AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು

Shreyas Iyer on India's T20 Defeat: ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ನಿರಾಶೆ ವ್ಯಕ್ತಪಡಿಸಿದ್ದಾರೆ. 158 ರನ್ ಗುರಿ ಈ ಪಿಚ್‌ಗೆ ಸಾಲದೆಂದ ಅವರು, ಬೌಲರ್‌ಗಳು ಸ್ಥಿರವಾಗಿ ಪ್ರದರ್ಶನ ನೀಡಲಿಲ್ಲ ಎಂದರು. ವೈಯಕ್ತಿಕ ಪ್ರದರ್ಶನದಿಂದ ತೃಪ್ತಿ ಇದ್ದರೂ, ತಂಡದ ಗೆಲುವಾಗದಿದ್ದಕ್ಕೆ ಬೇಸರವಿದೆ. ಇದು ಯುವ ಆಟಗಾರರ ಕಲಿಕೆಯ ಹಂತವಾಗಿದ್ದು, ತಪ್ಪುಗಳಿಂದ ಪಾಠ ಕಲಿತು ಕಮ್‌ಬ್ಯಾಕ್ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು
Shreyas Iyer
ಪೃಥ್ವಿಶಂಕರ
|

Updated on:Jul 10, 2026 | 8:31 AM

Share

ಐರ್ಲೆಂಡ್ ನಂತರ ಇದೀಗ ಇಂಗ್ಲೆಂಡ್‌ ವಿರುದ್ಧವೂ ಟೀಂ ಇಂಡಿಯಾ (India vs England) ಟಿ20 ಸರಣಿಯನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್‌ 9 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಇಂಗ್ಲೆಂಡ್‌ ಗೆಲುವಿಗೆ 159 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 13.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಳ್ಳುವ ಮೂಲಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೊರತುಪಡಿಸಿ ಉಳಿದ ಯಾವ ಆಟಗಾರನಿಗೂ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಹೀನಾಯ ಸೋಲಿನ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್ ಪಂದ್ಯ ಪ್ರಸ್ತುತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ.

ಪ್ರಶ್ನೆ: ಇಂದಿನ ಪ್ರದರ್ಶನವನ್ನು ನೀವು ಹೇಗೆ ನಿರ್ಣಯಿಸುತ್ತೀರಿ?

ಉತ್ತರ: ನಿರಾಶಾದಾಯಕವಾಗಿತ್ತು. ಇದು 158 ರನ್​ಗಳ ಪಿಚ್ ಆಗಿರಲಿಲ್ಲ. ಈ ಗುರಿಯನ್ನು ಇಂಗ್ಲೆಂಡ್‌ ಆರಾಮವಾಗಿ ಬೆನ್ನಟ್ಟಿತು.

ಪ್ರಶ್ನೆ: ಹಿಂದಿನ ಸೋಲಿನ ನಂತರ ನೀವು ಬೌಲರ್‌ಗಳಿಗೆ ನೀಡಿದ್ದ ಸಂದೇಶವೇನು?

ಉತ್ತರ: ನಾವು ಸರಿಯಾದ ಲೈನ್ ಅಂಡ್ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುವುದನ್ನು ಮುಂದುವರಿಸಲು ಬಯಸಿದ್ದೆವು. ಈ ಪಿಚ್‌ನಲ್ಲಿ, ಸ್ಟಂಪ್‌ ಮೇಲೆ ಬೌಲಿಂಗ್ ಮಾಡುವುದರಿಂದ ಬೌಂಡರಿ ಹೊಡೆಯುವುದು ಕಷ್ಟಕರವಾಗಿತ್ತು. ಆದರೆ ನಾವು ಸ್ಥಿರವಾಗಿ ಕಾರ್ಯನಿರ್ವಹಿಸಲಿಲ್ಲ ಮತ್ತು ಕಳಪೆ ಚೆಂಡುಗಳನ್ನು ಅವರು ಸುಲಭವಾಗಿ ದಂಡಿಸಿದರು.

ಪ್ರಶ್ನೆ: ವೈಯಕ್ತಿಕವಾಗಿ, ನೀವು ಚೆನ್ನಾಗಿ ಆಡಿದ್ದೀರಿ, ಇದರಿಂದ ನಿಮಗೆ ಸಂತೋಷವಾಗಿದೆಯೇ?

ಉತ್ತರ: ನನ್ನ ಪ್ರದರ್ಶನದಿಂದ ನಾನು ಸಂತೋಷವಾಗಿದ್ದೇನೆ, ಆದರೆ ಅದು ತಂಡದ ಗೆಲುವಿಗೆ ಸಹಾಯ ಮಾಡದಿದ್ದರೆ, ಅದಕ್ಕೆ ಅರ್ಥವಿಲ್ಲ. ನನ್ನ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಗಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ.

ಪ್ರಶ್ನೆ: ಸರಣಿ ಸೋತಿದ್ದೀರಿ, ಕೊನೆಯದಾಗಿ ಏನನ್ನಾದರೂ ಮಾಡಲು ಇನ್ನೊಂದು ಪಂದ್ಯ ಬಾಕಿ ಉಳಿದಿದೆ?

ಉತ್ತರ: ಖಂಡಿತ. ಇದು ಪರಿವರ್ತನೆಯ ಹಂತ. ಅನೇಕ ಯುವ ಆಟಗಾರರು ಮೊದಲ ಬಾರಿಗೆ ವಿದೇಶಿ ಪರಿಸ್ಥಿತಿಗಳಲ್ಲಿ ಆಡುತ್ತಿದ್ದಾರೆ, ಆದ್ದರಿಂದ ತಪ್ಪುಗಳು ನಡೆಯುವುದು ಸಹಜ. ಆ ತಪ್ಪುಗಳಿಂದ ಬೇಗನೆ ಕಲಿಯುವುದು ಮುಖ್ಯ. ತಂಡವು ಬೇಗನೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವವರನ್ನು ಹೊಂದಿದೆ ಎಂದು ನನಗೆ ವಿಶ್ವಾಸವಿದೆ ಮತ್ತು ಮುಂದಿನ ಪಂದ್ಯದಲ್ಲಿ ನಾವು ಬಲವಾಗಿ ಮರಳುತ್ತೇವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:28 am, Fri, 10 July 26

Follow Us
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ
ಸಿಎಂ ಬರಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಎಸ್​ಎಫ್​ಐ ಮುಖಂಡರು ವಶಕ್ಕೆ
ಸಿಎಂ ಬರಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಎಸ್​ಎಫ್​ಐ ಮುಖಂಡರು ವಶಕ್ಕೆ