AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಸೆಂಚುರಿ… ಮತ್ತೆ ಅಬ್ಬರಿಸಿದ ಯಶಸ್ವಿ ಜೈಸ್ವಾಲ್

ಭಾರತ 'ಎ' ಮತ್ತು ನ್ಯೂಝೀಲೆಂಡ್ 'ಎ' ತಂಡಗಳ ನಡುವಣ ಮೊದಲ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಇದೀಗ ಉಭಯ ತಂಡಗಳ ನಡುವೆ ಮೂರನೇ ಪಂದ್ಯ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಡಿಯಾ 'ಎ' ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ.

ಭರ್ಜರಿ ಸೆಂಚುರಿ... ಮತ್ತೆ ಅಬ್ಬರಿಸಿದ ಯಶಸ್ವಿ ಜೈಸ್ವಾಲ್
Yashasvi Jaiswal Image Credit source: GettyImages
ಝಾಹಿರ್ ಯೂಸುಫ್
|

Updated on: Nov 07, 2026 | 9:04 AM

Share

ನ್ಯೂಝಿಲೆಂಡ್ ಎ ವಿರುದ್ಧದ 3ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಲಿಂಕನ್​ನ ಬರ್ಟ್ ಸಟ್‌ಕ್ಲಿಫ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಎ ತಂಡದ ನಾಯಕ ಮ್ಯಾಕ್ಸ್ ಚು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದಾರೆ.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಯಶಸ್ವಿ ಜೈಸ್ವಾಲ್ ಕೇವಲ 127 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಹೀಗೆ ವಿಕೆಟ್ ಒಪ್ಪಿಸುವ ಮುನ್ನ ಜೈಸ್ವಾಲ್ 138 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 16 ಫೋರ್​ಗಳೊಂದಿಗೆ 102 ರನ್ ಬಾರಿಸಿದ್ದಾರೆ.

ಇತ್ತ ಯಶಸ್ವಿ ಜೈಸ್ವಾಲ್ ಔಟಾದ ಬಳಿಕ ಇನಿಂಗ್ಸ್ ಕಟ್ಟುವ ಜವಾಬ್ದಾರಿ ವಹಿಸಿಕೊಂಡಿರುವ ಸಾಯಿ ಸುದರ್ಶನ್ 129 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಈ ಮೂಲಕ ಭಾರತ ಎ ತಂಡ 56 ಓವರ್​ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ.

ಹ್ಯಾಗ್ಲಿ ಓವಲ್‌ನಲ್ಲಿ ಅಜೇಯ 155 ರನ್!

ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಿರಾಸೆ ಮೂಡಿಸಿದ್ದ ಯಶಸ್ವಿ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಕೌಂಟರ್ ಅಟ್ಯಾಕ್ ನಡೆಸಿದ್ದರು. ಕೇವಲ 162 ಎಸೆತಗಳನ್ನು ಎದುರಿಸಿದ ಅವರು, ನ್ಯೂಝಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಅಜೇಯ 155 ರನ್ ಚಚ್ಚಿದ್ದರು. ಈ ಸ್ಫೋಟಕ ಶತಕದ ನೆರವಿನಿಂದ ಭಾರತ ‘ಎ’ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಕಳೆದ ಪಂದ್ಯದ ಅಮೋಘ ಫಾರ್ಮ್ ಅನ್ನು ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲೂ ಮುಂದುವರಿಸಿದ ಜೈಸ್ವಾಲ್, ಲಿಂಕನ್‌ನ ಬರ್ಟ್ ಸಟ್‌ಕ್ಲಿಫ್ ಓವಲ್ ಮೈದಾನದಲ್ಲಿ ಮತ್ತೊಮ್ಮೆ ಆತಿಥೇಯರನ್ನು ಕಾಡಿದರು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಜೊತೆಗೂಡಿ ಮೊದಲ ವಿಕೆಟ್‌ಗೆ 175 ರನ್‌ಗಳ ಬೃಹತ್ ಜೊತೆಯಾಟವಾಡಿದ ಜೈಸ್ವಾಲ್, 138 ಎಸೆತಗಳಲ್ಲಿ 102 ರನ್  ಸಿಡಿಸಿದ್ದಾರೆ. ಈ ಮೂಲಕ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ.

ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು , ಕರ್ಟಿಸ್ ಹೀಫಿ , ಡೀನ್ ಫಾಕ್ಸ್‌ಕ್ರಾಫ್ಟ್ , ಮ್ಯಾಥ್ಯೂ ಬಾಯ್ಲ್ , ಟಿಮ್ ರಾಬಿನ್ಸನ್ , ಮ್ಯಾಕ್ಸ್ ಚು (ನಾಯಕ) , ಕ್ಯಾಮರೋನ್ ಪಾಲ್ , ಬ್ರೆಟ್ ರಾಂಡೆಲ್ , ಡನ್ರು ಫರ್ನ್ಸ್ , ಜ್ಯಾಕ್ ಗಿಬ್ಸನ್.

ಇದನ್ನೂ ಓದಿ: 40 ಕೋಟಿ ರೂ.ಗೆ ಬೇಡಿಕೆಯಿಟ್ಟ ಆ ಇಬ್ಬರು ಆಟಗಾರರು ಯಾರು?

ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಧ್ರುವ್ ಜುರೆಲ್ (ನಾಯಕ) , ತಿಲಕ್ ವರ್ಮಾ , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ಪ್ರಸಿದ್ಧ್ ಕೃಷ್ಣ , ಜಸ್​ಪ್ರೀತ್ ಬುಮ್ರಾ , ಮುಖೇಶ್ ಕುಮಾರ್ , ಮುಖೇಶ್ ಚೌಧರಿ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು