
ಬೆಂಗಳೂರು, ಡಿಸೆಂಬರ್ 27: ಶಿಕ್ಷಕರ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಇತ್ತೀಚೆಗೆ ಮುಂದಾಗಿತ್ತು. ಇದೀಗ ಆರೋಗ್ಯ ಇಲಾಖೆ (Health Department) ಸರದಿ. ವೈದ್ಯರ ವಿಲೀನ ಪ್ರಕ್ರಿಯೆಗೆ ಆರೋಗ್ಯ ಇಲಾಖೆ ಕೈ ಹಾಕಿದ್ದು, 270 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು (doctors) ತಾಲೂಕಾಸ್ಫತ್ರೆಗೆ ಸ್ಥಳಾಂತರಿಸುವುದಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಆ ಮೂಲಕ ರಾಜ್ಯದ ಜನರಿಗೆ ಆರೋಗ್ಯ ಇಲಾಖೆ ಬಿಗ್ ಶಾಕ್ ನೀಡಿದೆ.
ಕರ್ನಾಟಕದಲ್ಲಿ ಸುಮಾರು 270ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಈ ಆಸ್ಫತ್ರೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯಕೀಯ ಸೇವೆಗಳು ಸಿಗುತ್ತಿವೆ. ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತಿತ್ತು. ಆದರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಆಗುತ್ತಿವೆ.
ಇದನ್ನೂ ಓದಿ: ಕೊವಿಡ್ನಂತೆ ಆತಂಕ ಸೃಷ್ಟಿಸಿದ ILI-ಸಾರಿ ಕೇಸ್ ಏರಿಕೆ: ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ
ಯಾವ ಆಸ್ಫತ್ರೆಗಳಲ್ಲಿ 30ಕ್ಕಿಂತ ಕಡಿಮೆ ಹೆರಿಗೆ ಆಗಿವೆ ಅಂತಹ ಆಸ್ಫತ್ರೆಗಳಲ್ಲಿ ಅನಸ್ತೇಶಿಯಾ ವೈದ್ಯರು, ಮಕ್ಕಳ ವೈದ್ಯರು ಮತ್ತು ಹೆರಿಗೆ ವೈದ್ಯರನ್ನು ತಾಲೂಕು ಆಸ್ಫತ್ರೆಗಳಿಗೆ ಸ್ಥಳಾಂತರ ಮಾಡಲು ಮುಂದಾಗಿದೆ. ಈಗಾಗಲೇ ಎಲ್ಲಾ ಆಸ್ಪತ್ರೆಗಳ ತಿಂಗಳ ಹೆರಿಗೆಯಾಗುವ ವರದಿಯನ್ನು ಸಿದ್ಧಪಡಸಿ ವೈದ್ಯರ ಶಿಫ್ಟ್ಗೆ ಆರೋಗ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಇನ್ಮುಂದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಡಾಕ್ಟರ್, ಹೆರಿಗೆ ವೈದ್ಯರು, ಅನಸ್ತೇಶಿಯಾ ವೈದ್ಯರು ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಣ್ಣ ಬಣ್ಣದ ಕೇಕ್ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!
ಆರೋಗ್ಯ ಇಲಾಖೆ ಈಗಾಗಲೇ ರಾಜ್ಯದಲ್ಲಿ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿದೆ. ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್, ಜನರಲ್ ಮೆಡಿಸಿನ್ ವೈದ್ಯರು ಪಟ್ಟಿಯಲ್ಲಿದ್ದಾರೆ. ಆ ಮೂಲಕ ಕಡಿಮೆ ಕಾರ್ಯಕ್ಷಮತೆಯ ಆಸ್ಪತ್ರೆಯಿಂದ ವೈದ್ಯರ ಎತ್ತಗಂಡಿಗೆ ಮುಂದಾಗಿದೆ. 270 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನ ತಾಲೂಕು ಆಸ್ಫತ್ರೆಗಳಿಗೆ ಶಿಫ್ಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.