ಮಂಡ್ಯ: ‘40% ದಂಧೆ ಮಾಡೋಕೆ ಅವರು ಮಂತ್ರಿಯಲ್ಲ, ದುಡ್ಡಿಗೆ ಸರಿಯಾದ ದಾಖಲೆ ನೀಡಿದ್ರೆ ನಮ್ಮ ನಿಮ್ಮ ಮಾತುಗಳು ಬಂದ್ ಆಗುತ್ತೆ. ನಾವು ಅದರ ಬಗ್ಗೆ ಕಮೆಂಟ್ ಮಾಡೋಕೆ ಅಗಲ್ಲ, ಶಾಸಕರು, ಸಿಎಂ ಯಾಕೆ ರಾಜೀನಾಮೆ ಕೊಡಬೇಕು. ಅವರ ಮಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಎಸಿಬಿಯಲ್ಲಿ ಒಬ್ಬ ಆಫೀಸರ್ ಆಗಿದ್ದು, ದುಡ್ಡು ತೆಗೆದುಕೊಂಡಿದ್ದಾನೆ ಅದರ ಮುಂದಿನ ಪರಿಣಾಮ ಅವನು ಎದುರಿಸುತ್ತಾನೆ ಎಂದು ಸಚಿವ ಮಾಧುಸ್ವಾಮಿ(J.C Madhuswamy) ಹೇಳಿದರು.
ಬಿಜೆಪಿ ಶಾಸಕನ ಮಗನ ಮನೆಯಲ್ಲಿ ಕೋಟಿಗಟ್ಟಲೇ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಹುಲಿಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ‘ವಿರೂಪಾಕ್ಷಪ್ಪನ ಮಗ ಎಸಿಬಿಯಲ್ಲಿ ಒಬ್ಬ ಆಫೀಸರ್, ಅವನು ಲಂಚ ತೆಗೆದುಕೊಂಡರೆ ವಿರೂಪಾಕ್ಷಪ್ಪ ಏನು ಮಾಡುತ್ತಾರೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ ಹಾಕಬೇಕು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್‌ನವರಿಗೆ ಏನು ಇಲ್ಲ, ಏನಾದ್ರು ಸಿಕ್ಕಿದರೆ ದೊಡ್ಡದು ಮಾಡಿಕೊಂಡು ಹೋಗ್ತಾರೆ, ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಎನ್ನೊಕೆ ಆಗಲ್ಲ, ಮೊದಲು ಭ್ರಷ್ಟಾಚಾರ ಸಾಬೀತು ಆಗಬೇಕು. ಹಣ ಕೊಟ್ಟವರು, ತೆಗೆದುಕೊಂಡವರು ಎಲ್ಲಾ ಹೇಳಿಕೆ ತೆಗೆದುಕೊಳ್ಳಬೇಕು. ದುಡ್ಡಿಗೆ ದಾಖಲೆ ಸರಿಯಾಗಿ ಇದ್ರೆ ನಮ್ಮ ನಿಮ್ಮ ಮಾತುಗಳು ಬಂದ್ ಆಗುತ್ತೆ ಎಂದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Fri, 3 March 23