ಬೆಂಗಳೂರು, ನವೆಂಬರ್ 21: ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1,50,59,431 ಕಾರ್ಡ್ಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರ ಸೂಚನೆ ಮೇರೆಗೆ ಸದ್ಯ 1,02,509 ಕಾರ್ಡ್ಗಳನ್ನು ಪರಿಷ್ಕರಣೆ ಮಾಡಿದ್ದೇವೆ. ಉಳಿದ ಎಲ್ಲ ಬಿಪಿಎಲ್ (BPL), ಎಪಿಎಲ್ (APL) ಕಾರ್ಡ್ಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾನದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿಷ್ಕರಿಸಲಾಗಿದೆ. ಅನರ್ಹ ಎಂಬ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ಗಳನ್ನು ಎಪಿಎಲ್ಗೆ ಸೇರಿಸಲಾಗಿದೆ. ಬಿಪಿಎಲ್ಗೆ ಅರ್ಹರಿದ್ದೂ ಕೂಡ ಎಪಿಎಲ್ಗೆ ಸೇರಿಸಿದ್ದರೇ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ ಎಂದರು.
ಬಿಪಿಎಲ್ಗೆ ಅರ್ಹರಿದ್ದವರ ಕಾರ್ಡ್ ರದ್ದಾಗಿದ್ದರೆ ಒಂದು ವಾರ ಕಾಲಾವಕಾಶ ನೀಡಿ, ಮರು ನೋಂದಣಿ ಮಾಡಿಕೊಂಡು ಕಾರ್ಡ್ ಮರುಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಜನಾಕ್ರೋಶದಿಂದ ಎಚ್ಚೆತ್ತ ಸರ್ಕಾರ, ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಸಿಎಂ ಆದೇಶ
ಬಿಪಿಎಲ್ ಕಾರ್ಡ್ದಾರರನ್ನು ಎಪಿಎಲ್ಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ, ಎಲ್ಲ ಗೊಂದಲದ ಹೊಣೆ ನಾನೇ ಹೊರುವೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡುವೆ. ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ ಎಂದು ಭರವಸೆ ನೀಡಿದರು.
ಮಾನದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿಷ್ಕರಿಸಲಾಗಿದೆ. ಅನರ್ಹ ಎಂಬ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ಗಳನ್ನು ಎಪಿಎಲ್ ಗೆ ಸೇರಿಸಲಾಗಿದೆ. ಬಿಪಿಎಲ್ಗೆ ಅರ್ಹರಿದ್ದೂ ಕೂಡ ಎಪಿಎಲ್ಗೆ ಸೇರಿಸಿದ್ದರೇ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ.
ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷ ಅನ್ಯಾಯ ಮಾಡಲ್ಲ. ರದ್ದುಗೊಳಿಸುವ ಫಲಾನುಭವಿಗಳ ಪಟ್ಟಿ ನೀಡಲು ಹೇಳಿದ್ದೇವೆ. ಎಲ್ಲರಿಂದ ಮರು ಅರ್ಜಿ ಪಡೆಯುತ್ತೇವೆ. ಐದು ಗ್ಯಾರಂಟಿ ಜಾರಿ ನೋಡಿಕೊಳ್ಳಲು ತಾಲೂಕು ಸಮಿತಿಗಳಿವೆ. ರಾಜ್ಯಮಟ್ಟದ ಸಮಿತಿ ಕೂಡ ಇದೆ. ಸಮಿತಿ ಉಸ್ತುವಾರಿಗಳನ್ನು ನೇಮಕ ಮಾಡಿ ನ್ಯಾಯ ಕೊಡುತ್ತದೆ. ಯಾರು ಭಯಪಡಬೇಕಾಗಿಲ್ಲ ಎಂದು ಕೊಲ್ಲೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Thu, 21 November 24