ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಬ್ಲ್ಯಾಕ್ ಫಂಗಸ್ ಕೇಸ್..
ಬೀದರ್ ಜಿಲ್ಲೆಯಲ್ಲಿ ಕೊರೊನಾ ಕಡಿಮೆಯಾಗಿ ಬ್ಲ್ಯಾಕ್ ಫಂಗಸ್ ಕಾಟ ಶುರುವಾಗಿದೆ. ಒಟ್ಟು 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ರೋಗ ಪತ್ತೆಗೆ ಐವರು ENT ತಜ್ಞ ವೈದ್ಯರ ತಂಡ ರಚನೆ ಮಾಡಲಾಗಿದೆ. ಬ್ಲ್ಯಾಕ್ ಫಂಗಸ್ ಪತ್ತೆ ಜೊತೆಗೆ ಈ ತಂಡ ಚಿಕಿತ್ಸೆ ನೀಡಲಿದೆ.
ಕಲಬುರಗಿ: ಕೊರೊನಾದಿಂದ ಗುಣಮುಖರಾಗಿ ಬಂದ್ರೂ ಈ ಬ್ಲ್ಯಾಕ್ ಫಂಗಸ್ನಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಈಗ 56ಕ್ಕೇರಿಕೆಯಾಗಿದೆ.
ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಸೋಂಕಿತರಿಗೆ ಜಿಮ್ಸ್‌ನಲ್ಲಿ 20, ಖಾಸಗಿ ಆಸ್ಪತ್ರೆಗಳಲ್ಲಿ 36 ಚಿಕಿತ್ಸೆ ಕೊಡಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಓರ್ವ ಬಲಿಯಾಗಿದ್ದು ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಔಷಧದ ಕೊರತೆ ಉಂಟಾಗಿದೆ. ಇಲ್ಲಿ ಪ್ರತಿ ನಿತ್ಯ ಇನ್ನೂರಕ್ಕೂ ಅಧಿಕ ವೈಯಲ್ ಇಂಜೆಕ್ಷನ್ ಅವಶ್ಯಕತೆ ಇದೆ. ಬ್ಲ್ಯಾಕ್ ಘಂಗಸ್ಗೆ ನೀಡುನ ಅಂಪೋಟೆರಿಶಿಯನ್ ಬಿ ಇಂಜೆಕ್ಷನ್ ಕೊರತೆ ಇದೆ. ಆದ್ರೆ ಇಲ್ಲಿವರಗೆ ಜಿಲ್ಲೆಗೆ ಬಂದಿದ್ದು ಕೇವಲ 50 ವೈಯಲ್ ಇಂಜೆಕ್ಷನ್ ಮಾತ್ರ. ಸೂಕ್ತ ಸಮಯದಲ್ಲಿ ಔಷಧ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 9 ಮಂದಿಗೆ ಬ್ಲ್ಯಾಕ್ ಫಂಗಸ್ ಬೀದರ್ ಜಿಲ್ಲೆಯಲ್ಲಿ ಕೊರೊನಾ ಕಡಿಮೆಯಾಗಿ ಬ್ಲ್ಯಾಕ್ ಫಂಗಸ್ ಕಾಟ ಶುರುವಾಗಿದೆ. ಒಟ್ಟು 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ರೋಗ ಪತ್ತೆಗೆ ಐವರು ENT ತಜ್ಞ ವೈದ್ಯರ ತಂಡ ರಚನೆ ಮಾಡಲಾಗಿದೆ. ಬ್ಲ್ಯಾಕ್ ಫಂಗಸ್ ಪತ್ತೆ ಜೊತೆಗೆ ಈ ತಂಡ ಚಿಕಿತ್ಸೆ ನೀಡಲಿದೆ.
ಬಾಗಲಕೋಟೆಯಲ್ಲಿ 24 ಜನರಿಗೆ ಬ್ಲ್ಯಾಕ್ ಫಂಗಸ್ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ಈಗ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ 24ಕ್ಕೆ ಏರಿಕೆಯಾಗಿದೆ. ನಗರದ ಸರ್ಕಾರಿ ಕೊವಿಡ್ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಉಳಿದವರಿಗೆ ಹುಬ್ಬಳ್ಳಿಯ ಕಿಮ್ಸ್, ಬೆಂಗಳೂರಿನ ಆಸ್ಪತ್ರೆ ಸೇರಿದಂತೆ ಬೇರೆ ರಾಜ್ಯದ ಆಸ್ಪತ್ರೆಯಲ್ಲಿ ಒಬ್ಬರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಆದೇಶ: ರಾಜ್ಯ ಸರ್ಕಾರದ ಸಿಎಸ್ ರವಿಕುಮಾರ್