ತುಮಕೂರು: ಶಾಲೆಯಿಂದ ವಾಪಸ್ ಆಗುತ್ತಿದ್ದ ಮೂವರು ಮಕ್ಕಳ ಅಪಹರಣಕ್ಕೆ ಯತ್ನ, ಪೊಲೀಸರಿಂದ ಶೋಧ
ಶಾಲೆ ಮುಗಿಸಿಕೊಂಡು ವಾಪಸ್ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಅಪರಿಚಿತರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ.

ತುಮಕೂರು: ರಾಜ್ಯದ ತುಂಬೆಲ್ಲ ಮಕ್ಕಳ ಕಳ್ಳರ ಸುದ್ದಿ ಹಬ್ಬಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ. ಇದರ ಮಧ್ಯೆ ಶಾಲೆಯಿಂದ ವಾಪಸ್ಸಾಗುತಿದ್ದ ಮೂವರು ಮಕ್ಕಳನ್ನು ಅಪರಿಚಿತರು ಅಪಹರಣ(kidnap) ಮಾಡಲು ಯತ್ನಿಸಿದ ಘಟನೆ ತುಮಕೂರು(Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳ್ಳಾರ ಮೇಲಿನ ಗೊಲ್ಲರಹಟ್ಟಿಯಲ್ಲಿ ಘಟನೆ.
ಇಂದು(ಅ.29) ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮೂವರು ಮಕ್ಕಳನ್ನು ಕಾರಿನಲ್ಲಿ ಬಂದ ಅಪರಿಚಿತರು, ಅಪಹರಣಕ್ಕೆ ಯತ್ನಿಸಿದ್ದಾರೆ. ಕಾರಿಗೆ ಹತ್ತಿಸುತ್ತಿದ್ದ ವೇಳೆ ಮಕ್ಕಳು ಕಿರುಚಾಡಿದ್ದಾರೆ. ಮಕ್ಕಳ ಕೂಗಾಟದಿಂದ ಭಯಗೊಂಡ ಕಿಡ್ನಾಪರ್ಸ್ ಮಕ್ಕಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ರಶ್ಮಿಕಾ, ಲೋಹಿತ್, ಹರ್ಷಿತಾಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಅಪಹರಣಕಾರರು ಈಗಾಗಲೇ ಮೂವರನ್ನು ಕೈ, ಕಾಲು ಕಟ್ಟಿ, ಬಾಯಿ ಮುಚ್ಚಿಸಿ ಕಾರಿನಲ್ಲಿರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹುಳಿಯಾರು ಪೊಲೀಸರು ಅಪಹರಣಕಾರರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಇನ್ನೊಂದೆಡೆ ಗ್ರಾಮದಲ್ಲಿ ಇದೀಗ ಮಕ್ಕಳ ಕಳ್ಳರ ಆತಂಕ ಮನೆ ಮಾಡಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ