ರೈತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅವರು ವಿರೋಧ ಪಕ್ಷದ ಸಾಲಲ್ಲಿ ಕೂತ್ಕೋತಾರೆ -ಬಿ.ವೈ.ವಿಜಯೇಂದ್ರ

ಕಾಂಗ್ರೆಸ್ ದಬ್ಬಾಳಿಕೆ ಎದುರಿಸುವ ಶಕ್ತಿ ಮಸ್ಕಿ ಕ್ಚೇತ್ರದ ಕಾರ್ಯಕರ್ತರಲ್ಲಿದೆ. ತಂತ್ರಗಾರಿಕೆಯನ್ನ ನಮ್ಮ ಕಾರ್ಯಕರ್ತರು ಮಾಡ್ತಾರೆ. ಸಂಘಟನೆಗೆ ಇಲ್ಲಿ ಶಕ್ತಿಯಿದೆ ಎಂದು ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ಹೊತ್ತಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಿವಿ 9ಗೆ ನೀಡಿದ ಮೊದಲ ಸಂದರ್ಶನದಲ್ಲಿ ಹೇಳಿದ್ದಾರೆ.

ರೈತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅವರು ವಿರೋಧ ಪಕ್ಷದ ಸಾಲಲ್ಲಿ ಕೂತ್ಕೋತಾರೆ -ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Mar 20, 2021 | 4:56 PM

ರಾಯಚೂರು: ಕಾಂಗ್ರೆಸ್ ದಬ್ಬಾಳಿಕೆ ಎದುರಿಸುವ ಶಕ್ತಿ ಮಸ್ಕಿ ಕ್ಚೇತ್ರದ ಕಾರ್ಯಕರ್ತರಲ್ಲಿದೆ. ತಂತ್ರಗಾರಿಕೆಯನ್ನ ನಮ್ಮ ಕಾರ್ಯಕರ್ತರು ಮಾಡ್ತಾರೆ. ಸಂಘಟನೆಗೆ ಇಲ್ಲಿ ಶಕ್ತಿಯಿದೆ ಎಂದು ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ಹೊತ್ತಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಿವಿ 9ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ, ಪಕ್ಷಾಂತರ ವಿಚಾರವನ್ನ ಕಾಂಗ್ರೆಸ್​ ಪ್ರಸ್ತಾಪ ಮಾಡಿದ್ರೇ ಅದು ಅವರ ಮೂರ್ಖತನದ ಪರಮಾವಧಿ. ಅದರಲ್ಲೂ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತಾಪಗೌಡ ಪಾಟೀಲ ಪಕ್ಷ ಸೇರಿದ್ದಾರೆ. ಬಿಜೆಪಿ ಸರ್ಕಾರದ ರಚನೆಗೆ ಪ್ರತಾಪಗೌಡ ಮೊದಲು ತ್ಯಾಗ ಮಾಡಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತಾಪಗೌಡ ಪಾಟೀಲ​ ಅವರು ಬಿಜೆಪಿಗೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

‘5A ಉಪಕಾಲುವೆ ವಿಚಾರವಾಗಿ ಚುನಾವಣೆಯನ್ನು ಬಹಿಷ್ಕಾರ ಮಾಡೋದು ಪರಿಹಾರವಲ್ಲ’ 5A ಉಪಕಾಲುವೆ ವಿಚಾರವಾಗಿ ಚುನಾವಣೆಯನ್ನು ಬಹಿಷ್ಕಾರ ಮಾಡೋದು ಪರಿಹಾರವಲ್ಲ. ಕಾಂಗ್ರೆಸ್ ಪಕ್ಷಕ್ಕೆ ರೈತರು ಮತ ಹಾಕಿದ್ರೆ ಅವರು ವಿರೋಧ ಪಕ್ಷದ ಸಾಲಲ್ಲಿ ಕೂತ್ಕೋತಾರೆ. ಮಸ್ಕಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇತ್ರದ ಜನ ಪ್ರತಾಪಗೌಡರ ಕೈ ಹಿಡೀತಾರೆ ಎಂದು ಬಿಎಸ್​ವೈ ಪುತ್ರ ವಿಜಯೇಂದ್ರ ಹೇಳಿದರು.

ಎಡದಂಡೆ ಕಾಲುವೆ ‌ನೀರಿನ ಹೆಸರಲ್ಲಿ ಪಾಲಿಟಿಕ್ಸ್ ನಡೆಯುತ್ತಿರುವ ವಿಚಾರವಾಗಿ 30 ವರ್ಷ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ ಕಾಲುವೆ ನೀರಿನ ಸಮಸ್ಯಗೆ ಯಾಕೆ ಪರಿಹಾರ ಮಾಡಿಕೊಡಲಿಲ್ಲ? ಎಂದು ಕಾಂಗ್ರೆಸ್​ ನಾಯಕರಿಗೆ ವಿಜಯೇಂದ್ರ ನೇರವಾಗಿ ಪ್ರಶ್ನಿಸಿದರು.

BS YEDIYURAPPA 2

ಬಿ.ಎಸ್​.ಯಡಿಯೂರಪ್ಪ

‘ನಾಳೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗುವ ನಿರೀಕ್ಷೆ ಇದೆ’ ಇತ್ತ, ಏ.17ರಂದು ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗುವ ನಿರೀಕ್ಷೆ ಇದೆ ಎಂದು ವಿಜಯನಗರದ ಜಿಂದಾಲ್ ಏರ್​ಪೋರ್ಟ್​ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲು ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆಗೆ ಸಭೆ ನಡೆದಿದೆ. ಇಂದು ಆಕಾಂಕ್ಷಿಗಳ ಪಟ್ಟಿಯನ್ನ ದೆಹಲಿಗೆ ಕಳುಹಿಸಲಾಗಿದೆ. ನಾಳೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗುವ ನಿರೀಕ್ಷೆಯಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಹೈಕಮಾಂಡ್ ಘೋಷಿಸುತ್ತೆ ಎಂದು ಯಡಿಯೂರಪ್ಪ ಹೇಳಿದರು. ಉಪಚುನಾವಣೆ​ ನಡೆಯುವ 3 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜಿಂದಾಲ್ ಏರ್​ಪೋರ್ಟ್​ನಲ್ಲಿ ಸಿಎಂ ಬಿಎಸ್​ವೈ ಹೇಳಿದರು.

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು ಇತ್ತ, ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿಯಲ್ಲಿ ಭಾರಿ ಕಸರತ್ತು ನಡೆದಿದೆ. ಬೆಳಗಾವಿ ಕ್ಷೇತ್ರದಲ್ಲಿ ದಿವಂಗತ ಸುರೇಶ್​ ಅಂಗಡಿ ಕುಟುಂಬಕ್ಕೆ ಟಿಕೆಟ್ ವಿಚಾರವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿರಲು ಸಭೆಯಲ್ಲಿ ಸಹಮತ ಕೈಗೊಳ್ಳಲಾಯಿತು. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಹಮತದಿಂದ ಒಪ್ಪಿಗೆ ನೀಡಲಾಯಿತು. ಒಂದು ವೇಳೆ, ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡಿದ್ರೆ ಬೆಂಬಲಿಸಲು ನಿರ್ಧಾರ ಕೈಗೊಳ್ಳಲಾಯಿತು.

ಇತ್ತ, ಅಭ್ಯರ್ಥಿಗಳ ಆಯ್ಕೆಯನ್ನು ವರಿಷ್ಠರ‌ ನಿರ್ಧಾರಕ್ಕೆ ಬಿಟ್ಟ ನಾಯಕರು ತೇಜಸ್ವಿನಿ ಅನಂತಕುಮಾರ್‌ ಹೆಸರನ್ನು ಶಿಫಾರಸು ಮಾಡಿ ಕಳೆದ ಬಾರಿ ಮುಜುಗರ ಅನುಭವಿಸಿದ್ದ ಸ್ಥಿತಿ ಎದುರಾಗಿತ್ತು. ಹಾಗಾಗಿ, ರಾಜ್ಯ ಬಿಜೆಪಿಯ ನಾಯಕರು ಇಂಥ ಪ್ರಸಂಗ ಮರುಕಳಿಸದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಿದ್ದಾರೆ.

DK SHIVAKUMAR 3

ಡಿ.ಕೆ.ಶಿವಕುಮಾರ್​

‘ಮೂರು ಕ್ಷೇತ್ರಗಳಲ್ಲಿ ಮತದಾರರು ನಮ್ಮ ಪರವಾಗಿದ್ದಾರೆ’ ಇತ್ತ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮವಾಗಿಲ್ಲ. ಮಾ.29ರಂದು ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಾರೆ. ಮಾ.30ಕ್ಕೆ ಮಸ್ಕಿ ಕ್ಷೇತ್ರದ ‘ಕೈ’ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಮತದಾರರು ನಮ್ಮ ಪರವಾಗಿದ್ದಾರೆ. ಮತದಾರರ ಮನವೊಲಿಸಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ಭ್ರಷ್ಟ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಬೇಕು’ ಏಪ್ರಿಲ್ 17ರಂದು 3 ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಬೈಎಲೆಕ್ಷನ್​ ತಂತ್ರಗಾರಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ. ಭ್ರಷ್ಟ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಖಂಡ್ರೆ ಹೇಳಿದರು.

ಉಪಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬೆಳಗಾವಿ ಬೈಎಲೆಕ್ಷನ್​ಗೆ ನಮ್ಮ ಅಭ್ಯರ್ಥಿ ಆಯ್ಕೆಯಾಗಿದೆ. ಕಾಂಗ್ರೆಸ್​ನಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಹಲವರು ಇದ್ದಾರೆ. ಉಪಚುನಾವಣೆ ನಡೆಯುವ 3 ಕ್ಷೇತ್ರಗಳಲ್ಲೂ ನಾವು ಗೆಲ್ತೇವೆ. ರಾಜ್ಯ ಬಿಜೆಪಿ ಸರ್ಕಾರದ ಹನಿಮೂನ್ ಅವಧಿ ಮುಗಿದಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ರೈತರು, ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ತಂದಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಸರ್ಕಾರವನ್ನ ಟೀಕಿಸಿದರು.

ಇದನ್ನೂ ಓದಿ:ರಮೇಶ್​​ ಜಾರಕಿಹೊಳಿ ‘ಸಿಡಿ’ ಪ್ರಕರಣದ ಶಂಕಿತ ಆರೋಪಿ ಲಕ್ಷ್ಮೀಪತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ