ಭಾರತ vs ಪಾಕಿಸ್ತಾನ್ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
ಒಮಾನ್ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈ-ವೋಲ್ಟೇಜ್ ಪಂದ್ಯದ ಆರಂಭದ ಸಮಯ ಮತ್ತು ಟಿವಿ ನೇರ ಪ್ರಸಾರದ ಸಂಪೂರ್ಣ ಮಾಹಿತಿ ಇಲ್ಲಿದೆ...

ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ. ಒಮಾನ್‌ನಲ್ಲಿ ನಡೆಯುತ್ತಿರುವ 2026ರ ACC ಪುರುಷರ U19 ಏಷ್ಯಾ ಕಪ್ ಟೂರ್ನಿಯ ಗ್ರೂಪ್ ‘ಎ’ ನ 8ನೇ ಪಂದ್ಯದಲ್ಲಿ ಭಾರತ U19 ಮತ್ತು ಪಾಕಿಸ್ತಾನ U19 ತಂಡಗಳು ನಾಳೆ (ನ.8) ಸೆಣಸಾಡಲಿವೆ. ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಪಂದ್ಯ ಎಷ್ಟು ಗಂಟೆಗೆ ಆರಂಭ?
- ದಿನಾಂಕ: ನವೆಂಬರ್ 8, 2026 (ಭಾನುವಾರ)
- ಟಾಸ್ ಸಮಯ: ಭಾರತೀಯ ಕಾಲಮಾನ (IST) ಬೆಳಿಗ್ಗೆ 10:00 ಗಂಟೆಗೆ
- ಪಂದ್ಯದ ಆರಂಭ: ಭಾರತೀಯ ಕಾಲಮಾನ (IST) ಬೆಳಿಗ್ಗೆ 10:30 ಗಂಟೆಗೆ
- ಪಂದ್ಯ ನಡೆಯುವ ಸ್ಥಳ: ಅಲ್ ಅಮೆರತ್ ಕ್ರಿಕೆಟ್ ಗ್ರೌಂಡ್ (ಮಿನಿಸ್ಟ್ರಿ ಟರ್ಫ್ 1), ಒಮಾನ್.
ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ?
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಟಿವಿ ಮತ್ತು ಮೊಬೈಲ್ ಎರಡರಲ್ಲೂ ಲೈವ್ ಆಗಿ ವೀಕ್ಷಿಸಬಹುದು:
- ಟಿವಿ ಪ್ರಸಾರ: ಭಾರತದಲ್ಲಿ ಈ ಟೂರ್ನಿಯ ಅಧಿಕೃತ ಪ್ರಸಾರ ಹಕ್ಕನ್ನು Sony Sports Network ಹೊಂದಿದ್ದು, ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಪಂದ್ಯ ನೇರ ಪ್ರಸಾರವಾಗಲಿದೆ.
- ಲೈವ್ ಸ್ಟ್ರೀಮಿಂಗ್: Sony LIV ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಇರಲಿದೆ.
ಉಭಯ ತಂಡಗಳು:
ಭಾರತ ಅಂಡರ್-19 ತಂಡ: ಲಕ್ಷ್ಯ ರೈಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಯಶೋವರ್ಧನ್ ಸಿಂಗ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ರಜತ್ ಬಾಘೇಲ್, ವಿ. ಯಶ್ವಿರ್, ಆರ್ಯನ್ ಸಾವ್ಸಾನಿ, ಮೋಹಿತ್ ಉಲ್ವಾ, ಕಾವ್ಯ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್.
ಇದನ್ನೂ ಓದಿ: ನಾವೆಲ್ಲಾ ಸೇರಿನೇ ಕಳ್ಳಾಟ ಆಡಿದ್ದು: ಆಸ್ಟ್ರೇಲಿಯಾದ ಮೋಸದಾಟ ಬಯಲು!
ಪಾಕಿಸ್ತಾನ್ ಅಂಡರ್-19 ತಂಡ: ಫರ್ಹಾನ್ ಯೂಸುಫ್ (ನಾಯಕ), ಉಸ್ಮಾನ್ ಖಾನ್, ಜಹಾಂಗೀರ್ ಬಿಲಾಲ್, ಅಲಿ ರಾಜಾ, ಅಬ್ದುಲ್ ಸಬ್ಹಾನ್, ಅಹಮದ್ ಹುಸೇನ್, ಮೊಹಮ್ಮದ್ ಸಯ್ಯಮ್, ಮೊಹಮ್ಮದ್ ಹುಜೈಫಾ, ರಿಜ್ವಾನುಲ್ಲಾ, ಹಮ್ಜಾ ಜಹೂರ್, ಹುಜೈಫಾ ಅಹ್ಸಾನ್, ನಿಖಾಬ್ ಶಫೀಕ್, ಅಬ್ದುಲ್ ಖಾದಿರ್, ಹಸ್ನೈನ್ ದಾರ್ ಮತ್ತು ಹಯಾಮ್ ಖಾನ್.




