ಹುಬ್ಬಳ್ಳಿ ಗಾಳಿಪಟ ಉತ್ಸವದಲ್ಲಿ ಬಿಗ್ ಬಾಸ್ ವಿಜೇತ ಹನುಮಂತ, ಕರತಾಡನ ಮತ್ತು ಶಿಳ್ಳೆಯೊಂದಿಗೆ ಸ್ವಾಗತ!
ವರದಿಗಳ ಪ್ರಕಾರ ಬಿಗ್ ಬಾಸ್ ಸೀಸನ್ 11 ನಡೆಯುತ್ತಿದ್ದಾಗ ಹನುಮಂತಗೆ ಅತಿಹೆಚ್ಚು ವೋಟು ಉತ್ತರ ಕರ್ನಾಟಕ ಭಾಗದಿಂದ ಲಭ್ಯವಾಗಿವೆ. ಹಾಗಂತ ದಕ್ಷಿಣ ಮತ್ತು ಮಧ್ಯ ಕರ್ನಾಟಕದವರು ಅವರಿಗೆ ವೋಟು ನೀಡಿಲ್ಲ ಅಂತೇನೂ ಇಲ್ಲ. ಸಮಗ್ರ ಕರ್ನಾಟಕದ ಜನತೆ ಅವರನ್ನು ವೋಟು ನೀಡಿ ಪ್ರೋತ್ಸಾಹಿಸಿದೆ. ವೇದಿಕೆಯ ಮೇಲಿಂದ ಹನುಮಂತ ತನಗೆ ವೋಟು ಮಾಡಿದ ಜನತೆಗೆ ಧನ್ಯವಾದ ಸಲ್ಲಿಸುತ್ತಾರೆ.
ಹುಬ್ಬಳ್ಳಿ: ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿನ್ನರ್ ಹಾವೇರಿಯ ಹನುಮಂತ ಎಷ್ಟು ಮಾತ್ರಕ್ಕೂ ಬದಲಾಗಿಲ್ಲ ಮಾರಾಯ್ರೇ. ದುಡ್ಡು, ಖ್ಯಾತಿ ಮತ್ತು ಜನಪ್ರಿಯತೆ ಅವರನ್ನು ಮತ್ತು ಅವರ ವ್ಯಕ್ತಿತ್ವವನ್ನು ಬದಲಿಸಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕನ್ನಡಿಗರು ನೋಡುತ್ತಿದ್ದ ಅಮಾಯಕ ಮತ್ತು ಮುಗ್ಧ ಉತ್ತರ ಕರ್ನಾಟಕದ ಹುಡುಗ ನಿನ್ನೆ ಹುಬ್ಬಳ್ಳಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲೂ ಥೇಟ್ ಹಾಗೆಯೇ ಕಂಡರು. ಅದೇ ಲುಂಗಿ ಅದೇ ಅಂಗಿ! ಕ್ರಾಪು ಕೂಡ ಹಾಗೆಯೇ ಇದೆ. ಅವರು ವೇದಿಕೆಯ ಮೇಲೆ ಕಂಡಕೂಡಲೆ ಜನರಿಂದ ಚಪ್ಪಾಳೆ, ಶಿಳ್ಳೆ, ಕೇಕೆ. ಹನುಮಂತ ಹಾಡನ್ನು ಹೇಳಿ ನೆರೆದಿದ್ದ ಜನರನ್ನು ರಂಜಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ; ಪಟ ಹಾರಿಸಿ ಮೆರಗು ಹೆಚ್ಚಿಸಿದ ಸಚಿವ ಪ್ರಹ್ಲಾದ ಜೋಶಿ
Published on: Feb 22, 2025 10:22 AM
Latest Videos