AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,464 ಜನರಿಗೆ ಕೊರೊನಾ ಸೋಂಕು ದೃಢ; 29 ಮಂದಿ ಸಾವು

ಬೆಂಗಳೂರಿನಲ್ಲಿ ಇಂದು ಒಂದೇ ದಿನ 352 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,22,807ಕ್ಕೆ ಏರಿಕೆಯಾಗಿದೆ.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,464 ಜನರಿಗೆ ಕೊರೊನಾ ಸೋಂಕು ದೃಢ; 29 ಮಂದಿ ಸಾವು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 20, 2021 | 8:25 PM

Share

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 20) ಹೊಸದಾಗಿ 1,464 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,86,702ಕ್ಕೆ ಏರಿಕೆ ಆಗಿದೆ. ಸೋಂಕಿತರ ಪೈಕಿ 28,24,197 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 29 ಜನರ ಸಾವು ಸಂಭವಿಸಿದೆ. ತನ್ಮೂಲಕ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 36,226 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 26,256 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 352 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,22,807ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 11,96,953 ಜನರು ಗುಣಮುಖ ಹೊಂದಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,807 ಜನರ ಸಾವು ಸಂಭವಿಸಿದೆ. ಒಟ್ಟು 10,046 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ರಾಜ್ಯದಲ್ಲಿ ಕೊವಿಡ್​ ಪಾಸಿಟಿವಿಟಿ ರೇಟ್​ ಶೇಕಡಾ 1.29 ರಷ್ಟು ಇದೆ.

ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ ಬೆಂಗಳೂರು ನಗರ 352, ದಕ್ಷಿಣ ಕನ್ನಡ ಜಿಲ್ಲೆ 200, ಮೈಸೂರು 117, ಹಾಸನ 108, ಚಿಕ್ಕಮಗಳೂರು 81, ತುಮಕೂರು 86, ಬೆಳಗಾವಿ 75, ಉಡುಪಿ 68, ಶಿವಮೊಗ್ಗ 63, ಕೊಡಗು 56, ಉತ್ತರ ಕನ್ನಡ 53, ಮಂಡ್ಯ 37, ಕೋಲಾರ 36, ಬೆಂಗಳೂರು ಗ್ರಾಮಾಂತರ 35, ಚಾಮರಾಜನಗರ 16, ಧಾರವಾಡ 14, ದಾವಣಗೆರೆ 13, ಚಿತ್ರದುರ್ಗ 11, ಬಳ್ಳಾರಿ 8, ಚಿಕ್ಕಬಳ್ಳಾಪುರ 8, ಕಲಬುರಗಿ 8, ರಾಮನಗರ 4, ವಿಜಯಪುರ 4, ಹಾವೇರಿ 3, ರಾಯಚೂರು 3, ಬೀದರ್ ಜಿಲ್ಲೆ 2, ಬಾಗಲಕೋಟೆ, ಗದಗ, ಯಾದಗಿರಿ ಜಿಲ್ಲೆಯಲ್ಲಿ ತಲಾ 1 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.

ಜಿಲ್ಲಾವಾರು ಕೊರೊನಾದಿಂದ ಮೃತರ ಸಂಖ್ಯೆ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 29 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿನಿಂದ 5, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು ಜಿಲ್ಲೆ, ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 3, ಹಾವೇರಿ, ಕೋಲಾರ ಜಿಲ್ಲೆಯಲ್ಲಿ ತಲಾ 2, ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ತಲಾ 2, ಬೆಳಗಾವಿ, ಚಿಕ್ಕಬಳ್ಳಾಪುರ, ಧಾರವಾಡ, ಕಲಬುರಗಿ, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,226 ಜನರ ಸಾವು ಸಂಭವಿಸಿದೆ.

ಇದನ್ನೂ ಓದಿ: Tokyo Olympics: ಒಲಂಪಿಕ್ಸ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ; ಜೆಕ್ ಗಣರಾಜ್ಯದ ಒಲಿಂಪಿಕ್ ತಂಡದ ಇಬ್ಬರಿಗೆ ಸೋಂಕು

Monkey B Virus: ಚೀನಾದಲ್ಲಿ ಮಂಕಿ ಬಿ ವೈರಸ್​ಗೆ ಮೊದಲ ಸಾವು; ಕೊರೊನಾ ನಡುವೆಯೇ ಮತ್ತೊಂದು ವೈರಾಣು ಪ್ರತ್ಯಕ್ಷ, ನಿಯಂತ್ರಣ ಹೇಗೆ?

Published On - 8:17 pm, Tue, 20 July 21

Follow Us
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು