ದಾವಣಗೆರೆ: ಸಿ.ಪಿ.ಯೋಗೇಶ್ವರ್‌ರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಮೆಗಾ ಸಿಟಿ ಹಗರಣದಲ್ಲಿ ಯೋಗೇಶ್ವರ್‌ರನ್ನು ಬಂಧಿಸಬೇಕು. ಈಗಾಗಲೇ 65 ಶಾಸಕರು ಸಹಿ ಮಾಡಿದ್ದ ಪತ್ರ ನೀಡಿದ್ದಾರೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸ್ವಪಕ್ಷದ ಸಚಿವರ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಲೇ 65 ಜನ ಶಾಸಕರು ಸಹಿ ಮಾಡಿ ಪತ್ರ ನೀಡಿದ್ದಾರೆ. ಆ ಮೂಲಕ, ಸಿ.ಪಿ. ಯೋಗೇಶ್ವರ್ನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ಯೋಗೇಶ್ವರಗೆ ಜಲ ಸಂಪನ್ಮೂಲ ಹಾಗೂ ಇಂಧನ ಖಾತೆ ಜೊತೆಗೆ ರಾಮನಗರ ಜಿಲ್ಲೆಯ ಉಸ್ತುವಾರಿ ಬೇಕಾಗಿತ್ತು ಅದು ಸಿಕ್ಕಿಲ್ಲ. ಇದೇ ಕಾರಣಕ್ಕೆ ಅವರಿಗೆ ತಳಮಳ ಶುರುವಾಗಿದೆ ಎಂದು ಸಚಿವ ಯೋಗೇಶ್ವರ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ ಅಲ್ಲಿ ಪೋಟೋ ತೆಗೆಸಿಕೊಂಡು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಕೋವಿಡ್ ಸೋಂಕು ಇಳಿಮುಖ ಅಗಲಿ. ನನ್ನ ಹೋರಾಟ ಶುರುವಾಗಲಿದೆ. ಯೋಗೇಶ್ವರ ಅವರನ್ನ ವಜಾ ಮಾಡಬೇಕು. ಜೊತೆಗೆ ಮೆಗಾ ಸಿಟಿ ಹಗರಣದ ಹಿನ್ನೆಲೆ ಬಂಧಿಸಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಮತ್ತೊಂದೆಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಮುಂದುವರಿಕೆ ವಿಚಾರವಾಗಿ ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ, ಮುಂದುವರಿಕೆ ಹೈಕಮಾಂಡ್ಗೆ ಬಿಟ್ಟಿದ್ದು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬದಲಾವಣೆ ಸೂಕ್ತವಲ್ಲ. ನಾಯಕತ್ವ ಬದಲಾವಣೆ ಇನ್ನೇನೋ ಮಾಡುವುದು ಸೂಕ್ತವಲ್ಲ. ಈಗ ಸಿಎಂ ಬದಲಾವಣೆ, ಮುಂದುವರಿಕೆ ಬಗ್ಗೆ ಮಾತನಾಡಬಾರದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೌನ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊವಿಡ್ ತಡೆಯಲು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇವೆ, ಸಿಎಂ ಯಡಿಯೂರಪ್ಪರ ಜತೆ ನಾವಿದ್ದೇವೆ: ಶಾಸಕ ರೇಣುಕಾಚಾರ್ಯ