ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸೈಕಲ್​ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಮ ಆಗುತ್ತೆ ಎಂದ ಬಿಜೆಪಿ ಸಂಸದ!

ಕೊವಿಡ್ ಹೋದ ಮೇಲೆ ಪೆಟ್ರೋಲ್ ದರ ಇಳಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಜಿಎಸ್​ಟಿ ಪಾಲು ಕರ್ನಾಟಕ ರಾಜ್ಯಕ್ಕೆ ಸಿಗ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನಲೆಯಲ್ಲಿಯೂ ಇದೇ ರೀತಿಯ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸೈಕಲ್​ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಮ ಆಗುತ್ತೆ ಎಂದ ಬಿಜೆಪಿ ಸಂಸದ!
ಬಿಜೆಪಿ ಸಂಸದ ಜಿ.ಎಂ.ಸಿದ್ಧೇಶ್ವರ
Follow us
TV9 Web
| Updated By: ganapathi bhat

Updated on:Jul 10, 2021 | 4:23 PM

ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ಸಂಸದರೊಬ್ಬರು ಬೇಜವಾಬ್ದಾರಿಯುತ ಹೇಳಿಕೆ ನೀಡಿದ ಘಟನೆ ಇಂದು (ಜುಲೈ 10) ನಡೆದಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಸೈಕಲ್ ಏರುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೈಕಲ್ ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಮ ಆಗುತ್ತೆ ಎಂದು ಸಿದ್ದೇಶ್ವರ್ ತಿಳಿಸಿದ್ದಾರೆ.

ಇಂಧನ ಬ್ಯಾರಲ್ ರೇಟ್ ಜಾಸ್ತಿ ಇದೆ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಜನ ಸೈಕಲ್​ನಲ್ಲಿ ಓಡಾಡಿದ್ರೆ ಏನ್ ಆಗುತ್ತೆ. ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ. ಇಂಧನ ದರ ಏರಿಕೆಯ ಪ್ರಶ್ನೆಗೆ ಬಾಲಿಶ ಹೇಳಿಕೆ ನೀಡಿರುವುದು ಕಂಡುಬಂದಿದೆ. ಪೆಟ್ರೋಲ್ ರೇಟ್ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ? ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ ಎಂದೂ ಹೇಳಿದ್ದಾರೆ.

ಕೊವಿಡ್ ಹೋದ ಮೇಲೆ ಪೆಟ್ರೋಲ್ ದರ ಇಳಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಜಿಎಸ್​ಟಿ ಪಾಲು ಕರ್ನಾಟಕ ರಾಜ್ಯಕ್ಕೆ ಸಿಗ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನಲೆಯಲ್ಲಿಯೂ ಇದೇ ರೀತಿಯ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ. ಈ ಬಗ್ಗೆ ಹಣಕಾಸು ಸಚಿರನ್ನೇ ಕೇಳಿ ಎಂದು ಮತ್ತೆ ಉತ್ತರ ನೀಡಿದ್ದಾರೆ. ಜಿಎಸ್​ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ. ಕರ್ನಾಟಕದಲ್ಲಿ ನಾಲ್ಕು ಜನ ಸಚಿವರು ಇದ್ದಾರೆ ಅವರು ಕೇಳ್ತಾರೆ ಎಂದು ಸಂಸದರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಮುಖ ನಗರಗಳಲ್ಲಿ (ಜುಲೈ 10) ಪೆಟ್ರೋಲ್​ ಮತ್ತು ಡೀಸೆಲ್​ ದರ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ಬೆಲೆ ಲೀಟರ್​ಗೆ 104.29 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 95.26 ರೂಪಾಯಿಗೆ ತಲುಪಿದೆ. ನೋಯ್ಡಾದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 98.12 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 90.35 ರೂಪಾಯಿಗೆ ತಲುಪಿದೆ. ಹೈದರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 104.86 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 97.96 ರೂಪಾಯಿಗೆ ತಲುಪಿದೆ. ಪಾಟ್ನಾದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 103.18 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 95.46 ರೂಪಾಯಿಗೆ ತಲುಪಿದೆ.

ಪೆಟ್ರೋಲ್ ಬೆಲೆ 17 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 100 ರ ಗಡಿ ದಾಟಿದೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ಆಗಿದೆ. ಇವುಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಖ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ, ದೆಹಲಿ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ಸೇರಿವೆ.

ಇದನ್ನೂ ಓದಿ: ಇಂಧನ ದರದಲ್ಲಿ ಮತ್ತೆ ಹೆಚ್ಚಳ; ಪ್ರಮುಖ ಮಹಾನಗರಗಳಲ್ಲಿ ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್​ ದರ!

Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್

Published On - 4:16 pm, Sat, 10 July 21