ಜಮೀರ್​​ ಅಹ್ಮದ್​​ರ ಮತ್ತೊಂದು ಹೆಸರೇ ಗುಜರಿ ಅಹ್ಮದ್​: ಎಂ ಪಿ ರೇಣುಕಾಚಾರ್ಯ ವಾಗ್ದಾಳಿ

| Updated By: ganapathi bhat

Updated on: Jun 19, 2021 | 9:46 PM

ಜಮೀರ್ ಅಹ್ಮದ್ ಗೆ ಇನ್ನೊಂದು ಹೆಸರೇ ಗುಜರಿ ಅಹ್ಮದ್. ಈ ಹಿಂದೆ ಪಾದರಾಯನಪುರದ ಗಲಭೆ ಮಾಡಿದ್ದು ಇವರೇ. ಇಂತಹ ಜಮೀರ್ ತಾನೇ ಮತ್ತೆ ಶಾಸಕ ಆಗುತ್ತಾನೆ ಎಂದು ಖಾತರಿಯಿಲ್ಲ. 2023ಕ್ಕೂ ಬಿಜೆಪಿಯೇ ಅಧಿಕಾರಕ್ಕೆ ಬಲಿದೆ‌ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಜಮೀರ್​​ ಅಹ್ಮದ್​​ರ ಮತ್ತೊಂದು ಹೆಸರೇ ಗುಜರಿ ಅಹ್ಮದ್​: ಎಂ ಪಿ ರೇಣುಕಾಚಾರ್ಯ ವಾಗ್ದಾಳಿ
ಎಂ.ಪಿ.ರೇಣುಕಾಚಾರ್ಯ
Follow us on

ದಾವಣಗೆರೆ: ಜಮೀರ್​​ ಅಹ್ಮದ್​​ರ ಮತ್ತೊಂದು ಹೆಸರೇ ಗುಜರಿ ಅಹ್ಮದ್​. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, ವಾಚ್​ಮನ್ ಆಗ್ತೇನೆ ಅಂತಾ ನೀನೇ ಹೇಳಿದ್ದೆ. ಈಗ ಯಡಿಯೂರಪ್ಪ ಮನೆ ಮುಂದೆ ವಾಚ್​ಮನ್ ಕೆಲಸ ಮಾಡು ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟ ಗ್ರಾಮದಲ್ಲಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ. ಈ ಹಿಂದೆ ಪಾದರಾಯನಪುರದಲ್ಲಿ ಗಲಭೆ ಮಾಡಿದ್ದು ಇವರೇ ಎಂದು ಜಮೀರ್​ ವಿರುದ್ಧ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.

ಜಮೀರ್ ಅಹ್ಮದ್ ಗೆ ಇನ್ನೊಂದು ಹೆಸರೇ ಗುಜರಿ ಅಹ್ಮದ್. ಆತ ದೊಡ್ಡ ಕೋಮುವಾದಿ. ಈ ಹಿಂದೆ ಪಾದರಾಯನಪುರದ ಗಲಭೆ ಮಾಡಿದ್ದು ಇವರೇ. ಇಂತಹ ಜಮೀರ್ ತಾನೇ ಮತ್ತೆ ಶಾಸಕ ಆಗುತ್ತಾನೆ ಎಂದು ಖಾತರಿಯಿಲ್ಲ. 2023ಕ್ಕೂ ಬಿಜೆಪಿಯೇ ಅಧಿಕಾರಕ್ಕೆ ಬಲಿದೆ‌. ಕೇಂದ್ರದಲ್ಲಿ ಕಾಂಗ್ರೆಸ್ ವಿಳಾಸವಿಲ್ಲ. ರಾಜ್ಯದಲ್ಲಿ ಕೂಡಾ ಅದೇ ಸ್ಥಿತಿ ಆಗಲಿದೆ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.

ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಜಮೀರ್ ಅಹ್ಮದ್ ಹೇಳಿಕೆ ಕಾಂಗ್ರೆಸ್ ರಾಜಕೀಯದಲ್ಲಿ ಒಂದಷ್ಟು ಸಂಚಲನವನ್ನು ಮೂಡಿಸಿದೆ. ಜಮೀರ್​ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಪಕ್ಷದ ವಿಚಾರವನ್ನು ನಾನು ಮಾಧ್ಯಮದ ಮುಂದೆ ಚರ್ಚಿಸಲ್ಲ. ಎಲ್ಲಿ ಏನ್ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಜಮೀರ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಣೆ ತೋರಿದ್ದಾರೆ.

ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಜಮೀರ್ ಅಹ್ಮದ್ ಹೇಳಿದ್ದು ಪಕ್ಷದ ಅಭಿಪ್ರಾಯವಲ್ಲ. ಶಾಸಕರು ಅವರ ಅಭಿಪ್ರಾಯವನ್ನು ಹೇಳಿದ್ದಾರೆ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಹೇಳಿಕೆ ವಿಚಾರಕ್ಕೆ ಈಗ ಬಿಜೆಪಿ ನಾಯಕರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗೆಂದು ಸಿದ್ದರಾಮಯ್ಯನವರೇ ಪ್ರಚಾರ ಮಾಡುವುದಕ್ಕೆ ಹೇಳಿರಬೇಕು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಕೇಳಿ ಎಂದು ಕೊಪ್ಪಳದಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಸದ್ಯಕ್ಕೆ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆಯೇ ಬರುವುದಿಲ್ಲ. ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ನವರು ಸುಮ್ಮನೆ ಹಗಲುಗನಸು ಕಾಣುತ್ತಿದ್ದಾರೆ ಎಂದು ಕೊಪ್ಪಳದಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ವೈಯಕ್ತಿಕ ಹೇಳಿಕೆ: ಜಮೀರ್ ಅಹ್ಮದ್

ಜಮೀರ್ ಹೃದಯವಂತ ರಾಜಕಾರಣಿ; ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ: ಸಿದ್ದರಾಮಯ್ಯ ಪ್ರತಿಕ್ರಿಯೆ