ಅಪಾರ್ಟಮೆಂಟ್​ಗಳಲ್ಲಿ ಕೊವಿಡ್​ ಆರೈಕೆ ಕೇಂದ್ರ ಸ್ಥಾಪನೆಗೆ ಬಿಬಿಎಂಪಿ ಯೋಜನೆ

ಹೆಚ್ಚುತ್ತಿರುವ ಕೊವಿಡ್​ ರೋಗಿಗಳ ಆರೈಕೆಯನ್ನು ವ್ಯವಸ್ಥಿವಾಗಿ ನಿರ್ವಹಿಸುವ ದೃಷ್ಟಿಯಿಂದ ಬಿಬಿಎಂ​ಪಿ ಈಗ ಹೊಸ ಯೋಜನೆಯೊಂದನ್ನು ರೂಪಿಸಿದೆ. ಆ ಪ್ರಕಾರ, ಅಪಾರ್ಟ್​ಮೆಂಟ್​ಗಳಲ್ಲಿ ಮೂಲಭೂತ ಸೌಕರ್ಯ ಇದ್ದರೆ ಅಲ್ಲಿಯೇ ಈ ಕೇಂದ್ರ ಸ್ಥಾಪಿಸಬಹುದಾಗಿದೆ.

ಅಪಾರ್ಟಮೆಂಟ್​ಗಳಲ್ಲಿ ಕೊವಿಡ್​ ಆರೈಕೆ ಕೇಂದ್ರ ಸ್ಥಾಪನೆಗೆ ಬಿಬಿಎಂಪಿ ಯೋಜನೆ
ಪ್ರಾತಿನಿಧಿಕ ಚಿತ್ರ
bhaskar hegde

| Edited By: Ghanashyam D M | ಡಿ.ಎಂ.ಘನಶ್ಯಾಮ

May 01, 2021 | 9:21 PM


ಬೆಂಗಳೂರು: ನಗರದಲ್ಲಿ ಹೆಚ್ಚಾಗುತ್ತಿರುವ ಕೊವಿಡ್ ರೋಗಿಗಳ ಆರೈಕೆಯನ್ನು ವ್ಯವಸ್ಥಿತವಾಗಿ ಮತ್ತು ಪರಿಪೂರ್ಣವಾಗಿ ಮಾಡುವ ಉದ್ದೇಶ ಇಟ್ಟುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಅಪಾರ್ಟ್​ಮೆಂಟ್ ಆವರಣದಲ್ಲಿಯೇ ಕೊವಿಡ್ ಆರೈಕೆ ಕೇಂದ್ರ ತೆರೆಯಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಇಂದು ಕೆಲವು ನಾಗರಿಕ ಹಿತರಕ್ಷಣಾ ಸಂಘಗಳ ಜೊತೆ ಮಾತನಾಡಿದ ಮುಖ್ಯ ಆಯುಕ್ತ, ಗೌರವ್ ಗುಪ್ತ ಈ ಕುರಿತು ನಾಗರಿಕ ಹಿತರಕ್ಷಣಾ ಸಂಘಗಳ ಪ್ರತಿನಿಧಗಳ ಜೊತೆ ಮಾತನಾಡಿದ್ದು ಕೆಲವು ನಾಗರಿಕ ಸಂಘಟನೆಗಳು ಮುಂದೆ ಬಂದಿವೆ ಎಂದು ಬಿಬಿಎಂಪಿ ಹೇಳಿದೆ. ಅಷ್ಟೇ ಅಲ್ಲ, ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದೆ.

ಆರೈಕೆ ಕೇಂದ್ರ ಅಂದರೆ ಏನು?
ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು RWA/Apartments Owners Association / Companies / NGO ಗಳು ಅವರದೇ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲು ಆಸಕ್ತಿ ವಹಿಸುತ್ತಿದ್ದಾರೆ.

ಅಪಾರ್ಟ್​ಮೆಂಟ್​ಗಳ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರಯಬೇಕಾದರೆ, ಕಮ್ಯುನಿಟಿ ಹಾಲ್, ಪ್ಲಾಟ್ ಇರಬೇಕು, ಮಹಿಳೆ ಹಾಗೂ ಮಕ್ಕಳಿಗೆ ಪ್ರತ್ಯೇಕ ಸ್ಥಳ ಇರಬೇಕು, 10×10 ಅಡಿ ಇರುವ ಶೌಚಾಲಯದ ವ್ಯವಸ್ಥೆಯಿರಬೇಕು. ಕೊಠಡಿ ವಿಶಾಲವಾಗಿರಬೇಕು, ಒಂದು ಹಾಗೂ ಮತ್ತೊಂದು ಹಾಸಿಗೆಗೆ ಕನಿಷ್ಠ 6 ಅಡಿ ಅಂತರವಿರಬೇಕು. ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಟೆಂಡರ್ ವ್ಯವಸ್ಥೆಯಿರಲಿದೆ.

ಕೋವಿಡ್ ಆರೈಕೆ ಕೇಂದ್ರ ತೆರೆದರೆ ಯಾವುದಾದರು ಆಸ್ಪತ್ರೆ/ನರ್ಸಿಂಗ್ ಹೋಮ್‌ಗಳ ಜೊತೆ ಟೈ-ಅಪ್ ಮಾಡಿಕೊಂಡು ಆರೈಕೆ ಪಡೆಯುವವರಿಗೆ ಆರೈಕೆ ಮಾಡಲಾಗುವುದು. 100 ಹಾಸಿಗೆಗೆ ಒಬ್ಬ ವೈದ್ಯ, 50 ಹಾಸಿಗೆಗೆ ಒಬ್ಬ ಸಿಬ್ಬಂದಿ, 25 ಹಾಸಿಗೆಗೆ ಒಬ್ಬ ಗ್ರೂಪ್ ಡಿ ನೌಕರರಿರಬೇಕು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಪಲ್ಸ್​ ಆಕ್ಸಿಮೀಟರ್, ಪಿಪಿಇ ಕಿಟ್, ಅಗತ್ಯ ಮಾತ್ರೆಗಳು ಇರಬೇಕು. ಯಾರಿಗಾದರು ಸಮಸ್ಯೆಯಾದರೆ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯಸವ್ಥೆಯಿರಬೇಕು. ಮಾಹಿತಿ ಸಂಗ್ರಹಿಸುವ ಸಲುವಾಗಿ ಡಾಟಾ ಎಂಟ್ರಿ ಆಪರೇಟರ್ ಇರಬೇಕು. ಯಾರಾದರು ಕೋವಿಡ್ ಆರೈಕೆ ಕೇಂದ್ರ ತೆರೆಯಲು ಇಚ್ಛಿಸಿ, ಪಾಲಿಕೆಗೆ ಮಾಹಿತಿ ನೀಡಿದಲ್ಲಿ ಆಯಾ ವಲಯ ಆರೋಗ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅನುಮೋದನೆ ನೀಡಲಿದ್ದಾರೆ. ಅನಂತರ ಮಾರ್ಗಸೂಚಿಗಳ ಅನುಸಾರ ಕೋವಿಡ್ ಆರೈಕೆ ಕೇಂದ್ರವನ್ನು ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗೌರವ್ ಗುಪ್ತ ಹೇಳಿದ್ದೇನು?
ಸರ್ಕಾರ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ವಲಯ ಆಯುಕ್ತರ ಅನುಮೋದನೆ ಪಡೆದು ಇದನ್ನು ಪ್ರಾರಂಭಿಸಬಹುದಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ನಗರದ ಅಪಾರ್ಟ್​ಮೆಂಟ್​ಗಳಲ್ಲಿ ಕೋವಿಡ್ ಸೋಂಕು ನಿರ್ವಹಣೆ ಹಾಗೂ ಮೈಕ್ರೊ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರಯುವ ಸಲುವಾಗಿ ಇಂದು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಶೇ 90 ರಷ್ಟು ಸೋಂಕಿತರು ಮನೆಯಲ್ಲೇ ಐಸೋಲೇಟ್ ಆಗಿ ಆರೈಕೆ ಪಡೆಯುತ್ತಿದ್ದಾರೆ. ಇದಲ್ಲದೆ ಹೋಟೆಲ್‌ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಕೂಡಾ ತೆರೆಯಲಾಗುತ್ತಿದೆ. ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಸೋಂಕು ಲಕ್ಷಣಗಳು ಕಂಡುಬಂದರೆ ಸ್ವಯಂ ಐಸೋಲೇಟ್ ಆಗಿ ಜಾಗೃತಿವಹಿಸಬೇಕು. ಹೋಮ್ ಐಸೋಲೇಟ್​ನಲ್ಲಿರುವವರಿಗೆ ಮೆಡಿಕಲ್ ಕಿಟ್ ಅನ್ನು ಪಾಲಿಕೆಯಿಂದ ನೀಡುತ್ತೇವೆ. ಏನಾದರು ಮಾಹಿತಿ, ಆಸ್ಪತ್ರೆಗೆ ದಾಖಲಾಗಬೇಕಾದರೆ ಪಾಲಿಕೆ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ನಗರದಲ್ಲಿ 1912 ಸಂಖ್ಯೆಗೆ ಹೆಚ್ಚು ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ 500 ಲೈನ್‌ಗಳನ್ನು ಹೆಚ್ಚಿಸಲಾಗಿದೆ ಎಂದರು.

ಇದೀಗ ಅಪಾರ್ಟ್​ಮೆಂಟ್​ಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಸ್ಥಳಾವಕಾಶವಿದೆಯೇ ಎಂಬುದನ್ನು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅನುಮೋದನೆ ಸಿಕ್ಕ ಬಳಿಕ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಕೋವಿಡ್ ಆರೈಕೆ ಕೇಂದ್ರಗಳನ್ನು ನಡೆಸಿಕೊಂಡು ಹೋಗಬಹುದು ಎಂದು ತಿಳಿಸಿದರು.

(BBMP to open Covid Care Centres at apartments if they have basic infrastructures says Chief Commissioner Gaurav Gupta)

ಇದನ್ನೂ ಓದಿ: ಕೊವಿಡ್‌ ಕೇರ್‌ ಸೆಂಟರ್ ಆಗಿ ಬದಲಾಯ್ತು ಲಕ್ಸುರಿ ಹೋಟೆಲ್! ಎಲ್ಲಿ?

ಇದನ್ನೂ ಓದಿ: ಕೊವಿಡ್​ 19 ಸೋಂಕಿತರ ಸೇವೆ ಮಾಡುತ್ತಿರುವ ಇಂಗ್ಲಿಷ್ ಶಿಕ್ಷಕ; ಬಡ ರೋಗಿಗಳಿಗೆ ಇವರ ಆಟೋವೇ ಆಂಬುಲೆನ್ಸ್​


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada