AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವಾಳಿಯ ಅಂಚಿನಲ್ಲಿ ಪಾಕ್: ವಿಶ್ವಬ್ಯಾಂಕ್‌ನಿಂದ 3000 ಸಾವಿರ ಕೋಟಿ ರೂ. ನೆರವು, ಅಂತ್ಯಕ್ರಿಯೆಗೂ ಸಾಲ ಮಾಡುವ ಸ್ಥಿತಿ

ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ವಿಶ್ವಬ್ಯಾಂಕ್ 3,100 ಕೋಟಿ ರೂ. ನೆರವು ನೀಡಿದೆ. ಆದರೂ, ಜನರ ಸ್ಥಿತಿ ಚಿಂತಾಜನಕ. ಹಣದುಬ್ಬರದಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಅಂತ್ಯಕ್ರಿಯೆಗೂ ಸಾಲ ಪಡೆಯುವ ಪರಿಸ್ಥಿತಿ ಬಂದಿದೆ. ದೇಶವು ಸಾಲದ ಸುಳಿಯಲ್ಲಿ ಸಿಲುಕಿದ್ದು, ಆರ್ಥಿಕ ಸುಧಾರಣೆಗಳು ಅನಿವಾರ್ಯವಾಗಿವೆ.

ದಿವಾಳಿಯ ಅಂಚಿನಲ್ಲಿ ಪಾಕ್: ವಿಶ್ವಬ್ಯಾಂಕ್‌ನಿಂದ 3000 ಸಾವಿರ ಕೋಟಿ ರೂ. ನೆರವು, ಅಂತ್ಯಕ್ರಿಯೆಗೂ ಸಾಲ ಮಾಡುವ ಸ್ಥಿತಿ
ವಿಶ್ವ ಬ್ಯಾಂಕ್
ನಯನಾ ರಾಜೀವ್
|

Updated on: Jul 10, 2026 | 8:25 AM

Share

ಇಸ್ಲಾಮಾಬಾದ್, ಜುಲೈ 10: ಪಾಕಿಸ್ತಾನ(Pakistan)ದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಜಾಗತಿಕ ಹಣಕಾಸು ಸಂಸ್ಥೆಯಾದ ವಿಶ್ವಬ್ಯಾಂಕ್ ಈಗ 375.9 ಮಿಲಿಯನ್ ಡಾಲರ್ ಅಂದರೆ ಸುಮಾರು ಸುಮಾರು 3,100 ಕೋಟಿಗೂ ಅಧಿಕ ರೂಪಾಯಿಯ ತುರ್ತು ಆರ್ಥಿಕ ನೆರವನ್ನು ಅನುಮೋದಿಸಿದೆ. ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಮತ್ತು ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಈ ಸಾಲ ನೀಡಲಾಗುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿದ್ದರೂ, ಪಾಕಿಸ್ತಾನದ ಸಾಮಾನ್ಯ ಜನಸಾಮಾನ್ಯರ ಬದುಕು ಮಾತ್ರ ನರಕಸದೃಶವಾಗಿದೆ.

ಷರತ್ತುಬದ್ಧ ಸಹಾಯ ನೀಡಿದ ವಿಶ್ವಬ್ಯಾಂಕ್

ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯು ಈ ನಿಧಿಗೆ ಒಪ್ಪಿಗೆ ಸೂಚಿಸಿದೆ. ಆದರೆ, ಈ ಬಾರಿ ಪಾಕಿಸ್ತಾನಕ್ಕೆ ಹಣವನ್ನು ಸುಲಭವಾಗಿ ಬಿಡುಗಡೆ ಮಾಡುತ್ತಿಲ್ಲ. ವಿಶ್ವಬ್ಯಾಂಕ್ ವಿಧಿಸಿರುವ ಕಠಿಣ ಆರ್ಥಿಕ ಸುಧಾರಣಾ ಗುರಿಗಳನ್ನು ಮತ್ತು ಪಾರದರ್ಶಕತೆಯನ್ನು ಪಾಕಿಸ್ತಾನ ಸರ್ಕಾರ ಸಾಬೀತುಪಡಿಸಿದ ನಂತರವಷ್ಟೇ ಹಂತ-ಹಂತವಾಗಿ ಹಣ ಕೈಸೇರಲಿದೆ.

ಈ ಹಣವನ್ನು ಸಾರ್ವಜನಿಕ ಹಣಕಾಸು ವ್ಯವಸ್ಥೆ ಬಲಪಡಿಸಲು, ಉದ್ಯೋಗ ಸೃಷ್ಟಿ ಮತ್ತು ಅಗತ್ಯ ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ಬಳಸಬೇಕಾಗುತ್ತದೆ.

ಪಾಕಿಸ್ತಾನಿಗಳ ಬಳಿ ಅಂತ್ಯಕ್ರಿಯೆಗೂ ಹಣವಿಲ್ಲ

ವಿಶ್ವಬ್ಯಾಂಕ್‌ನಿಂದ ಶತಕೋಟಿ ಡಾಲರ್ ಸಾಲ ಪಡೆಯುತ್ತಿದ್ದರೂ, ಪಾಕಿಸ್ತಾನದ ತಳಮಟ್ಟದ ವಾಸ್ತವ ಚಿತ್ರಣ ಅತ್ಯಂತ ಕರುಣಾಜನಕವಾಗಿದೆ.ದೇಶದಲ್ಲಿ ದಿನಬಳಕೆಯ ವಸ್ತುಗಳು, ಗೋಧಿ ಹಿಟ್ಟು, ಹಾಲು ಮತ್ತು ಇಂಧನದ ಬೆಲೆಗಳು ಗಗನಕ್ಕೇರಿವೆ.

ಮತ್ತಷ್ಟು ಓದಿ: 38 ಬೇಡಿಕೆ, 48 ಗಂಟೆಯ ಗಡುವು; ಪಿಒಕೆಯಲ್ಲಿ ಮತ್ತೆ ಸಂಘರ್ಷದ ಭೀತಿ

ಅಂತ್ಯಕ್ರಿಯೆಗೂ ಸಾಲ

ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಅಲ್ಲಿನ ಮಧ್ಯಮ ಮತ್ತು ಬಡ ವರ್ಗದ ಜನರು ತಮ್ಮ ಕುಟುಂಬದ ಸದಸ್ಯರು ಮರಣ ಹೊಂದಿದಾಗ, ಅವರ ಅಂತ್ಯಕ್ರಿಯೆ ನಡೆಸಲು ಸಹ ಹಣವಿಲ್ಲದೇ ಸ್ನೇಹಿತರು ಅಥವಾ ಲೇವಾದೇವಿಗಾರರಿಂದ ಸಾಲ ಪಡೆಯುವ ದುಸ್ಥಿತಿಗೆ ತಲುಪಿದ್ದಾರೆ. ಬದುಕಲು ಮಾತ್ರವಲ್ಲ, ಸಾಯಲೂ ಪಾಕಿಸ್ತಾನದಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಕಿಸ್ತಾನವು ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 7 ಬಿಲಿಯನ್ ಡಾಲರ್ ಬೇಲ್‌ಔಟ್ ಪ್ಯಾಕೇಜ್ ಪಡೆದಿದೆ. ಆ ಒಪ್ಪಂದದ ಭಾಗವಾಗಿ ಜನರ ಮೇಲೆ ಭಾರಿ ತೆರಿಗೆ ವಿಧಿಸಿರುವುದರಿಂದ ದೇಶದಲ್ಲಿ ಹಾಹಾಕಾರ ಎದ್ದಿದೆ.

ಪಾಕಿಸ್ತಾನವು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ಬಿಲಿಯನ್ ಗಟ್ಟಲೆ ಡಾಲರ್ ಸಾಲ ಬಾಕಿ ಉಳಿಸಿಕೊಂಡಿದೆ. ತನ್ನ ಹಳೆಯ ಸಾಲದ ಬಡ್ಡಿಯನ್ನು ತೀರಿಸಲು ಮತ್ತೊಂದು ಜಾಗತಿಕ ಸಂಸ್ಥೆಯಿಂದ ಹೊಸ ಸಾಲ ಪಡೆಯುವ ಸಾಲದ ಸುಳಿಯಲ್ಲಿ ದೇಶ ಸಂಪೂರ್ಣ ಸಿಲುಕಿದೆ.

ವಿಶ್ವಬ್ಯಾಂಕ್‌ನ ಈ ಹೊಸ ನೆರವು ಪಾಕಿಸ್ತಾನದ ಆಡಳಿತಕ್ಕೆ ತಾತ್ಕಾಲಿಕ ಉಪಶಮನ ನೀಡಬಹುದಾದರೂ, ದೇಶದ ಆಂತರಿಕ ನೀತಿಗಳು ಮತ್ತು ರಾಜಕೀಯ ಅಸ್ಥಿರತೆ ಬದಲಾಗದ ಹೊರತು ಅಲ್ಲಿನ ಬಡ ಜನರ ಬದುಕು ಹಸನಾಗುವುದು ಕಷ್ಟಸಾಧ್ಯ ಎನ್ನುತ್ತಾರೆ ಆರ್ಥಿಕ ತಜ್ಞರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?