ಡಬ್ಲ್ಯೂಪಿಎಲ್ 2027 ರ ವೇಳಾಪಟ್ಟಿ ಪ್ರಕಟ; ಈ ದಿನ ನಡೆಯಲಿದೆ ಮಿನಿ ಹರಾಜು
2027ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಪಂದ್ಯಾವಳಿಯನ್ನು ಜನವರಿಯಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 28 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಸೆಪ್ಟೆಂಬರ್ 28 ರೊಳಗೆ ಫ್ರಾಂಚೈಸಿಗಳು ಆಟಗಾರ್ತಿಯರ ಉಳಿಸುವ ಪಟ್ಟಿಯನ್ನು ಸಲ್ಲಿಸಬೇಕು. ಮುಂಬೈ, ವಡೋದರಾ ಹಾಗೂ ವಾರಣಾಸಿ ಸಂಭಾವ್ಯ ಕ್ರೀಡಾಂಗಣಗಳಾಗಿವೆ.

2027 ರ ಮಹಿಳಾ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ, ಪಂದ್ಯಾವಳಿಯು ಜನವರಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು, ಪಂದ್ಯಾವಳಿಯು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯುತ್ತಿತ್ತು. ಆದಾಗ್ಯೂ, ಲೀಗ್‌ನ ಐದನೇ ಸೀಸನ್ ಜನವರಿ 14 ರಿಂದ ಪ್ರಾರಂಭವಾಗಿ ಫೆಬ್ರವರಿ 7 ರವರೆಗೆ ನಡೆಯಲಿದೆ. ಇದರ ಜೊತೆಗೆ ಮುಂದಿನ ಆವೃತ್ತಿಗೂ ನಡೆಯಲಿರುವ ಮಿನಿ ಹರಾಜಿನ ದಿನಾಂಕವೂ ಬಹಿರಂಗವಾಗಿದ್ದು, ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿ ಈ ಮಿನಿ ಹರಾಜು ನಡೆಯಲಿದೆ. ಡಬ್ಲ್ಯೂಪಿಎಲ್ 2027 ರ ಆರಂಭ ಹಾಗೂ ಅತ್ಯಂದ ದಿನಾಂಕ ಬಹಿರಂಗವಾಗಿದ್ದರೂ ಪಂದ್ಯಾವಳಿಯ ಪೂರ್ಣ ವೇಳಾಪಟ್ಟಿ ಮತ್ತು ಪಂದ್ಯಗಳು ನಡೆಯಲಿರುವ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಕೊಚ್ಚಿಯಲ್ಲಿ ಈ ಬಾರಿಯ ಮಿನಿ ಹರಾಜು
ಮೇಲೆ ಹೇಳಿದಂತೆ ಡಬ್ಲ್ಯೂಪಿಎಲ್ ಮಿನಿ ಹರಾಜು ಅಕ್ಟೋಬರ್ 28, 2026 ರಂದು ನಡೆಯಲಿದೆ. ಈ ಹರಾಜು ಒಂದು ದಿನ ಮಾತ್ರ ನಡೆಯಲಿದ್ದು ಇದೇ ಮೊದಲ ಬಾರಿಗೆ ಕೇರಳದ ಕೊಚ್ಚಿ ನಗರದ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ. ಹೀಗಾಗಿ ಹರಾಜಿಗೂ ಮೊದಲು ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರ್ತಿಯರು ಮತ್ತು ತಂಡದಿಂದ ಬಿಡುಗಡೆ ಮಾಡಲಾಗಿರುವ ಆಟಗಾರ್ತಿಯರ ಪಟ್ಟಿಯನ್ನು ಹರಾಜಿಗೂ 1 ತಿಂಗಳ ಮೊದಲೇ ಬಿಸಿಸಿಐಗೆ ತಿಳಿಸಬೇಕಾಗಿದೆ. ಇದಕ್ಕಾಗಿ ಸೆಪ್ಟೆಂಬರ್ 28 ಅನ್ನು ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಈ ದಿನಾಂಕದಂದು ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಂಡ ಆಟಗಾರ್ತಿಯರ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಬೇಕಾಗಿದೆ.
3 ನಗರಗಳ ಹೆಸರು ಮುಂಚೂಣಿಯಲ್ಲಿ
ಮುಂಬರುವ ಡಬ್ಲ್ಯೂಪಿಎಲ್ ಪಂದ್ಯಗಳು ಎಷ್ಟು ನಗರಗಳಲ್ಲಿ ಮತ್ತು ಯಾವ ಯಾವ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಆದಾಗ್ಯೂ ವರದಿಗಳ ಪ್ರಕಾರ, ಮುಂದಿನ ಸೀಸನ್ ಡಬ್ಲ್ಯೂಪಿಎಲ್ಗಾಗಿ ಮೂರು ನಗರಗಳನ್ನು ಆಯ್ಕೆ ಮಾಡಲಾಗಿದೆ. ಮುಂಬೈ ಮತ್ತು ವಡೋದರಾ ಹೊರತುಪಡಿಸಿ ವಾರಣಾಸಿಯ ಹೊಸ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಾರಣಾಸಿಯ ಕ್ರೀಡಾಂಗಣದಲ್ಲಿ ಇದುವರೆಗೆ ಯಾವುದೇ ಪಂದ್ಯಗಳನ್ನು ಆಡಲಾಗಿಲ್ಲ. ಹೀಗಾಗಿ ಬಿಸಿಸಿಐ ಮುಂದಿನ ಡಬ್ಲ್ಯೂಪಿಎಲ್ ಸಂಪೂರ್ಣ ಲೀಗ್ ಅನ್ನು ಈ ಸ್ಥಳದಲ್ಲಿ ಆಯೋಜಿಸಬಹುದು ಎಂದು ಹೇಳಲಾಗುತ್ತಿದೆ.
🚨 News 🚨 #TATAWPL 2027 to be played from 14 January to 7 February 2027 🗓️
Player Auction to be held on 28 October 2026 in Kochi 📍
More details ▶️ https://t.co/tuEXkaaY6T pic.twitter.com/mjLcSOJawp
— Women’s Premier League (WPL) (@wplt20) September 16, 2026
ಈ ಲೀಗ್‌ನಲ್ಲಿ ಭಾಗವಹಿಸುವ ಐದು ಫ್ರಾಂಚೈಸಿಗಳಿವು
- ರಾಯಲ್ ಚಾಲೆಂಜರ್ಸ್ ಬೆಂಗಳೂರು
- ದೆಹಲಿ ಕ್ಯಾಪಿಟಲ್ಸ್
- ಮುಂಬೈ ಇಂಡಿಯನ್ಸ್
- ಗುಜರಾತ್ ಜೈಂಟ್ಸ್
- ಯುಪಿ ವಾರಿಯರ್ಸ್
ಡಬ್ಲ್ಯೂಪಿಎಲ್ನ ಹಾಲಿ ಚಾಂಪಿಯನ್ ಯಾರು?
ಡಬ್ಲ್ಯೂಪಿಎಲ್ನ ಹಾಲಿ ಚಾಂಪಿಯನ್ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಇಲ್ಲಿಯವರೆಗೆ ಯಾವ ತಂಡ ಅತ್ಯಧಿಕ ಪ್ರಶಸ್ತಿಗಳನ್ನು ಗೆದ್ದಿದೆ?
ಇಲ್ಲಿಯವರೆಗೆ, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲಾ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Thu, 17 September 26




