AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 2019 ರ ನಂತರ ಹೀಗೊಂದು ಬೇಡದ ದಾಖಲೆ ಬರೆದ ಟೀಂ ಇಂಡಿಯಾ

Team India's Double T20 Series Defeat: ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಸೋಲನುಭವಿಸಿದೆ. ಇದು ಸತತ ಎರಡನೇ ಟಿ20 ಸರಣಿ ಸೋಲಾಗಿದ್ದು, ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧವೂ ಸರಣಿ ಕಳೆದುಕೊಂಡಿತ್ತು. ಈ ಸೋಲು 7 ವರ್ಷಗಳ ನಂತರ ತಂಡವು ಎರಡು ಸತತ ಟಿ20 ಸರಣಿಗಳನ್ನು ಕಳೆದುಕೊಂಡಿರುವ ದಾಖಲೆಯನ್ನು ಪುನರಾವರ್ತಿಸಿದೆ. 2019ರಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಇದೇ ಮೊದಲ ಬಾರಿಗೆ.

ಪೃಥ್ವಿಶಂಕರ
|

Updated on: Jul 10, 2026 | 7:56 AM

Share
ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3-0 ಅಂತರದಿಂದ ಕಳೆದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇಲ್ಲದಿದ್ದರೆ, ಈ ಪಂದ್ಯದಲ್ಲೂ ಭಾರತ ಸೋಲುವ ಸಾಧ್ಯತೆಗಳಿತ್ತು. ಈ ಸರಣಿ ಸೋಲಿನೊಂದಿಗೆ ಭಾರತ ತಂಡ 7 ವರ್ಷಗಳ ಬಳಿಕ ಸತತ ಎರಡು ಟಿ20 ಸರಣಿಗಳನ್ನು ಸೋತ ಬೇಡದ ದಾಖಲೆಯನ್ನು ಬರೆದಿದೆ (PC-BCCI).

1 / 5
ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯನ್ನು ಸೋಲುವುದಕ್ಕೂ ಮುನ್ನ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧವೂ ಸರಣಿಯನ್ನು ಕಳೆದುಕೊಂಡಿತ್ತು. ಈ ಸತತ ಎರಡು ಸರಣಿ ಸೋಲುಗಳೊಂದಿಗೆ ಟೀಂ ಇಂಡಿಯಾ 2019 ರ ಬಳಿಕ ಸತತ ಎರಡು ಟಿ20 ಸರಣಿಗಳನ್ನು ಸೋತ ಬೇಡದ ದಾಖಲೆಗೆ ಕೊರಳೊಡ್ಡಿದೆ (PC-BCCI).

2 / 5
2019 ರಲ್ಲಿ ಮೂರು ಪಂದ್ಯಗಳ ಟಿ20 ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಆ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು. ಆ ಬಳಿಕ ತನ್ನ ತವರು ನೆಲದಲ್ಲೇ ಅಂದರೆ ಭಾರತದಲ್ಲೇ ಆತಿಥೇಯ ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ 2-0 ಅಂತರದಿಂದ ಮಣಿಸಿತ್ತು (PC-HT).

3 / 5
ಇದೀಗ 2026 ರಲ್ಲಿ 7 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದೆ. ಮೊಟ್ಟ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸೋಲುವುದರ ಜೊತೆಗೆ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಸೋತು ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಯಾವುದೇ ಮಾದರಿಯಲ್ಲಿ ಭಾರತದ ವಿರುದ್ಧ ಐರ್ಲೆಂಡ್ ಸರಣಿ ಗೆದ್ದಿದ್ದು ಇದೇ ಮೊದಲು. ಈ ಸೋಲಿನ ಆಘಾತದೊಂದಿಗೆ ಇಂಗ್ಲೆಂಡ್​ಗೆ ಬಂದಿದ್ದ ಟೀಂ ಇಂಡಿಯಾ ಇಲ್ಲೂ ಅದೇ ಸೋಲಿನ ದವಡೆಗೆ ಸಿಲುಕಿದೆ (PC-BCCI).

4 / 5
ಇನ್ನು 4ನೇ ಟಿ20 ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ 158 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಕೇವಲ 1 ವಿಕೆಟ್ ಕಳೆದುಕೊಂಡು 14ನೇ ಓವರ್​ನಲ್ಲೇ ಗೆಲುವಿನ ದಡ ಮುಟ್ಟಿತು (PC-BCCI).

5 / 5
Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ

ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು

ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!

ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ

ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?

ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’

ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ

ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ

ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್