ಖಾಸಗಿ ಆಸ್ಪತ್ರೆಗಳು ಸುಖಾಸುಮ್ಮನೆ ಬೆಡ್ ಇಲ್ಲ ಎನ್ನುವಂತಿಲ್ಲ; ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸಿಟಿಜನ್​​ ಹೆಲ್ಪ್​ ಡೆಸ್ಕ್

Citizen Help Desk in Bengaluru: ಈ ವ್ಯವಸ್ಥೆಯಿಂದ ಬೆಡ್ ಸಿಗದೆ ಸೋಂಕಿತರು ಪರದಾಟ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ. ಸೋಂಕಿತರಿಗೆ ನಗರದ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆ ಎಂದು ಸ್ಥಳದಲ್ಲೇ ಮಾಹಿತಿ ಲಭ್ಯವಾಗುವ ನಿಟ್ಟಿನಲ್ಲಿ ಉಪಯುಕ್ತವಾಗಲಿದೆ.

ಖಾಸಗಿ ಆಸ್ಪತ್ರೆಗಳು ಸುಖಾಸುಮ್ಮನೆ ಬೆಡ್ ಇಲ್ಲ ಎನ್ನುವಂತಿಲ್ಲ; ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸಿಟಿಜನ್​​ ಹೆಲ್ಪ್​ ಡೆಸ್ಕ್
ನಾಗರಿಕ ಸೇವಾ ಕೇಂದ್ರ
Follow us
guruganesh bhat
|

Updated on: May 01, 2021 | 7:34 PM

ಬೆಂಗಳೂರು: ಬೆಡ್​ ಇಲ್ಲ ಎನ್ನುವ ಖಾಸಗಿ ಆಸ್ಪತ್ರೆಗಳ ಮೇಲೆ ಹದ್ದಿನಕಣ್ಣು ಇಡಲು ‘ಸಿಟಿಜನ್​​ ಹೆಲ್ಪ್​ ಡೆಸ್ಕ್​​’ ಎಂಬ ವ್ಯವಸ್ಥೆಯನ್ನು ಬಿಬಿಎಂಪಿ ಆರಂಭಿಸಿದೆ. ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ಪ್​ ಡೆಸ್ಕ್​ ಸ್ಥಾಪಿಸಲಾಗಿದ್ದು, ಸದ್ಯ ಪ್ರಾಯೋಗಿಕವಾಗಿ ವಿಕ್ರಂ ಆಸ್ಪತ್ರೆ, ಅಪೋಲೊ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ರಾಮಯ್ಯ ಆಸ್ಪತ್ರೆಗಳನ್ನು ಸೇರಿ 25 ಖಾಸಗಿ ಆಸ್ಪತ್ರೆಯಲ್ಲಿ ಜಾರಿಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರತಿ ಖಾಸಗಿ ಆಸ್ಪತ್ರೆಯಲ್ಲಿ ನಾಗರಿಕ ಸೇವಾ ಕೇಂದ್ರ (ಸಿಟಿಜನ್ ಹೆಲ್ಪ್ ಡೆಸ್ಕ್) ಸ್ಥಾಪಿಸಲಾಗುತ್ತದೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ‌ ರೋಗಿಗಳ ಸ್ಥಿತಿಗತಿ ಬಗ್ಗೆ ಖುದ್ದು ಮಾಹಿತಿಯನ್ನು ಈ ಸೇವಾ ಕೇಂದ್ರದ ಮೂಲಕ ಪಡೆಯಬಹುದು. ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ, ಎಷ್ಟು ಹಾಸಿಗೆ ಭರ್ತಿಯಾಗಿದೆ ಎಂದು ಮಾಹಿತಿಯ ದಾಖಲಾತಿಯ ಮಾಹಿತಿಯನ್ನು  ಪ್ರತಿ ಒಂದು ತಾಸಿಗೆ ಆಸ್ಪತ್ರೆಯಿಂದ ಪಡೆದು ವಾರ್ ರೂಂ ಗೆ ಅಪ್ಡೇಟ್ ಮಾಡಲಾಗುತ್ತದೆ. ಹೀಗೆ ಪಡೆದ ಮಾಹಿತಿಯನ್ನು ಬಿಬಿಎಂಪಿ ಪಾಲಿಕೆ ವಾರ್ ರೂಂ ಗೆ ರವಾನಿಸಿ, ಗೂಗಲ್ ಶೀಟ್ ಮೂಲಕ ಮಾಹಿತಿ ದಾಖಲಿಸಿ, ಆರೋಗ್ಯ ಇಲಾಖೆಗೆ ಕೊಡಲಾಗುತ್ತದೆ.

ಆಗುವ ಉಪಯೋಗಗಳು ಈ ವ್ಯವಸ್ಥೆಯಿಂದ ಬೆಡ್ ಸಿಗದೆ ಸೋಂಕಿತರು ಪರದಾಟ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ. ಸೋಂಕಿತರಿಗೆ ನಗರದ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆ ಎಂದು ಸ್ಥಳದಲ್ಲೇ ಮಾಹಿತಿ ಲಭ್ಯವಾಗುವ ನಿಟ್ಟಿನಲ್ಲಿ ಉಪಯುಕ್ತವಾಗಲಿದೆ. ICU, ICU (V), HDU ಹೀಗೆ ಯಾವ ಹಾಸಿಗೆ ಸೋಂಕಿತರಿಗೆ ಅಗತ್ಯ ಎಂದು ತಿಳಿಯಲು ಸಾಧ್ಯವಾಗಲಿದೆ.  ಆಸ್ಪತ್ರೆ ಒಳಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಪೂರ್ಣ ವಿವರವನ್ನು ಸಂಬಂಧಿಕರಿಗೆ ನಾಗರಿಕ ಸೇವಾ ಕೇಂದ್ರದ ಸಿಬ್ಬಂದಿ ನೀಡಲಿದ್ದಾರೆ. ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಊಟ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ತಲುಪಿಸಲು ಸಹಾಯ ಮಾಡಲಿದ್ದಾರೆ. ಸೋಂಕಿತರ ಆರೋಗ್ಯದ ಕುರಿತಾದ ಹೆಲ್ತ್ ರಿಪೋರ್ಟ್ ಈ ಡೆಸ್ಕ್ ಮೂಲಕ‌ ಸಂಬಂಧಿಕರಿಗೆ ಸಿಗಲಿದೆ. BU ನಂಬರ್ ಜನರೇಟ್ ಮಾಡುವುದು ಹೇಗೆ ಎಂದು ತಿಳಿಸಿ ಸಿಬ್ಬಂದಿ ಬಿಯು ನಂಬರ್​ನ್ನು ಮಾಡಿಕೊಡಲಿದ್ದಾರೆ.

ದಿನದ 24 ಗಂಟೆಯೂ ಸೇವೆ ಒಂದು ತಂಡದಲ್ಲಿ 9 ಜನ ಕೆಲಸ ನಿರ್ವಹಿಸಲಿದ್ದು, 3 ಜನರಂತೆ ಪ್ರತಿ ಶಿಫ್ಟ್​ನಲ್ಲೂ ಕೆಲಸ ಮಾಡಲಿದ್ದಾರೆ. ದಿನದ 24 ಗಂಟೆಯೂ ಸೇವೆ ಲಭ್ಯವಿರಲಿದೆ. ಹಿರಿಯ ತಂತ್ರಜ್ಞರು ಸಿಬ್ಬಂದಿಗಳಿಗೆ ತರಬೇತಿ ನೀಡಲಿದ್ದಾರೆ. ಆಗಾಗ ಆರೋಗ್ಯ ತಪಾಸಣೆಗೆ ಕನಿಷ್ಠ ಇಬ್ಬರು ಮಹಿಳೆಯರನ್ನು ಒಳಗೊಂಡ ತಂಡ ಆಸ್ಪತ್ರೆಗಳಿಗೆ ಆಗಮಿಸಲಿದೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

ಕೊರೊನಾ 3ನೇ ಅಲೆ ತಡೆಯಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿದ ಸಿಎಂ ಯಡಿಯೂರಪ್ಪ

(Citizen Help Desk will be started in every private hospital in Bengaluru)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ