AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ, ಅರ್ಧ ಗಂಟೆ ಸುತ್ತಾಡಿ ದೇವಿ ದರ್ಶನ ಪಡೆದ ಮಾಜಿ ಸಿಎಂ, ಆಗಿದ್ದೇನು?

ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ, ಅರ್ಧ ಗಂಟೆ ಸುತ್ತಾಡಿ ದೇವಿ ದರ್ಶನ ಪಡೆದ ಮಾಜಿ ಸಿಎಂ, ಆಗಿದ್ದೇನು?

ಮಂಜುನಾಥ ಕೆಬಿ
| Edited By: |

Updated on: Nov 06, 2026 | 9:36 PM

Share

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ನವೆಂಬರ್ 06) ಹಾಸನಾಂಬೆಯ ದರ್ಶನ ಪಡೆದುಕೊಂಡರು. ಆದ್ರೆ, ಅಮ್ಮನ ದರ್ಶನ ಪಡೆಯಲು ಮಾಜಿ ಸಿದ್ದರಾಮಯ್ಯ ಅರ್ಧ ಗಂಟೆ ಸುತ್ತಾಡಿ ಬರಬೇಕಾಯ್ತು. ಹೌದು... ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ವೇಳೆ ಗೊಂದಲ ಉಂಟಾಗಿದ್ದು, ಡಿಸಿ, ಎಸ್​ಪಿ ಮತ್ತೊಂದು ಇನೋವಾ ಕಾರು ಬರುತ್ತಿದ್ದಂತೆ ಗೇಟ್ ಬಂದ್ ಮಾಡಲಾಗಿದೆ. ಹೀಗಾಗಿ ಗೇಟ್ ಬಂದ್ ಆಗಿದೆ ಎಂದು ತಿಳಿದು ಸಿದ್ದರಾಮಯ್ಯನವರ ಕಾರು ದೇವಸ್ಥಾನದಿಂದ ಮುಂದೆ ಹೋಗಿದೆ. ಇದರಿಂದ ರಸ್ತೆ ತಪ್ಪಿದ್ದು, ಟ್ರಾಫಿಕ್​ನಲ್ಲಿ ಸಿಲುಕಿದರು. 

ಹಾಸನ, (ನವೆಂಬರ್ 06): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ನವೆಂಬರ್ 06) ಹಾಸನಾಂಬೆಯ ದರ್ಶನ ಪಡೆದುಕೊಂಡರು. ಆದ್ರೆ, ಅಮ್ಮನ ದರ್ಶನ ಪಡೆಯಲು ಮಾಜಿ ಸಿದ್ದರಾಮಯ್ಯ ಅರ್ಧ ಗಂಟೆ ಸುತ್ತಾಡಿ ಬರಬೇಕಾಯ್ತು. ಹೌದು… ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ವೇಳೆ ಗೊಂದಲ ಉಂಟಾಗಿದ್ದು, ಡಿಸಿ, ಎಸ್​ಪಿ ಮತ್ತೊಂದು ಇನೋವಾ ಕಾರು ಬರುತ್ತಿದ್ದಂತೆ ಗೇಟ್ ಬಂದ್ ಮಾಡಲಾಗಿದೆ. ಹೀಗಾಗಿ ಗೇಟ್ ಬಂದ್ ಆಗಿದೆ ಎಂದು ತಿಳಿದು ಸಿದ್ದರಾಮಯ್ಯನವರ ಕಾರು ದೇವಸ್ಥಾನದಿಂದ ಮುಂದೆ ಹೋಗಿದೆ. ಇದರಿಂದ ರಸ್ತೆ ತಪ್ಪಿದ್ದು, ಟ್ರಾಫಿಕ್​ನಲ್ಲಿ ಸಿಲುಕಿದರು.

ಇತ್ತ ಎಸಿ, ಡಿಸಿಯವರು ಸಿದ್ದರಾಮಯ್ಯನವರು ಎಲ್ಲಿ ಹೋದರು ಎಂದು ಕೆಲ ಕ್ಷಣ ಗಾಬರಿಯಾಗಿದ್ರು. ಕೊನೆಗೆ ಸಿದ್ದರಾಮಯ್ಯ ಕಾರು ಸಂತೇಪಟೆ ವೃತ್ತ ಬಳಸಿ ದೇಗುಲಕ್ಕೆ ಆಗಮಿಸಿದ್ದು, ಆಗ ಸಚಿವ ಶಿವಲಿಂಗೇಗೌಡ ಬಂದು ಯಾಕ್ರಿ ಹೀಗೆ ಕನ್ಫ್ಯೂಸ್ ಮಾಡುತ್ತೀರಾ ಎಂದು ಸಿಟ್ಟಿನಿಂದ ಕೇಳಿರುವ ಪ್ರಸಂಗವೂ ನಡೆಯಿತು. ಅಂತಿಮವಾಗಿ ಸಿದ್ದರಾಮಯ್ಯನವರು ಇದ್ದ ಕಾರು ದಾರಿ ತಪ್ಪಿ ಟ್ರಾಫಿಕ್​​ನಲ್ಲಿ ಸಿಲುಕಿಕೊಂಡು ಅರ್ಧ ಗಂಟೆ ಬಳಿಕ ದೇವಸ್ಥಾನಕ್ಕೆ ಬಂತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More