AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪು ಚರಿತ್ರೆಯನ್ನೇ ಬದಲಾಯಿಸ್ತೀರಾ? ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಾಗಲಕೋಟೆ: ಟಿಪ್ಪು ಚರಿತ್ರೆಯನ್ನು ಶಾಲಾ ಪಠ್ಯದಿಂದ ತೆಗೆದರೆ ಇತಿಹಾಸವನ್ನೇ ತಿರುಚಿದಂತೆ. ಟಿಪ್ಪು ಮತಾಂಧ ಎಂದು ಬಿಜೆಪಿಯವರು ಮಾತ್ರ ಕರೀತಾರೆ. ಆದ್ರೆ ಬಿಜೆಪಿಯವರೇ ಮತಾಂಧರು ಎಂದು ಜಮಖಂಡಿ ಪಟ್ಟಣದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳಾ, ನಿಜಾನಾ? ಬಿಜೆಪಿಯವರು ಚರಿತ್ರೆಯನ್ನೇ ಬದಲಾವಣೆ ಮಾಡುತ್ತಾರಾ? ಯಾರೂ ಸಹ ಇತಿಹಾಸ ತಿರುಚಲು ಹೋಗಬಾರದು. ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಮೊದಲು ಸಂತ್ರಸ್ತರಿಗೆ ಪರಿಹಾರ ನೀಡಲಿ: ಇದೇ […]

ಟಿಪ್ಪು ಚರಿತ್ರೆಯನ್ನೇ ಬದಲಾಯಿಸ್ತೀರಾ? ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಸಾಧು ಶ್ರೀನಾಥ್​
|

Updated on: Oct 30, 2019 | 2:55 PM

Share

ಬಾಗಲಕೋಟೆ: ಟಿಪ್ಪು ಚರಿತ್ರೆಯನ್ನು ಶಾಲಾ ಪಠ್ಯದಿಂದ ತೆಗೆದರೆ ಇತಿಹಾಸವನ್ನೇ ತಿರುಚಿದಂತೆ. ಟಿಪ್ಪು ಮತಾಂಧ ಎಂದು ಬಿಜೆಪಿಯವರು ಮಾತ್ರ ಕರೀತಾರೆ. ಆದ್ರೆ ಬಿಜೆಪಿಯವರೇ ಮತಾಂಧರು ಎಂದು ಜಮಖಂಡಿ ಪಟ್ಟಣದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳಾ, ನಿಜಾನಾ? ಬಿಜೆಪಿಯವರು ಚರಿತ್ರೆಯನ್ನೇ ಬದಲಾವಣೆ ಮಾಡುತ್ತಾರಾ? ಯಾರೂ ಸಹ ಇತಿಹಾಸ ತಿರುಚಲು ಹೋಗಬಾರದು. ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಮೊದಲು ಸಂತ್ರಸ್ತರಿಗೆ ಪರಿಹಾರ ನೀಡಲಿ: ಇದೇ ವೇಳೆ ಮಾತನಾಡಿದ ಅವರು, ಮೊದಲು ಬಿ.ಎಸ್.ಯಡಿಯೂರಪ್ಪ ಪ್ರವಾಹ ಸಂತ್ರಸ್ತರನ್ನು ಮಾತನಾಡಿಸಲಿ. ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆಯಾ ಎಂದು ಕೇಳಲಿ. ಬೆಳೆ ಪರಿಹಾರ, ಮನೆ ಪರಿಹಾರ, ಬಿದ್ದ ಅಂಗಡಿಗೆ ಪರಿಹಾರ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯವರು ಪರಿಹಾರ ಕೊಟ್ಟಿದ್ದೇವೆ ಅಂತ ಸುಳ್ಳು ಹೇಳುತ್ತಿದ್ದಾರೆ. ಸೂಕ್ತ ಪರಿಹಾರ ಕೊಡದಿದ್ದರೆ ಮುಂದೆ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ಭವಿಷ್ಯ ಹೇಳ್ತಾರಾ? ಅವರು ಪುರೋಹಿತರಾ? ಪಂಚಾಂಗ ಓದುತ್ತಾರಾ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಶಾಶ್ವತವಾಗಿ ವಿರೋಧ ಪಕ್ಷದ ನಾಯಕರಾಗಿರ್ತಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Follow Us
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!