ಬಿಜೆಪಿಯವರು ಪ್ರತಿಯೊಂದು ಸ್ಟೇಷನ್​​ಗಳನ್ನು ಹರಾಜಿಗಿಟ್ಟಿದ್ದಾರೆ: ಸಚಿವ ಕೃಷ್ಣ ಭೈರೇಗೌಡ

ಬಿಜೆಪಿಯವರು ಪ್ರತಿಯೊಂದು ಸ್ಟೇಷನ್​ನನ್ನೂ ಹರಾಜಿಗಿಟ್ಟಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಪ್ರತಿಯೊಂದು ಸ್ಟೇಷನ್​​ಗಳನ್ನು ಹರಾಜಿಗಿಟ್ಟಿದ್ದಾರೆ: ಸಚಿವ ಕೃಷ್ಣ ಭೈರೇಗೌಡ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 29, 2022 | 6:32 PM

ಬೆಂಗಳೂರು: ಬಿಜೆಪಿಯವರು ಪ್ರತಿಯೊಂದು ಸ್ಟೇಷನ್​ನನ್ನೂ ಹರಾಜಿಗಿಟ್ಟಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಕೃಷ್ಣ ಭೈರೇಗೌಡ ನನ್ನ ಕ್ಷೇತ್ರದಲ್ಲಿ ಒಂದೇ ಸ್ಟೇಷನ್​ನಲ್ಲಿ 4 ಇನ್ಸ್​ಪೆಕ್ಟರ್​​ಗಳು​ ಸಸ್ಪೆಂಡ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಾಲ್ಕು ಇನ್ಸ್​​ಪೆಕ್ಟರ್​ಗಳು ಟ್ರ್ಯಾಪ್​ ಕೇಸ್​​ನಲ್ಲಿ ಸಿಲುಕಿಕೊಂಡಿದ್ದಾರೆ. ಚಿಕ್ಕಜಾಲ ಸ್ಟೇಷನ್​​ನಲ್ಲಿ 4 ಇನ್ಸ್​ಪೆಕ್ಟರ್​​ಗಳು ಈ ಟ್ರ್ಯಾಪ್​ ಕೇಸ್​​ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಅಸ್ತ್ರ ಪ್ರಯೋಗ

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದೆ. ಪೊಲೀಸ್ ಇಲಾಖೆ ಭ್ರಷ್ಟಾಚಾರ ಅನಾವರಣಕ್ಕೆ ಹೇಳಿಕೆಯೇ ಅಸ್ತ್ರ ಮಾಡಿಕೊಂಡಿದೆ. ಸಚಿವ ಎಂಟಿಬಿ ನಾಗರಾಜ್ ಹೇಳಿಕೆಯೇ ಕೈಪಡೆಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಪೋಸ್ಟಿಂಗ್‌ಗೆ 70 ಲಕ್ಷ ಲಂಚ ನೀಡಿದೆ ಎಂದು ಸಚಿವ ಎಂಟಿಬಿ ಹೇಳಿಕೆ ಇದೀಗ ಸರ್ಕಾರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಎಂಟಿಬಿ ಹೇಳಿಕೆ ಮುಂದಿಟ್ಟುಕೊಂಡು ಕೈ ಪಾಳಯ ಹೋರಾಟಕ್ಕೆ ಮುಂದಾದಗಿದೆ.

ಸಸ್ಪೆಂಡ್‌ ಆಗಿದ್ದ ಕೆ.ಆರ್.ಪುರಂ ಪಿಐ ನಂದೀಶ್ ಸಾವು ಕೇಸ್‌ ಹಾಗೂ ಸಚಿವ ಎಂಟಿಬಿ ಹೇಳಿಕೆ ಜನರ ಮುಂದಿಡಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ಗೃಹ ಇಲಾಖೆಯ ಭ್ರಷ್ಟಾಚಾರ ಮತ್ತು ಹಿರಿಯ ಅಧಿಕಾರಿಗಳಿಗೆ ನೀಡುತ್ತೀರುವ ಕಿರುಕುಳ ಬಗ್ಗೆ ಜನರ ಮುಂದೆ ಪ್ರಸ್ತಾಪಿಸಲು ಕಾಂಗ್ರೆಸ್‌ ನಾಯಕರ ತೀರ್ಮಾನ ಮಾಡಿದ್ದಾರೆ.

ಈ ಹಿಂದೆ ಪಿಎಸ್ಐ ಅಕ್ರಮ ನೇಮಕಾತಿ ವಿಚಾರದ ಬಗ್ಗೆ ಹೋರಾಟ ಮಾಡುವುದಾಗಿಯು ಹೇಳಿಕೊಂಡಿದೆ. ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಿ ಯಶಸ್ವಿಯಾಗಿತ್ತು. ಸದನದೊಳಗೆ, ಸದನದ ಹೊರಗೆ ನಿರಂತರ ಹೋರಾಟವನ್ನು ಕೈ ಮಾಡಿತ್ತು.

ಸಿಎಂಗೆ ತಾಕತ್​ ಇದ್ದರೆ ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲಿ: ರಾಮಲಿಂಗಾರೆಡ್ಡಿ

ಸಚಿವ ಎಂಟಿಬಿ ನಾಗರಾಜ್ ಪಿಐ​ ನಂದೀಶ್ ಹಣಕೊಟ್ಟು ಟ್ರಾನ್ಸ್​​ಫರ್​ ಆಗಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಸ್​​ಪೆಕ್ಟರ್​ ನಂದೀಶ್​ ಸಾವಿನ ಬಗ್ಗೆ ಎಂಟಿಬಿ ಮಾತನಾಡಿದ್ದಾರೆ. 70ರಿಂದ 80 ಲಕ್ಷ ಹಣ ಕೊಟ್ಟಿದ್ದಾರೆ ಎಂದು ಎಂಟಿಬಿ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮೊದಲಿನಿಂದಲೂ ಹೇಳುತ್ತಿದ್ದೆವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಎಂಟಿಬಿ ಮಾತಿನಿಂದ ಸಾಬೀತಾಗಿದೆ. ಎಂಟಿಬಿ ನಾಗರಾಜ್​ ಮನಸ್ಸಿನಲ್ಲಿ ಇರುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂಗೆ ತಾಕತ್​ ಇದ್ದರೆ ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲಿ, ಎಲ್ಲ ಇಲಾಖೆಗಳ ರೇಟ್​ ಕಾರ್ಡ್​​ ಬಹಿರಂಗಪಡಿಸಿ ಎಂದು ರಾಮಲಿಂಗಾರೆಡ್ಡಿ ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ್ದಾರೆ.

70-80 ಲಕ್ಷದ ಬಗ್ಗೆ ಮಾತನಾಡಿದವರ ಬಳಿ ರಾಜೀನಾಮೆ ಪಡೆಯಿರಿ. 70ರಿಂದ 80 ಲಕ್ಷ ಹಣ ಯಾರಿಗೆ ಸೇರಿದೆ ಎಂಬ ಸ್ಪಷ್ಟನೆ ಸಿಗಬೇಕು. ಸಿಎಂ ಅಥವಾ ಗೃಹ ಸಚಿವರಿಗೆ ಹಣ ತಲುಪಿರುವ ಬಗ್ಗೆ ಸ್ಪಷ್ಟನೆ ಸಿಗಲಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ .

Published On - 6:32 pm, Sat, 29 October 22

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು