AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iphone: ಬೆಂಗಳೂರಿಗೆ ಬರಲಿದೆ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: ಸಚಿವ ಅಶ್ವಿನಿ ವೈಷ್ಣವ್

ಭಾರತದಲ್ಲಿ ಆಪಲ್ ಐಫೋನ್ ಉತ್ಪಾದಿಸುವ ಅತಿದೊಡ್ಡ ಘಟಕವು ಬೆಂಗಳೂರಿನ ಹೊಸೂರು ಬಳಿ ಬರಲಿದೆ, ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ.

Apple iphone: ಬೆಂಗಳೂರಿಗೆ ಬರಲಿದೆ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: ಸಚಿವ ಅಶ್ವಿನಿ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Nov 16, 2022 | 10:29 AM

Share

ಭಾರತದಲ್ಲಿ ಆಪಲ್ ಐಫೋನ್ ಉತ್ಪಾದಿಸುವ ಅತಿದೊಡ್ಡ ಘಟಕವು ಬೆಂಗಳೂರಿನ ಹೊಸೂರು ಬಳಿ ಬರಲಿದೆ, ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ. ಜಂಜಾಟಿಯಾ ಗೌರವ್ ದಿವಸ್ ಸಮಾರಂಭದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ರಾಂಚಿ ಮತ್ತು ಹಜಾರಿಬಾಗ್ ಬಳಿ ವಾಸಿಸುವ ಆರು ಸಾವಿರ ಬುಡಕಟ್ಟು ಮಹಿಳೆಯರಿಗೆ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಹೇಳಿದರು.

“Apple’s iPhone ಈಗ ಭಾರತದಲ್ಲಿ ತಯಾರಾಗುತ್ತಿದೆ ಮತ್ತು ಇದನ್ನು ಬೆಂಗಳೂರಿನ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಒಂದೇ ಕಾರ್ಖಾನೆಯಲ್ಲಿ 60,000 ಜನರು ಕೆಲಸ ಮಾಡುತ್ತಾರೆ. ಈ 60,000 ಉದ್ಯೋಗಿಗಳಲ್ಲಿ ಮೊದಲ 6,000 ಉದ್ಯೋಗಿಗಳು ರಾಂಚಿ ಮತ್ತು ಹತ್ತಿರದ ನಮ್ಮ ಬುಡಕಟ್ಟು ಮಹಿಳೆಯರಿಗೆ ಹಾಗೂ ಹಜಾರಿಬಾಗ್ ಬುಡಕಟ್ಟು ಮಹಿಳೆಯರಿಗೆ ಆಪಲ್ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಇದನ್ನು ಓದಿ:5G Technology In India: ಭಾರತದಲ್ಲಿ ಸದ್ಯದಲ್ಲೇ 5G ಸಂಪರ್ಕ ಸೇವೆ ಲಭ್ಯ!

ಹೊಸೂರಿನಲ್ಲಿ ಸ್ಥಾವರವನ್ನು ಹೊಂದಿರುವ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ಐಫೋನ್ ಆವರಣಗಳ ತಯಾರಿಕೆಯನ್ನು ಆಪಲ್ ಹೊರಗುತ್ತಿಗೆ ನೀಡಿದೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮಿಗಳಾದ ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ತಯಾರಿಸಿದ ಐಫೋನ್‌ಗಳನ್ನು ಕಂಪನಿಯು ಪಡೆಯುತ್ತದೆ ಎಂದು ಹೇಳಿದರು.