ಕಾಂಗ್ರೆಸ್ ಆರೋಪ ನಿರಾಧಾರ, ಸಂಸತ್ ಅಧಿವೇಶನ ಭಂಗಗೊಳಿಸಲು ವಿಪಕ್ಷ ಹುನ್ನಾರ: ಪೆಗಾಸಸ್ ವಿವಾದ ಬಗ್ಗೆ ಬಿಜೆಪಿ ಪ್ರತಿಕ್ರಿಯೆ

Pegasus Project: ಕಂಪನಿ (ಎನ್‌ಎಸ್‌ಒ ಗ್ರೂಪ್) ಇದನ್ನು ನಿರಾಕರಿಸುತ್ತಿದೆ (ಪೆಗಾಸಸ್ ಪ್ರಾಜೆಕ್ಟ್ ವರದಿಯಲ್ಲಿನ ಸಂಶೋಧನೆಗಳು) ಮತ್ತು ಅದರ ಹೆಚ್ಚಿನ ಉತ್ಪನ್ನಗಳನ್ನು ಪಾಶ್ಚಿಮಾತ್ಯ ದೇಶಗಳು ಬಳಸುತ್ತಿವೆ ಆದರೆ ಭಾರತವನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳುತ್ತಿದೆ. ಇದು ವಿಚಿತ್ರ ಪರಿಸ್ಥಿತಿ.

ಕಾಂಗ್ರೆಸ್ ಆರೋಪ ನಿರಾಧಾರ, ಸಂಸತ್ ಅಧಿವೇಶನ ಭಂಗಗೊಳಿಸಲು ವಿಪಕ್ಷ ಹುನ್ನಾರ: ಪೆಗಾಸಸ್ ವಿವಾದ ಬಗ್ಗೆ ಬಿಜೆಪಿ ಪ್ರತಿಕ್ರಿಯೆ
ರವಿ ಶಂಕರ್ ಪ್ರಸಾದ್
Follow us
| Edited By: Rashmi Kallakatta

Updated on: Jul 19, 2021 | 7:32 PM

ದೆಹಲಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆಗಳನ್ನು ಆಧಾರರಹಿತ ಎಂದು ಹೇಳಿ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ, 50 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ ಪಕ್ಷ ಈ ಮಟ್ಟಕ್ಕೆ ಇಳಿದಿದೆ ಎಂದು ಹೇಳಿದೆ. ‘ಪೆಗಾಸಸ್ ಪ್ರಾಜೆಕ್ಟ್’ ಮಾಧ್ಯಮ ವರದಿ ಬಗ್ಗೆ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ. ವೆಬ್ ನ್ಯೂಸ್ ಪೋರ್ಟಲ್ ‘ದಿ ವೈರ್’ ನಿರೀಕ್ಷಿತ ಟಾರ್ಗೆಟ್ ಪಟ್ಟಿಯಲ್ಲಿ ಮೊದಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದಾಗಿನಿಂದ ಸರ್ಕಾರವು ಒತ್ತಡದಲ್ಲಿದೆ. ಕಾಂಗ್ರೆಸ್​​ನ ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಅವರ ಇಬ್ಬರು ಸಹಾಯಕರು ಈ ಪಟ್ಟಿಯಲ್ಲಿದ್ದಾರೆ ಎಂದು ಇಂದು ಪೋರ್ಟಲ್ ವರದಿ ಮಾಡಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಕೂಡ ಪಟ್ಟಿಯಲ್ಲಿದ್ದಾರೆ.

ರಾಹುಲ್ ಗಾಂಧಿ, ಪತ್ರಕರ್ತರು ಮತ್ತು ಕೇಂದ್ರ ಸಚಿವರು ಸೇರಿದಂತೆ ಪ್ರತಿಪಕ್ಷ ನಾಯಕರ ಮೇಲೆ ಕಣ್ಗಾವಲಿರಿಸುವಲ್ಲಿ ಪ್ರಧಾನಿ ಕಚೇರಿ ಮತ್ತು ಗೃಹ ಸಚಿವಾಲಯ ತೊಡಗಿಸಿಕೊಂಡಿದೆ. ತನಿಖೆಯ ಮೊದಲು, ಅಮಿತ್ ಶಾ ಜೀನಾಮೆ ನೀಡಬೇಕು ಮತ್ತು ಮೋದಿ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕರು ಪೆಗಾಸಸ್ ಪ್ರಾಜೆಕ್ಟ್ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಬಿಜೆಪಿ ಸುದ್ದಿಗೋಷ್ಠಿ ನಡೆಸಿದೆ.

ಸುದ್ದಿಗೋಷ್ಠಿಯ ಮುಖ್ಯಾಂಶಗಳು ಕಂಪನಿ (ಎನ್‌ಎಸ್‌ಒ ಗ್ರೂಪ್) ಇದನ್ನು ನಿರಾಕರಿಸುತ್ತಿದೆ (ಪೆಗಾಸಸ್ ಪ್ರಾಜೆಕ್ಟ್ ವರದಿಯಲ್ಲಿನ ಸಂಶೋಧನೆಗಳು) ಮತ್ತು ಅದರ ಹೆಚ್ಚಿನ ಉತ್ಪನ್ನಗಳನ್ನು ಪಾಶ್ಚಿಮಾತ್ಯ ದೇಶಗಳು ಬಳಸುತ್ತಿವೆ ಆದರೆ ಭಾರತವನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳುತ್ತಿದೆ. ಇದು ವಿಚಿತ್ರ ಪರಿಸ್ಥಿತಿ.

ಹೊಸ ವಾತಾವರಣವನ್ನು ಸೃಷ್ಟಿಸಲು ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ‘ಪೆಗಾಸಸ್’ ಕಥೆಯನ್ನು ತರಲಾಗಿದೆಯೇ? ‘ದಿ ವೈರ್’ (ಆನ್‌ಲೈನ್ ಪೋರ್ಟಲ್) ಹೆಸರು ಕೂಡ ಹೊರಹೊಮ್ಮಿದೆ. ಆದರೆ ಅವರ ಅನೇಕ ಕಥೆಗಳು ತಪ್ಪು ಎಂದು ಕಂಡುಬಂದಿರುವುದು ನಿಜವಲ್ಲವೇ? ಎಂದಿದ್ದಾರೆ ರವಿಶಂಕರ್ ಪ್ರಸಾದ್.

ಪ್ರಮುಖ ಘಟನೆಗಳ ಸಮಯದಲ್ಲಿಯೇ ಈ ರೀತಿಯ ಪ್ರಶ್ನೆಗಳನ್ನು ಏಕೆ ಎತ್ತಲಾಗುತ್ತದೆ? ಟ್ರಂಪ್ ಭೇಟಿಯ ಸಮಯದಲ್ಲಿ ಗಲಭೆಗಳು ಪ್ರಚೋದಿಸಲ್ಪಟ್ಟವು, 2019 ರ ಚುನಾವಣೆಯ ಸಮಯದಲ್ಲಿ ಪೆಗಾಸಸ್ ಕಥೆಯನ್ನು ಪ್ರಸಾರ ಮಾಡಲಾಯಿತು ಮತ್ತು ಸಂಸತ್ತು ಅಧಿವೇಶನದಲ್ಲಿದ್ದಾಗ ಮತ್ತು ಕಾಂಗ್ರೆಸ್ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ ಮತ್ತೆ ಸುದ್ದಿಯಲ್ಲಿದೆ.

‘ಪೆಗಾಸಸ್’ ಕಥೆಯಲ್ಲಿ ಬಿಜೆಪಿ ಅಥವಾ ಸರ್ಕಾರದ ಯಾವುದೇ ಕೈವಾಡ ಸಾಬೀತುಪಡಿಸುವ ಪುರಾವೆಗಳೂ ಸಹ ಬಂದಿಲ್ಲ. ಅಮ್ನೆಸ್ಟಿಯಂತಹ ಸಂಸ್ಥೆಗಳು ಭಾರತ ವಿರೋಧಿ ಕಾರ್ಯಸೂಚಿಯನ್ನು ಹಲವು ವಿಧಗಳಲ್ಲಿ ಘೋಷಿಸಿದ್ದನ್ನು ನಾವು ಅಲ್ಲಗಳೆಯಬಹುದೇ? ಅವರ ಹಣಕಾಸಿನ ಮೂಲವನ್ನು ನೀವು ಕೇಳಿದಾಗ, ಅವರು “ಭಾರತದಲ್ಲಿ ಕೆಲಸ ಮಾಡುವುದು ಕಷ್ಟ” ಎಂದು ಹೇಳುತ್ತಾರೆ.

ಇದನ್ನೂ ಓದಿ: ಪೆಗಾಸಸ್ ಪ್ರಾಜೆಕ್ಟ್ ಮಾಧ್ಯಮ ವರದಿಗಳ ಬಗ್ಗೆ ನಾವು ಲೋಕಸಭೆಯಲ್ಲಿ ಚರ್ಚಿಸುತ್ತೇವೆ: ರಾಹುಲ್ ಗಾಂಧಿ

ಇದನ್ನೂ ಓದಿ: Explainer: ಏನಿದು ಪೆಗಾಸಸ್ ಗೂಢಚರ್ಯೆ ತಂತ್ರಾಂಶ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ತಾಜಾ ಸುದ್ದಿ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ