ಭಾರತದ ವಿರುದ್ಧ ಅಮ್ನೆಸ್ಟಿ, ಪೆಗಾಸಸ್​ ಹುನ್ನಾರ: ಅಶ್ವತ್ಥ ನಾರಾಯಣ ಆರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 20, 2021 | 7:40 PM

ಇದೇ ಉದ್ದೇಶದಿಂದ ಸಂಸತ್ತಿನಲ್ಲಿ ನೂತನ ಸಚಿವರನ್ನು ಪರಿಚಯಿಸುವ ಸಂದರ್ಭ ವಿರೋಧ ಪಕ್ಷಗಳು ಆರೋಪ ಮಾಡಿವೆ ಎಂದು ದೂರಿದರು.

ಭಾರತದ ವಿರುದ್ಧ ಅಮ್ನೆಸ್ಟಿ, ಪೆಗಾಸಸ್​ ಹುನ್ನಾರ: ಅಶ್ವತ್ಥ ನಾರಾಯಣ ಆರೋಪ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಭಾರತದ ವಿರುದ್ಧ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಮತ್ತು ಪೆಗಾಸಸ್ ಸಂಸ್ಥೆಗಳು ಹುನ್ನಾರ ನಡೆಸಿವೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ​ ನಾರಾಯಣ ಹೇಳಿಕೆ ನೀಡಿದ್ದಾರೆ. ಇದೇ ಉದ್ದೇಶದಿಂದ ಸಂಸತ್ತಿನಲ್ಲಿ ನೂತನ ಸಚಿವರನ್ನು ಪರಿಚಯಿಸುವ ಸಂದರ್ಭ ವಿರೋಧ ಪಕ್ಷಗಳು ಆರೋಪ ಮಾಡಿವೆ ಎಂದು ದೂರಿದರು.

ಸಂಸತ್ ಅಧಿವೇಶನ ಸುಸೂತ್ರವಾಗಿ ನಡೆಯಬಾರದು ಎನ್ನುವ ಉದ್ದೇಶದಿಂದ ವಿರೋಧ ಪಕ್ಷಗಳು ಹೀಗೆ ವರ್ತಿಸುತ್ತಿವೆ. ಪ್ರಮುಖ ವಿಧೇಯಕಗಳು ಮಂಡನೆ ಆಗಬಾರದೆಂಬುದು ವಿಪಕ್ಷಗಳ ಉದ್ದೇಶ ಎಂದು ಅವರು ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಫೋನ್ ಕದ್ದಾಲಿಕೆಯಂಥ ಸಂಸ್ಕೃತಿ ಇರುವುದು ಕಾಂಗ್ರೆಸ್​ ನಾಯಕರಲ್ಲಿ. ಕಾಂಗ್ರೆಸ್‌ ಪಕ್ಷದವರು ಯಾವುದೇ ಆಧಾರಗಳಿಲ್ಲದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಒಂದೇ ಒಂದು ಸಾಕ್ಷ್ಯವನ್ನು ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿ ತಿಂಗಳು 9 ಸಾವಿರ ಫೋನ್​ಗಳ ಕದ್ದಾಲಿಕೆ ಆಗುತ್ತಿತ್ತು. ಪೆಗಾಸಸ್‌ ಸಾಫ್ಟ್‌ವೇರ್‌ 150 ದೇಶಗಳಲ್ಲಿ ಬಳಕೆಯಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕರು, ಚುನಾಯಿತ ಸರ್ಕಾರಗಳನ್ನು ಕೆಡವಲು ಗೂಡಚಾರಿಕೆ ಮಾಡಿರುವುದು ಈಗ ಬಟಾಬಯಲಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲೇ ಈ ಗೂಡಚಾರಿಕೆ ನಡೆದಿದೆ. ಪ್ರಧಾನಿ ಮೋದಿ ಸರ್ಕಾರ ದೇಶದ್ರೋಹದ ಕೃತ್ಯವೆಸಗಿದೆ. ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ನಡೆದಿದೆ. ಕರ್ನಾಟಕ, ಮಧ್ಯಪ್ರದೇಶ, ಗೋವಾ, ಅರುಣಾಚಲಪ್ರದೇಶ ರಾಜ್ಯಗಳಲ್ಲಿ ಪೆಗಾಸಸ್ ಸಾಫ್ಟ್​ವೇರ್ ಮೂಲಕ ಸರ್ಕಾರಗಳನ್ನು ಕೆಡವಿದ್ದಾರೆ ಎಂದು ಆರೋಪಿಸಿದ್ದರು.

2019ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವುವಲ್ಲಿ ಪೆಗಾಸಸ್ ತಂತ್ರಾಂಶದ ಬಳಕೆ ಮಾಡಿರುವ ಸಾಧ್ಯತೆ ಇದೆ ಕಾಂಗ್ರೆಸ್ ಬಿಜೆಪಿಯ ಮೇಲೆ ಅತ್ಯಂತ ಗಂಭೀರ ಆರೋಪವನ್ನು ಮಾಡಿತ್ತು.

(BJP Leader Ashwath Narayana Alleges Amnesty International and Pegasus conspiring against govt of India)

ಇದನ್ನೂ ಓದಿ: ಕಾಂಗ್ರೆಸ್ ಆರೋಪ ನಿರಾಧಾರ, ಸಂಸತ್ ಅಧಿವೇಶನ ಭಂಗಗೊಳಿಸಲು ವಿಪಕ್ಷ ಹುನ್ನಾರ: ಪೆಗಾಸಸ್ ವಿವಾದ ಬಗ್ಗೆ ಬಿಜೆಪಿ ಪ್ರತಿಕ್ರಿಯೆ

ಇದನ್ನೂ ಓದಿ: Explainer: ಏನಿದು ಪೆಗಾಸಸ್ ಗೂಢಚರ್ಯೆ ತಂತ್ರಾಂಶ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

Published On - 7:21 pm, Tue, 20 July 21