ಬೆಂಗಳೂರು: ಕಳಂಕಿತರಿಂದ ಉತ್ತರ ಪಡೆಯುವುದಿಲ್ಲವೆಂದು ಸದನದ ಸಮಯವನ್ನು ಹಾಳುಗೆಡವಿದ ಕಾಂಗ್ರೆಸ್ ನಾಯಕರೇ, ಸಂತ್ರಸ್ಥೆಯೇ ಹೇಳಿದಂತೆ, ಷಡ್ಯಂತ್ರದ ಭಾಗವಾಗಿರುವ ಡಿ.ಕೆ. ಶಿವಕುಮಾರ್ ಮಾಡಿರುವ ಘನಂದಾರಿ ಕೆಲಸವನ್ನು ಸಮರ್ಥಿಸುತ್ತೀರಾ? ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಭಾರತೀಯ ಜನತಾ ಪಕ್ಷವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಟ್ವೀಟ್ ದಾಳಿ ನಡೆಸಿದೆ.
ಇಂಥಹ ಹೀನ ಕೆಲಸ ನಿರ್ವಹಣೆ ಮಾಡುವುದಕ್ಕೆ ಕೆಪಿಸಿಸಿಯಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿದೆಯಾ? ಎಂದೂ ಕೇಳಿರುವ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಸರಣಿ ಟ್ವೀಟ್ಗಳಲ್ಲಿ ವಿರೋಧಿಸಿದೆ. ಇದೀಗಷ್ಟೇ ಸಿಡಿಯಲ್ಲಿದ್ದ ಯುವತಿಯ ಪೋಷಕರು ಮತ್ತು ಸಹೋದರರ ತನಿಖೆ ನಡೆದಿದೆ. ಎಸ್ಐಟಿ ಅಧಿಕಾರಿಗಳು ಸಿಡಿ ಲೇಡಿ ಪೋಷಕರನ್ನು ವಿಚಾರಣೆ ನಡೆಸಿದ್ದಾರೆ.
ಕಳಂಕಿತರಿಂದ ಉತ್ತರ ಪಡೆಯುವುದಿಲ್ಲವೆಂದು ಸದನದ ಸಮಯವನ್ನು ಹಾಳುಗೆಡವಿದ @INCKarnataka ನಾಯಕರೇ,
ಸಂತ್ರಸ್ಥೆಯೇ ಹೇಳಿದಂತೆ, ಷಡ್ಯಂತ್ರದ ಭಾಗವಾಗಿರುವ @DKShivakumar ಮಾಡಿರುವ ಘನಂದಾರಿ ಕೆಲಸವನ್ನು ಸಮರ್ಥಿಸುತ್ತೀರಾ?
ಇಂಥಹ ಹೀನ ಕೆಲಸ ನಿರ್ವಹಣೆ ಮಾಡುವುದಕ್ಕೆ ಕೆಪಿಸಿಸಿಯಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿದೆಯಾ?#DKShiMustResign
— BJP Karnataka (@BJP4Karnataka) March 27, 2021
ಕಾಗೆ ಹಿಕ್ಕೆ ಹಾಕಿದ್ದಕ್ಕೂ ಮೂಗು ತೂರಿಸುವ ಸೆಕ್ಷನ್ @siddaramaiah ಅವರೇ,#CDGate ಷಡ್ಯಂತ್ರದಲ್ಲಿ @DKShivakumar ಅವರ ಪಾತ್ರದ ಬಗ್ಗೆ ಏಕೆ ಇನ್ನೂ ಮೌನವಾಗಿದ್ದೀರಿ?
ಯಾವ ಸೆಕ್ಷನ್ ಪ್ರಕಾರ ಇದು ಅಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ.#DKShiMustResign
— BJP Karnataka (@BJP4Karnataka) March 27, 2021
ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೆಸರು ಕೂಡ ಕೇಳಿಬರುತ್ತಿದೆ. ಸಿಡಿಯಲ್ಲಿದ್ದ ಯುವತಿಯ ತಂದೆ-ತಾಯಿ ಎಸ್ಐಟಿ ತನಿಖೆ ವೇಳೆ ಡಿ.ಕೆ. ಶಿವಕುಮಾರ್ ಹೆಸರನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಚೇರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಸದಾಶಿವನಗರ ಠಾಣೆ ಪೊಲೀಸರಿಂದ ಡಿ.ಕೆ. ಶಿವಕುಮಾರ್ ಕಚೇರಿಗೆ ಹೆಚ್ಚುವರಿ ಬಂದೋಬಸ್ತ್ ಒದಗಿಸಲಾಗಿದೆ. ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳ ನಿಯೋಜನೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ನಿವಾಸದ ಹಿಂದಿನ ರಸ್ತೆಯಲ್ಲಿ ಡಿ.ಕೆ. ಶಿವಕುಮಾರ್ ನಿವಾಸವಿದೆ.
ಸಿಡಿ ಯುವತಿ ಪೋಷಕರ ಹೇಳಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ-ಕಚೇರಿಗೆ ಹೆಚ್ಚಿನ ಭದ್ರತೆ
Published On - 4:56 pm, Sat, 27 March 21