AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಕೋಟಿ ರೂ.ಗೆ ಬೇಡಿಕೆಯಿಟ್ಟ ಆ ಇಬ್ಬರು ಆಟಗಾರರು ಯಾರು?

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಅdಊ ಸಹ ಮೆಗಾ ಹರಾಜಿಗೂ ಮುನ್ನ ಭಾರತದ ಇಬ್ಬರು ಅಗ್ರಮಾನ್ಯ ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಗಳ ಎದುರು ಇಟ್ಟಿರುವ ಬರೋಬ್ಬರಿ ₹40 ಕೋಟಿ ಸಂಭಾವನೆಯ ಬೇಡಿಕೆಯಿಂದಾಗಿ! ಹೀಗೆ ಕೋಟಿ ಕೋಟಿ ರೂ. ಬೇಡಿಕೆಯಿಟ್ಟ ಆ ಇಬ್ಬರು ಆಟಗಾರರು ಯಾರು?

40 ಕೋಟಿ ರೂ.ಗೆ ಬೇಡಿಕೆಯಿಟ್ಟ ಆ ಇಬ್ಬರು ಆಟಗಾರರು ಯಾರು?
IPL PlayersImage Credit source: IPL
ಝಾಹಿರ್ ಯೂಸುಫ್
|

Updated on: Nov 07, 2026 | 8:34 AM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ ಮುಂದಿನ ಮೆಗಾ ಹರಾಜಿಗೂ ಮುನ್ನ ಇಬ್ಬರು ಸ್ಟಾರ್ ಆಟಗಾರರು ಬರೋಬ್ಬರಿ ₹40 ಕೋಟಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರೂ ಭಾರತದ ಅಗ್ರಮಾನ್ಯ ಆಟಗಾರರು ಎಂಬ ವಿಚಾರ ತಿಳಿದುಬಂದಿದ್ದರೂ, ಅವರ ಹೆಸರುಗಳು ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಮುಂಬರುವ ಐಪಿಎಲ್ ಮೆಗಾ ಹರಾಜಿಗಿಂತ ಮುಂಚಿತವಾಗಿ ತಮ್ಮನ್ನು ತಂಡದಲ್ಲೇ ಉಳಿಸಿಕೊಳ್ಳಬೇಕಾದರೆ ತಲಾ ₹40 ಕೋಟಿ ನೀಡಲೇಬೇಕು ಎಂದು ಈ ಆಟಗಾರರು ತಮ್ಮ ಫ್ರಾಂಚೈಸಿಗಳಿಗೆ ಈಗಾಗಲೇ ಷರತ್ತು ವಿಧಿಸಿದ್ದಾರೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.

2028ರ ಐಪಿಎಲ್ ಸೀಸನ್‌ಗಾಗಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ತಮ್ಮ ಷರತ್ತುಗಳಿಗೆ ಒಪ್ಪಿದರೆ ಮಾತ್ರ ತಂಡದಲ್ಲಿ ಉಳಿಯುವುದಾಗಿ, ಇಲ್ಲದಿದ್ದರೆ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಈ ಆಟಗಾರರು ತಿಳಿಸಿದ್ದಾರೆ. ಈ ವಿಚಾರ ಹೊರಬರುತ್ತಿದ್ದಂತೆ, ಫ್ರಾಂಚೈಸಿಗಳಿಗೆ ಅಲ್ಟಿಮೇಟಮ್ ನೀಡಿರುವ ಆ ಇಬ್ಬರು ಸ್ಟಾರ್ ಆಟಗಾರರು ಯಾರು ಎಂಬ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಪ್ರಶ್ನೆಗೆ ಉತ್ತರವಾಗಿ ಸದ್ಯ ಐದು ಪ್ರಮುಖ ಆಟಗಾರರ ಹೆಸರುಗಳು ಜೋರಾಗಿ ಕೇಳಿಬರುತ್ತಿವೆ. ಫ್ರಾಂಚೈಸಿಗಳ ಮುಂದೆ ₹40 ಕೋಟಿಯ ಬೃಹತ್ ಬೇಡಿಕೆ ಇಟ್ಟಿರುವ ಇಬ್ಬರು ಆಟಗಾರರು ಇದೇ ಐವರ ಪೈಕಿಯವರೇ ಇರಬಹುದು ಎಂದು ಅಂದಾಜಿಸಲಾಗಿದೆ. ಆ ಐದು ಜನ ಸ್ಟಾರ್ ಆಟಗಾರರೆಂದರೆ…

ಐಪಿಎಲ್ ವಲಯದಲ್ಲಿ ಚರ್ಚೆಯಾಗುತ್ತಿರುವ ಈ ಐದು ಜನ ಸ್ಟಾರ್ ಆಟಗಾರರ ಪ್ರಸ್ತುತ ಸಂಭಾವನೆ (2025-2027 ಸೈಕಲ್ ವಿವರ) ಮತ್ತು ಇವರ ಮೇಲೆಯೇ ಏಕೆ ಎಲ್ಲರಿಗೂ ಅನುಮಾನ (ಡೌಟ್) ಕಾಡುತ್ತಿದೆ ಎಂಬ ವಿಶ್ಲೇಷಣೆ ಇಲ್ಲಿದೆ:

ಶ್ರೇಯಸ್ ಅಯ್ಯರ್:

  • ಪ್ರಸ್ತುತ ಸಂಭಾವನೆ: ₹26.75 ಕೋಟಿ (ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ).

ಕ್ರಿಕ್​ಬಝ್​ ವರದಿಯಲ್ಲಿ ಒಬ್ಬ ಆಟಗಾರನ ₹40 ಕೋಟಿ ಬೇಡಿಕೆಯು ನಾಯಕತ್ವದ ಒಪ್ಪಂದದೊಂದಿಗೆ ಲಿಂಕ್ ಆಗಿದೆ ಎಂದು ಹೇಳಲಾಗಿದೆ. ಶ್ರೇಯಸ್ ಅಯ್ಯರ್ ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ನಾಯಕರಾಗಿದ್ದು, ಹೆಚ್ಚಿನ ಸಂಭಾವನೆ ಸಿಗಲಿಲ್ಲ ಎಂಬ ಕಾರಣಕ್ಕೇ ಕೆಕೆಆರ್ ತೊರೆದು ಹರಾಜಿಗೆ ಬಂದಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಇವರ ನಾಯಕತ್ವದ ಮೌಲ್ಯ ಹಾಗೂ ಪ್ರಸ್ತುತ ಪಡೆಯುತ್ತಿರುವ ಭಾರಿ ಮೊತ್ತದ ಹಿನ್ನೆಲೆಯಲ್ಲಿ ಇವರ ಮೇಲೆ ಬಲವಾದ ಅನುಮಾನವಿದೆ.

ಹಾರ್ದಿಕ್ ಪಾಂಡ್ಯ:

  • ಪ್ರಸ್ತುತ ಸಂಭಾವನೆ: ₹16.35 ಕೋಟಿ (ಮುಂಬೈ ಇಂಡಿಯನ್ಸ್ ನಾಯಕ).

ಹಾರ್ದಿಕ್ ಪಾಂಡ್ಯ ಭಾರತದ ಅಗ್ರಮಾನ್ಯ ಟಿ20 ಆಲ್-ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪ್ರಸ್ತುತ ಕ್ಯಾಪ್ಟನ್. ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಇವರ ಮೌಲ್ಯ ₹30-35 ಕೋಟಿ ದಾಟುವುದು ಗ್ಯಾರಂಟಿ ಎಂಬುದು ಎಲ್ಲರಿಗೂ ಗೊತ್ತು. ತಮಗಿಂತ ಕಡಿಮೆ ಪ್ರದರ್ಶನ ನೀಡುವ ಆಟಗಾರರು ಹರಾಜಿನಲ್ಲಿ ₹26 ಕೋಟಿಗಿಂತ ಹೆಚ್ಚು ಪಡೆಯುತ್ತಿರುವಾಗ, ಭಾರತ ತಂಡದ ಸ್ಟಾರ್ ಆಲ್-ರೌಂಡರ್ ಆಗಿ ತಮಗೆ ₹40 ಕೋಟಿ ಸಿಗಬೇಕು ಎಂಬ ಬೇಡಿಕೆ ಇವರದ್ದೇ ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.

ಜಸ್‌ಪ್ರೀತ್ ಬುಮ್ರಾ

  • ಪ್ರಸ್ತುತ ಸಂಭಾವನೆ: ₹18 ಕೋಟಿ (ಮುಂಬೈ ಇಂಡಿಯನ್ಸ್).

ಜಸ್​ಪ್ರೀತ್ ಬುಮ್ರಾ ಸದ್ಯ ವಿಶ್ವದ ನಂ.1 ಟಿ20 ಬೌಲರ್. ಪಂದ್ಯದ ಗತಿಯನ್ನೇ ಬದಲಿಸಬಲ್ಲ ಇವರ ಸಾಮರ್ಥ್ಯಕ್ಕೆ ಯಾವುದೇ ಫ್ರಾಂಚೈಸಿಯಾದರೂ ₹40 ಕೋಟಿ ನೀಡಲು ಸಿದ್ಧವಿರುತ್ತದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಗಿಂತ ಕಡಿಮೆ ಅಥವಾ ಸಮಾನ ಸಂಭಾವನೆ ಪಡೆಯುತ್ತಿರುವುದರಿಂದ, ತಮ್ಮ ನಿಜವಾದ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಇವರು ₹40 ಕೋಟಿಗೆ ಬೇಡಿಕೆ ಇಟ್ಟಿರುವ ಸಾಧ್ಯತೆ ದಟ್ಟವಾಗಿದೆ.

ಶುಭ್‌ಮನ್ ಗಿಲ್:

  • ಪ್ರಸ್ತುತ ಸಂಭಾವನೆ: ₹16.50 ಕೋಟಿ (ಗುಜರಾತ್ ಟೈಟನ್ಸ್ ನಾಯಕ).

ಶುಭ್‌ಮನ್ ಗಿಲ್ ಭಾರತ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಹಾಗೂ ಗುಜರಾತ್ ಟೈಟಾನ್ಸ್ ತಂಡದ ನಾಯಕ ಮತ್ತು ಪ್ರಮುಖ ಬ್ರ್ಯಾಂಡ್ ಫೇಸ್ ಆಗಿದ್ದಾರೆ. ಭವಿಷ್ಯದ ದೀರ್ಘಾವಧಿ ನಾಯಕನಾಗಿ ಇವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಫ್ರಾಂಚೈಸಿ ಹರಸಾಹಸ ಪಡಬೇಕಾಗುತ್ತದೆ. ಅಷ್ಟೇ ಅಲ್ಲದೆ, ಕ್ರಿಕ್‌ಬಝ್ ವರದಿಯಲ್ಲಿ ಉಲ್ಲೇಖಿಸಲಾಗಿರುವ ನಾಯಕತ್ವದ ಷರತ್ತಿನ ಲಿಂಕ್ ಕೂಡ ಗಿಲ್‌ಗೆ ಅನ್ವಯಿಸುತ್ತದೆ. ಒಂದು ವೇಳೆ ಇವರು ಮುಕ್ತ ಹರಾಜಿಗೆ ಬಂದರೆ ಭಾರಿ ಪೈಪೋಟಿ ಏರ್ಪಡುವುದು ನಿಶ್ಚಿತ. ಆ ಕಾರಣಕ್ಕಾಗಿಯೇ, ಫ್ರಾಂಚೈಸಿಯಲ್ಲಿ ಮುಂದುವರಿಯಲು ಇವರೂ ಸಹ ನಾಯಕತ್ವದ ಷರತ್ತಿನೊಂದಿಗೆ ದೊಡ್ಡ ಮೊತ್ತದ ಬೇಡಿಕೆ ಇಟ್ಟಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಭಿಷೇಕ್ ಶರ್ಮಾ:

  •  ಪ್ರಸ್ತುತ ಸಂಭಾವನೆ: ₹14 ಕೋಟಿ (ಸನ್‌ರೈಸರ್ಸ್ ಹೈದರಾಬಾದ್).

ಇತ್ತೀಚಿನ ಸೀಸನ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಮತ್ತು ಭಾರತ ತಂಡದ ಪರ ಇವರು ತೋರುತ್ತಿರುವ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿದೆ. ಟಿ20 ಮಾದರಿಯಲ್ಲಿ ಪವರ್‌ಪ್ಲೇ ಓವರ್‌ಗಳಲ್ಲೇ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಇಂತಹ ಯುವ ಭಾರತೀಯ ಓಪನರ್ ಹರಾಜಿಗೆ ಬಂದರೆ ಕೋಟಿಗಳ ಮಳೆ ಸುರಿಯುವುದು ನಿಶ್ಚಿತ. ಆ ಕಾರಣಕ್ಕೆ ಇವರೂ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಇದನ್ನೂ ಓದಿ: ಎಲ್ಲರಿಗೂ ಧನ್ಯವಾದ… ಟೆಸ್ಟ್​​ ಕ್ರಿಕೆಟ್​ಗೆ ಮೊಹಮ್ಮದ್ ಶಮಿ ದಿಢೀರ್ ನಿವೃತ್ತಿ!

ಒಟ್ಟಾರೆಯಾಗಿ ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ಈ ₹40 ಕೋಟಿಯ ಬೃಹತ್ ಬೇಡಿಕೆಯು ಫ್ರಾಂಚೈಸಿಗಳಲ್ಲಿ ಹೊಸ ತಲ್ಲಣ ಸೃಷ್ಟಿಸಿದೆ. ಈ ಸ್ಟಾರ್ ಆಟಗಾರರ ಷರತ್ತಿಗೆ ಫ್ರಾಂಚೈಸಿಗಳು ಮಣಿದು ಅವರನ್ನೇ ಉಳಿಸಿಕೊಳ್ಳುತ್ತಾವಾ ಅಥವಾ ಮುಂಬರುವ ಮೆಗಾ ಹರಾಜಿನಲ್ಲಿ ಹೊಸ ದಾಖಲೆಯ ಇತಿಹಾಸ ಬರೆಯಲು ಹರಾಜು ಕಣಕ್ಕೆ ಬಿಡುತ್ತಾವಾ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು