ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಹಾಸನ ನಗರಸಭೆ; ಬಹುಮತಕ್ಕೆ ಹತ್ತಿರವಿದ್ದರೂ ಜೆಡಿಎಸ್ಗೆ ನಿರಾಸೆ
ಜೆಡಿಎಸ್ ಹಾಸನ ನಗರಸಭೆಯಲ್ಲಿ ಓರ್ವ ಪಕ್ಷೇತರ ಸದಸ್ಯನ ನೆರವಿನಿಂದ ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ ಮೀಸಲಾತಿ ನೆರವಿನಿಂದ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕರಿಸಿದ್ದು ಜೆಡಿಎಸ್ನಿಂದ ಹಾಸನ ನಗರ ಸಭೆಯ ಅಧಿಕಾರ ಕೈತಪ್ಪಿದೆ.
ಹಾಸನ: ಇದೇ ಮೊದಲ ಬಾರಿಗೆ ಹಾಸನ ನಗರಸಭೆ ಬಿಜೆಪಿ ತೆಕ್ಕೆಗೆ ಒಲಿದಿದೆ. ಜೆಡಿಎಸ್ ಪಕ್ಷ ಬಹುಮತಕ್ಕೆ ಹತ್ತಿರವಿದ್ದರೂ ಅಧಿಕಾರದಿಂದ ವಂಚಿತವಾಗಿದೆ. 35 ಸದಸ್ಯ ಬಲದ ನಗರಸಭೆಯಲ್ಲಿ 17 ಸ್ಥಾನ ಗೆದ್ದಿದ್ದ ಜೆಡಿಎಸ್ಗೆ ನಿರಾಸೆ ಮೂಡಿದ್ದರೆ 13 ಸ್ಥಾನ ಗೆದ್ದಿದ್ದ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.
ಜೆಡಿಎಸ್ ಹಾಸನ ನಗರಸಭೆಯಲ್ಲಿ ಓರ್ವ ಪಕ್ಷೇತರ ಸದಸ್ಯನ ನೆರವಿನಿಂದ ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ ಮೀಸಲಾತಿ ನೆರವಿನಿಂದ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕರಿಸಿದ್ದು ಜೆಡಿಎಸ್ನಿಂದ ಹಾಸನ ನಗರ ಸಭೆಯ ಅಧಿಕಾರ ಕೈತಪ್ಪಿದೆ. ಬಿಜೆಪಿ ನಗರಸಭೆ ಸದಸ್ಯರಾದ ಮೋಹನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಅಧಿಕಾರ ಸ್ವೀಕರಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇದ್ದಿದ್ದ ಕಾರಣ ಜೆಡಿಎಸ್ ಕೈಯಿಂದ ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಕೈಬಿಟ್ಟಿತ್ತು. ಆದರೆ ಜೆಡಿಎಸ್ನಿಂದ ಆಯ್ಕೆಯಾಗಿದ್ದ ನಗರಸಭೆ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಇದ್ದ ಕಾರಣದಿಂದಲೇ ಅರ್ಜಿ ಸಲ್ಲಿಸಲಿಲ್ಲ. ಹೀಗಾಗಿ ಉಪಾಧ್ಯಕ್ಷ ಸ್ಥಾನವೂ ಜೆಡಿಎಸ್ ಕೈಬಿಟ್ಟಿದೆ. ಶಾಸಕ ಪ್ರೀತಂಗೌಡ ಸಮ್ಮುಖದಲ್ಲಿ ಮೋಹನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಅಧಿಕಾರ ಸ್ವೀಕರಿಸಿದ್ದಾರೆ. ಕೇವಲ 13 ಸ್ಥಾನ ಗೆದ್ದರೂ ಮೀಸಲಾತಿ ನೆರವಿನಿಂದ ಬಿಜೆಪಿ ಇದೇ ಮೊದಲ ಬಾರಿಗೆ ಹಾಸನ ನಗರಸಭೆಯಲ್ಲಿ ಅಧಿಕಾರ ಪಡೆದಿದೆ.
(BJP Won Hassan Municipal election in first time JDS lost)