AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿವೀಸ್ ಪಡೆಯ ಕಿವಿ ಹಿಂಡಿದ ಭಾರತೀಯ ಬೌಲರ್ಸ್​… ಅಲ್ಪ ಮೊತ್ತಕ್ಕೆ ಆಲೌಟ್!

ಭಾರತ ಮತ್ತು ನ್ಯೂಝಿಲೆಂಡ್ ಏಕದಿನ ಕ್ರಿಕೆಟ್‌ ನಲ್ಲಿ ಈವರೆಗೆ 124 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 64 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ನ್ಯೂಝಿಲೆಂಡ್ 52 ಮ್ಯಾಚ್ ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನುಳಿದ 7 ಪಂದ್ಯಗಳು ಕಾರಣಾಂತರದಿಂದ ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯಗೊಂಡಿತ್ತು.

ಕಿವೀಸ್ ಪಡೆಯ ಕಿವಿ ಹಿಂಡಿದ ಭಾರತೀಯ ಬೌಲರ್ಸ್​... ಅಲ್ಪ ಮೊತ್ತಕ್ಕೆ ಆಲೌಟ್!
Team India Image Credit source: BCCI
ಝಾಹಿರ್ ಯೂಸುಫ್
|

Updated on: Nov 07, 2026 | 11:48 AM

Share

ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ ಕೇವಲ 134 ರನ್‌ಗಳಿಗೆ ಆಲೌಟ್ ಆಗಿದೆ. ಮಳೆಯ ಕಾರಣ 47 ಓವರ್‌ಗಳಿಗೆ ಸೀಮಿತವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರರಾದ ಟಿಮ್ ಸೈಫರ್ಟ್ (0) ಹಾಗೂ ವಿಲ್ ಯಂಗ್ (6) ಅವರ ವಿಕೆಟ್ ಕಬಳಿಸುವ ಮೂಲಕ ಆಖಿಬ್ ನಬಿ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಹೆನ್ರಿ ನಿಕೋಲ್ಸ್ (11) ಕೂಡ ವಿಕೆಟ್ ಒಪ್ಪಿಸಿ ಹೊರನಡೆದರು.

ಆ ಬಳಿಕ ಬಂದ ಡ್ಯಾರಿಲ್ ಮಿಚೆಲ್ 55 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಆದರೆ ಮಿಚೆಲ್ ವಿಕೆಟ್ ಪತನವಾಗುತ್ತಿದ್ದಂತೆ ನ್ಯೂಝಿಲೆಂಡ್ ಮತ್ತೆ ಕುಸಿತಕ್ಕೊಳಗಾಯಿತು. ಟಾಮ್ ಲ್ಯಾಥಮ್ (7) ಮತ್ತು ಗ್ಲೆನ್ ಫಿಲಿಪ್ಸ್ (0) ಸಲ್ಪ ಸಮಯದಲ್ಲೇ ವಿಕೆಟ್​ ಒಪ್ಪಿಸಿದರು. ಈ ಕಠಿಣ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ 31 ರನ್​ಗಳ ಉಪಯುಕ್ತ ಕೊಡುಗೆ ನೀಡಿದರು. ಪರಿಣಾಮ ನ್ಯೂಝಿಲೆಂಡ್ ತಂಡದ ಸ್ಕೋರ್ 100ರ ಗಡಿದಾಟಿತು.

ಇನ್ನು ಮಿಚೆಲ್ ಸ್ಯಾಂಟ್ನರ್ ಬಳಿಕ ಬಂದ ನಾಥನ್ ಸ್ಮಿತ್ 3 ರನ್​ಗಳಿಸಿದರೆ, ಕೈಲ್ ಜೇಮಿಸನ್ 7 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ನ್ಯೂಝಿಲೆಂಡ್ ತಂಡ 41 ಓವರ್​ಗಳಲ್ಲಿ 134 ರನ್​ಗಳಿಗೆ ಸರ್ವಪತನ ಕಂಡಿದೆ.

ಟೀಮ್ ಇಂಡಿಯಾ ಪರ ಕರಾರುವಾಕ್ ದಾಳಿ ಸಂಘಟಿಸಿದ ಗುರ್ನೂರ್ ಬ್ರಾರ್ 10 ಓವರ್​ಗಳಲ್ಲಿ 30 ರನ್ ನೀಡಿ 4 ವಿಕೆಟ್ ಪಡೆದರೆ, ಆಖಿಬ್ ನಬಿ, ಅನ್ಶುಲ್ ಕಂಬೋಜ್  ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.

  • ಟೀಮ್ ಇಂಡಿಯಾಗೆ 47 ಓವರ್​ಗಳಲ್ಲಿ 135 ರನ್​ಗಳ ಸುಲಭ ಗುರಿ

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಶುಭ್​ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಂಬೋಜ್, ಆಕಿಬ್ ನಬಿ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

ನ್ಯೂಝಿಲೆಂಡ್ (ಪ್ಲೇಯಿಂಗ್ XI): ವಿಲ್ ಯಂಗ್, ಟಿಮ್ ಸೈಫರ್ಟ್, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಯಕ), ನಾಥನ್ ಸ್ಮಿತ್, ಕೈಲ್ ಜೇಮಿಸನ್, ಜೇಕಬ್ ಡಫಿ, ಬ್ಲೇರ್ ಟಿಕ್ನರ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು