಹೊಂದಿದೆ. ಗೋಡೆಗಳು 150 ಅಡಿಗಳಷ್ಟು ಎತ್ತರವಾಗಿವೆ.

ಅವನತಿಯ ಅಂಚಿನಲ್ಲಿ ಇತಿಹಾಸ ಪ್ರಶಿದ್ಧ ಬಸವಕಲ್ಯಾಣ ಕೋಟೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ
ಬಸವಕಲ್ಯಾಣ ಕೋಟೆ
Follow us
| Updated By: preethi shettigar

Updated on: Oct 25, 2021 | 7:33 AM

ಬೀದರ್: ಜಿಲ್ಲೆಯ ಬಸವಕಲ್ಯಾಣದ ಸುಂದರ ಕೋಟೆ ಇಂದು ಅವನತಿಯತ್ತ ಸಾಗಿದೆ. ಅತ್ಯಂತ ಭದ್ರ ಹಾಗೂ ವಿಶಿಷ್ಟ ವಾಸ್ತು ಶಿಲ್ಪದ ಮೂಲಕ ತನ್ನದೇಯಾದ ಐತಿಹ್ಯ ಹೊಂದಿರುವ ಈ ಕೋಟೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಬಿಜ್ಜಳ ರಾಜನ ಆಡಳಿತದಲ್ಲಿ ಬಸವಣ್ಣನ್ನವರು ಮಂತ್ರಿಯಾಗಿ ಭವ್ಯತೆ ಮೇರೆದ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿದೆ. ಕೋಟೆ ತುಂಬೆಲ್ಲ ಮುಳ್ಳುಕಂಟಿಗಳಿಂದ ಆವರಿಸಿದ್ದು, ಅನೈತಿಕ ಚಟುವಟಿಕೆಯ ನೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ.

ಸಮಾನತೆ ತತ್ವದಡಿ ಕ್ರಾಂತಿಯ ಮೂಲಕ ಗುರುತಿಸಿಕೊಂಡ ಗುರು ಬಸವಣ್ಣನ ಕಾಯಕ ಭೂಮಿಯಾದ ಬಸವಕಲ್ಯಾಣ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎನ್ನುವ ಸರ್ಕಾರಗಳ ನಿರ್ಧಾರ ಕೇವಲ ಘೋಷಣೆಗೆ, ಭರವಸೆಗೆ ಮಾತ್ರ ಸೀಮಿತವಾಗಿದೆ. ಕರ್ನಾಟಕವನ್ನು ಆಳಿದ ಪ್ರಭಾವಶಾಲಿ ರಾಜ ಮನೆತನಗಳ ಅವಧಿಯಲ್ಲಿ ಅನೇಕ ಸ್ಮಾರಕಗಳನ್ನು ಸಾಂಸ್ಕೃತಿಕ ಕುರುಹುಗಳನ್ನಾಗಿಸಿ ಮುಂದಿನ ಪೀಳಿಗೆಗೆ ಉಳಿಸಿ ಹೋಗಿದ್ದಾರೆ. ಅದೇ ರೀತಿ ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಲಾದ ಕೋಟೆಯಲ್ಲಿ ಹತ್ತಾರು ರಾಜ ಮನೆತನಗಳು ಆಳಿವೆ. ಸದ್ಯ ಈ ಕೋಟೆ ಸೂಕ್ತ ರಕ್ಷಣೆ ಇಲ್ಲದೇ ಪಾಳುಬಿದ್ದು ಹಾಳಾಗುತ್ತಿದೆ.

ಕಳೆದ ಉಪಚುನಾವಣೆ ವೇಳೆ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ರಾಜಕಾರಣಿಗಳು ಬಸವಕಲ್ಯಾಣವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮಾಡುವುದಾಗಿ ಹೇಳಿದ್ದರು. ಆದರೆ, ವಾಸ್ತವದಲ್ಲಿ ಯಾರೊಬ್ಬರು ಕಲ್ಯಾಣ ನಾಡಿನ ಕುರುಹುಗಳನ್ನು ಸಂರಕ್ಷಿಸಲು, ಪ್ರವಾಸಿ ತಾಣವನ್ನಾಗಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಮುಂದೆ ಬರುತ್ತಿಲ್ಲ. ಪ್ರತಿ ವರ್ಷ ಬಸವಕಲ್ಯಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೂ ಕೋಟೆ ನೋಡುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ.

ಪ್ರತಿ ವರ್ಷ ಸರಾಸರಿ 30 ಸಾವಿರ ಪ್ರವಾಸಿಗರು ಕಲ್ಯಾಣಕ್ಕೆ ಭೇಟಿ ನೀಡುತ್ತಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿ ಕೋಟೆ ವೀಕ್ಷಿಸುತ್ತಿದ್ದಾರೆ. ಕೋಟೆ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವರಿಗೆ ತಲಾ 4 ರೂಪಾಯಿ, ಮಕ್ಕಳಿಗೆ 2 ರೂಪಾಯಿ ಟಿಕೆಟ್‌ ವ್ಯವಸ್ಥೆ ಮಾಡಿದ್ದು, ಪ್ರತಿವರ್ಷ ಸುಮಾರು ಒಂದು ಲಕ್ಷದವರೆಗೆ ಹಣ ಸಂಗ್ರಹ ಮಾಡಲಾಗುತ್ತಿದೆ. ಇಷ್ಟಾದರು ಕೂಡಾ ಕೊಟೆಯನ್ನು ಸ್ವಚ್ಚವನ್ನಾಗಿಡಲು ಆ ಹಣ ಬಳಕೆ ಮಾಡುತ್ತಿಲ್ಲ ಎಂದು ಬಸವಕಲ್ಯಾಣ ನಿವಾಸಿ ಶಿವಕುಮಾರ್ ತಿಳಿಸಿದ್ದಾರೆ.

ಈ ಕೋಟೆಯ ಒಳಗೆ ಬಾರುದ್‌ ಇಡುವ ಕೋಣೆ, ಕೈದಿಗಳ ಜೈಲು, ರಂಗ ಮಹಲ್‌, ತೋಪುಗಳು ನೋಡುಗರ ಗಮನ ಸೆಳೆಯುತ್ತವೆ. ಕೋಟೆ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ ನೀಡುವ ಗೈಡ್‌ಗಳಿಲ್ಲ. ಪ್ರವಾಸಿಗರು ಸುಮ್ಮನೆ ಒಂದು ಸುತ್ತುಹಾಕಿ ಮರಳಿ ಹೋಗುತ್ತಿದ್ದಾರೆ. ಗತಕಾಲದ ಇತಿಹಾಸ ತಿಳಿಸುವ ಕಾರ್ಯ ಇಲ್ಲಿ ನಡೆಯಬೇಕು ಎನ್ನುವುದು ಅನೇಕ ಪ್ರವಾಸಿಗರ ಅಭಿಪ್ರಾಯವಾಗಿದೆ.

ಕೋಟೆಯಲ್ಲಿ ಸ್ವತ್ಛತೆ ಕೊರತೆ ಇದೆ. ಕೋಟೆ ಆವರಣದಲ್ಲಿ ಗಿಡಮರಗಳು ಬೆಳೆದು ಅವಶೇಷಗಳು ಹಾಗೂ ಗೋಡೆಗಳು ಹಾಳಾಗುತ್ತಿದ್ದು, ಯಾವ ಸಂದರ್ಭದಲ್ಲಾದರೂ ಗೋಡೆ ಕುಸಿಯುವಂತೆ ಕಾಣುತ್ತಿವೆ. ಸರ್ಕಾರ ವಿಶೇಷ ಕಾಳಜಿ ವಹಿಸಿ ಪ್ರವಾಸಿ ತಾಣವನ್ನಾಗಿ ಬೆಳೆಸುವ ಜೊತೆಯಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ. ಕೋಟೆ ಆವರಣವನ್ನು ಸ್ವಚ್ಛಗೊಳಿಸಬೇಕು, ಉದ್ಯಾನ ಬೆಳೆಸಿ ಆಕರ್ಷಣೀಯ ತಾಣವಾಗಿಸಬೇಕು. ಗೈಡ್‌ ನೇಮಕ ಮಾಡಬೇಕು, ಸ್ಮಾರಕಗಳ ಸ್ಥಳದಲ್ಲಿ ಅವುಗಳ ಇತಿಹಾಸವಿರುವ ಫಲಕ ಹಾಕಬೇಕು ಎಂದು ಇಲ್ಲಿನ ಜನರು ಸಾಕಷ್ಟು ಸಲ ಜಿಲ್ಲಾಡಳಿತಕ್ಕೆ ಇಲ್ಲಿನ ಜನ ಪ್ರತಿನಿಧಿಗಳಿಗೆ ಹೇಳಿದರೂ ಯಾರು ಕೋಟೆಯ ಅಭಿವೃದ್ಧಿಯ ಬಗ್ಗೆ ಒಂದು ಮಾತುವೇತ್ತುತ್ತಿಲ್ಲ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.

12ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ನಿರ್ಮಿಸಲಾದ ಈ ಕೋಟೆಯನ್ನು 115 ಎಕರೆ ಪ್ರದೇಶದಲ್ಲಿ ಕರಿ ಕಲ್ಲಿನಿಂದ ಕಟ್ಟಲಾಗಿದೆ. ಬಿಜ್ಜಳ ರಾಜಾ ಸೇರಿದಂತೆ ಹತ್ತಾರು ರಾಜಮಹರಾಜರು ಈ ಕೋಟೆಯನ್ನು ಆಳಿದ್ದಾರೆ. ವಿಶಾಲ ಪ್ರವೇಶ ದ್ವಾರ, ಪ್ರಾಂಗಣ, ಅಂತರ ಗೋಪುರಗಳನ್ನು ಹೊಂದಿದೆ. ಗೋಡೆಗಳು 150 ಅಡಿಗಳಷ್ಟು ಎತ್ತರವಾಗಿವೆ. ಕೋಟೆಗಳು ಹಾಳಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಭವ್ಯ ಪರಂಪರೆಯನ್ನು ಪರಿಚಯಿಸುವ ಸ್ಥಳಗಳಾಗಬೇಕು ಎಂದು ಇಲ್ಲಿನ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಪುರಾತನ ಕೋಟೆಯನ್ನೋಮ್ಮೇ ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬರುತ್ತದೆ. ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರೀಯರಿಗೆ ನಿರಾಸೆ ಮೂಡಿಸಿದೆ. ಪುರಾತತ್ವ ಇಲಾಖೆಯ ಬೇಜವ್ದಾರಿತನ ಗ್ರಾಮಸ್ಥರ ನಿರ್ಲಕ್ಷ್ಯದಿಂದ ಕನ್ನಡ ನಾಡಿನ ಗತ ಇತಿಹಾಸವನ್ನು ಸಾರುವ ಕೋಟೆ ಇಂದು ತೆರೆಯ ಮರೆಯಲ್ಲಿ ಸರಿಯುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ. ಸ್ಥಳಿಯರಿಗೆ ಕೋಟೆ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಈ ಕೋಟೆ ಇಂದಿಗೂ ತನ್ನ ಗತವೈಭವವನ್ನು ಕಾಪಾಡಿಕೊಂಡು ಬಂದಿರುವುದೇ ಸೂಜಿಗದ ವಿಷಯ. ಇಂತಹ ಇತಿಹಾಸ ಸಾರುವ ಕೋಟೆಯನ್ನು ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ಕೋಟೆಯ ಜಿರ್ಣೋದ್ದಾರಕ್ಕೆ ಸೂಕ್ತ ಕ್ರಮ ಕೈಗೊಂಡು ಅದರ ಸಂರಕ್ಷಣೆಯತ್ತ ಗಮನಹರಿಸಿರುವುದು ಅಗತ್ಯವಾಗಿದೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:

ಕೆಂಪೇಗೌಡ ಪಾರ್ಕ್‌ನಲ್ಲಿ ಮತ್ತೊಂದು ಅವಘಡ: ಕೋಟೆ ಗೋಡೆ ಕುಸಿತ; 3 ವರ್ಷ ಹಿಂದಷ್ಟೇ ಬಿಬಿಎಂಪಿ ನಿರ್ಮಿಸಿದ್ದ ಗೋಡೆ ಇದು

ಬಸವ ಕಲ್ಯಾಣ ಐತಿಹಾಸಿಕ ಮಹತ್ವದ ಉಮಾ ಮಹೇಶ್ವರಿ ದೇವಸ್ಥಾನ ಇತಿಹಾಸ ಪುಟ ಸೇರುವಂತಾಗಿರುವುದಕ್ಕೆ ಸರ್ಕಾರವೇ ಕಾರಣ!

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ