Muruga Sharan: ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ: 4ನೇ ಆರೋಪಿ ಬಂಧನ
ಶಿವಮೂರ್ತಿ ಮುರುಘಾ ಶರಣರ (Murugha Mutt Seer) ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 4ನೇ ಆರೋಪಿ ಪರಮಶಿವಯ್ಯ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ (Murugha Mutt Seer) ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 4ನೇ ಆರೋಪಿ ಪರಮಶಿವಯ್ಯ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಕೇಸ್ ಬಗ್ಗೆ ತನಿಖೆ ನಡೆಸುತ್ತಿರವ ಪೊಲೀಸ್ ಅಧಿಕಾರಿಗಳು 4ನೇ ಆರೋಪಿ ಮುರುಘಾಮಠದ ಕಾರ್ಯದರ್ಶಿ ಪರಮಶಿವಯ್ಯ ಬಂಧನ ಮಾಡಲಾಗಿದೆ.
ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಪೊಲೀಸರು 4ನೇ ಆರೋಪಿ ಪರಮಶಿವಯ್ಯ ಹಾಜರು ಪಡಿಸಿದ್ದಾರೆ. ಪರಮಶಿವಯ್ಯ ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಆರೋಪಿಗೆ ಬ್ರೈನ್ ಟ್ಯೂಮರ್ ಹಿನ್ನೆಲೆ ಇರುವ ಕಾರಣ ವೈದ್ಯಕೀಯ ಸೌಲಭ್ಯ ಮತ್ತು ಸೂಕ್ತ ಆಹಾರ ಸೌಲಭ್ಯವನ್ನು ನೀಡುವಂತೆ ಆರೋಪಿ ಪರ ವಕೀಲರ ಮನವಿ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ವೈದ್ಯಕೀಯ ಸೌಲಭ್ಯ, ಆಹಾರ ಒದಗಿಸಲು ಕೋರ್ಟ್ ಸೂಚನೆ ನೀಡಿದೆ.
ಇದನ್ನು ಓದಿ: ಪೊಲೀಸರಿಂದ ಮುರುಘಾ ಶರಣರ ವಿಶ್ರಾಂತಿ ಕೋಣೆಯ ಮಹಜರು, ಮೈಸೂರಿನಿಂದ ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರು
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ (ಅ 27) ಸ್ವಾಮೀಜಿ ವಿರುದ್ಧ 694 ಪುಟಗಳ ಆರೋಪಪಟ್ಟಿಯನ್ನು (POCSO Chargesheet) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರು ದಾಖಲಾಗಿ 2 ತಿಂಗಳಾದ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ತನಿಖೆಯೂ ಚುರುಕುಗೊಂಡಿದೆ. ಇದೀಗ 4ನೇ ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಬಳಸುತ್ತಿದ್ದ ಕಚೇರಿ ಹಾಗೂ ವಿಶ್ರಾಂತಿ ಕೊಠಡಿಗಳಿಗೆ ಇಂದು (ಅ 28) ಪೊಲೀಸರು ಭೇಟಿ ನೀಡಿ ಮಹಜರು ಮಾಡಿದರು. ಎರಡೂ ಕೊಠಡಿಗಳ ಕೀಲಿಯನ್ನು ಬಸವಪ್ರಭು ಸ್ವಾಮೀಜಿ ಪೊಲೀಸರಿಗೆ ಕೊಟ್ಟು, ತನಿಖೆಗೆ ಸಹಕರಿಸಿದರು. ಶಿವಮೂರ್ತಿ ಶರಣರ ವಿರುದ್ಧ ಆಗಸ್ಟ್ 26ರಂದು ಮೊದಲ ಪೋಕ್ಸೋ ಪ್ರಕರಣ ಮೈಸೂರಿನ ನಜರ್ಬಾದ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನು ಆ 27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸೆ 1ರಂದು ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿದ್ದಾರೆ.