AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕ ಬಲಿ: ಅರಣ್ಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಕಳೆದ ರಾತ್ರಿಯಷ್ಟೇ ಇದೆ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿತ್ತು. ಈ ಹಸುಗಳನ್ನು ರಕ್ಷಿಸಲು ಬಂದಿದ್ದ ಈ ವ್ಯಾಘ್ರಕ್ಕೆ ಸುಲಭವಾಗಿ ಸಿಕ್ಕಿದ್ದು ಇದೇ ಬಾಲಕ ರಂಗಸ್ವಾಮಿ ಮತ್ತು ತಾತ ಕೆಂಚ.

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕ ಬಲಿ: ಅರಣ್ಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಬಾಲಕನನ್ನು ಬಲಿ ತೆಗೆದುಕೊಂಡ ಚಿರತೆ
preethi shettigar
|

Updated on:Mar 09, 2021 | 7:34 PM

Share

ಕೊಡಗು: ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹಂತಕ ಹುಲಿಯ ಹಾವಳಿ ಮಿತಿ ಮೀರಿದ್ದು, ಬೆಳಂಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ತಾತನ ಜೊತೆ ಹೊಗಿದ್ದ ಮಗು ಚಿರತೆ ಪಾಲಾದ ಘಟನೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಸದ್ಯ ಈ ವ್ಯಾಘ್ರನ ಉಪಟಳವನ್ನ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.

ಗ್ರಾಮದ ಚಕ್ಕೇರ ಸನ್ನಿ ಸುಬ್ಬಯ್ಯ ಎಂಬುವವರ ತೋಟದಲ್ಲಿ ಕೆಲಸಕ್ಕಿದ್ದ ಕಾರ್ಮಿಕರ ಕುಟುಂಬ ಹುಲಿ ಭಯದಿಂದ ಕಳೆದೊಂದು ವಾರದಿಂದ ತೋಟದತ್ತ ಮುಖ ಮಾಡಿರಲಿಲ್ಲ. ಆದರೆ ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಮೋಟಾರ್ ಆನ್​ ಮಾಡುವಂತೆ 8 ವರ್ಷದ ಬಾಲಕ ರಂಗ ಸ್ವಾಮಿಯನ್ನ ಕಳುಹಿಸಿದ್ದಾರೆ. ಆತ ತೆರಳಿ ಎಷ್ಟು ಹೊತ್ತಾದರೂ ಮರಳಿಲ್ಲ. ಹಾಗಾಗಿ ಆತನನ್ನ ಹುಡುಕುತ್ತಾ ತಾತ ಕೆಂಚ ಅಲ್ಲಿಗೆ ತೆರಳಿದ್ದಾರೆ. ಆದರೆ, ತಾತ ಕೂಡ ಮರಳುವುದಿಲ್ಲ.

ಇದರಿಂದ ಆತಂಕಗೊಂಡ ಕುಟುಂಬಸ್ಥರು ತಾತ ಮತ್ತು ಮಗುವನ್ನು ಹುಡುಕುತ್ತಾ ತೋಟಕ್ಕೆ ತೆರಳಿದ್ದಾರೆ. ಆದರೆ ಅವರಿಗೆ ತೋಟದಲ್ಲಿ ಕಂಡಿದ್ದು, ಮಗು ರಂಗಸ್ವಾಮಿ ಮೆದುಳು ಹೊರಬಂದು ಅಪ್ಪಚ್ಚಿಯಾಗಿ ಹೆಣವಾಗಿ ಹೋಗಿರುವುದು ಮತ್ತು ತಾತ ಕೆಂಚ ತೀವ್ರವಾಗಿ ಗಾಯಗೊಂಡು ನರಳುತ್ತಾ ಬಿದ್ದಿದ್ದ ದೃಶ್ಯ. ಕಳೆದ ರಾತ್ರಿಯಷ್ಟೇ ಇದೆ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಈಗ ಈ ವ್ಯಾಘ್ರಕ್ಕೆ ಸುಲಭವಾಗಿ ಸಿಕ್ಕಿದ್ದು ಇದೇ ಬಾಲಕ ರಂಗಸ್ವಾಮಿ ಮತ್ತು ತಾತ ಕೆಂಚ.

tiger attack kodagu

ಕುಟುಂಬದವರ ಆಕ್ರಂದನ

ಯಾವಾಗ ಈ ಘಟನೆ ನಡೆಯಿತೋ ಇಡೀ ಬೆಳ್ಳೂರು ಗ್ರಾಮ ರೊಚ್ಚಿಗೆದ್ದಿತ್ತು. 15 ದಿನಗಳ ಹಿಂದಷ್ಟೇ ಓರ್ವ ಬಾಲಕ ಹಾಗೂ ಮತ್ತೋರ್ವ ಮಹಿಳೆಯನ್ನ ಇದೇ ಹುಲಿ ಕೊಂದು ಹೋಗಿತ್ತು. ಜೊತೆಗೆ 13 ಹಸುಗಳನ್ನೂ ಬಲಿ ಪಡೆದಿತ್ತು. ಈ ಅರಣ್ಯ ಇಲಾಖೆ ಮಾತ್ರ ಹುಲಿ ಸೆರೆ ಹಿಡಿಯದೆ ಕಾಲ ಹರಣ ಮಾಡ್ತಾ ಇದೆ ಎಂದು ಆರೋಪಿಸಿದ ಗ್ರಾಮಸ್ಥರು ಗೋಣಿಕೊಪ್ಪ-ಕೇರಳ ಮುಖ್ಯ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಹುಲಿಗೆ ನೀವೇ ಗುಂಡಿಕ್ಕಿ ಇಲ್ಲಾ, ನಾವು ಗ್ರಾಮಸ್ಥರೇ ಗುಂಡಿಕ್ಕುತ್ತೇವೆ ಎಂದು ಆಗ್ರಹಿಸಿದ್ದು, ಗ್ರಾಮಸ್ಥರ ಆಗ್ರಹಕ್ಕೆ ಮಣಿದಿರುವ ಅರಣ್ಯ ಇಲಾಖೆ ಕೊನೆಗೂ ಹುಲಿಯನ್ನು ಕೊಲ್ಲುತ್ತೇವೆ ಎಂದು ಕಾರ್ಯಾಚರಣೆಗೆ ಇಳಿದಿದೆ.

ಇದನ್ನೂ ಓದಿ: ಮಡಿಕೇರಿ ಹುಲಿ ಉಪಟಳ: 15ಕ್ಕೇರಿದ ಸಾವಿನ ಸಂಖ್ಯೆ.. ಇಂದು ಸಹ ಬಾಲಕ ಹುಲಿ ಬಾಯಿಗೆ ತುತ್ತು

Published On - 7:33 pm, Tue, 9 March 21

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!