ಕೊಪ್ಪಳ: ಬೆಡ್ ಸಿಗದೆ, ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿಲ್ಲ, ಸ್ಮಾರ್ಟ್ಫೋನ್ ನೋಡಿ ಭಯದಿಂದಲೇ ಜನರು ಸಾಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಸ್ಮಾರ್ಟ್ಫೋನ್ ಕೊಡಬೇಡಿ. ಎಂಪಿ, ಎಂಎಲ್ಎ ಹೇಳಿದರೂ ಸ್ಮಾರ್ಟ್ಫೋನ್ ಕೊಡಬೇಡಿ ಎಂದು ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ವೈದ್ಯರಿಗೆ ಪಾಠ ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ಉಪವಿಭಾಗ ಆಸ್ಪತ್ರೆಯ ವೈದ್ಯ ಡಾ.ಸವಡಿ ಅವರಿಗೆ ಶಾಸಕ ಬಸವರಾಜ ದಡೇಸುಗೂರು ಕೊರೊನಾ ಸೋಂಕಿತರಿಗೆ ನೀವೇ ಧೈರ್ಯ ಹೇಳಿ ಎಂದು ಸಲಹೆಯನ್ನೂ ನೀಡಿದರು. ಕೊರೊನಾ ದೊಡ್ಡ ಕಾಯಿಲೆಯೇ ಅಲ್ಲ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಸ್ಮಾರ್ಟ್ಫೋನ್ ಕೊಡಬೇಡಿ. ಮನೆಯವರೊಂದಿಗೆ ಮಾತಾಡಲು ಬೇಸಿಕ್ ಮೊಬೈಲ್ನ್ನಷ್ಟೇ ಕೊಡಿ. ನೀವು ಏನೇ ಹೇಳಿದರೂ ಸ್ಮಾರ್ಟ್ಫೋನ್ ನೋಡಿದರೆ ಮುಗಿಯಿತು. ಸ್ಮಾರ್ಟ್ಫೋನ್ ನೋಡಿ ಭಯದಿಂದ ಜನರು ಸಾಯುತ್ತಿದ್ದಾರೆ ಎಂದು ಅವರು ಸಲಹೆ ವೈದ್ಯರಿಗೆ ಸಲಹೆ ನೀಡಿದರು.
ಇದನ್ನೂ ಓದಿ: Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
(BJP MLA Basavaraj Dadesugur MLA says do not give smartphones to covid patients they die by saw smartphones)