AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್​​ ಸ್ಥಾಪನೆಗೆ ಸಂಪುಟ ಸಭೆ ಅಸ್ತು; ಪ್ರಾಯೋಗಿಕವಾಗಿ 3 ಜಿಲ್ಲೆ ಆಯ್ಕೆ

ರಕ್ತಹೀನತೆ ಮುಕ್ತ ಕರ್ನಾಟಕ ಇನಿಶಿಯೇಟಿವ್ (ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ - ಎಪಿಎಂಕೆ) ಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ. ಇದರ ಮೂಲಕ ತಾಯಂದಿರು ಸೇರಿದಂತೆ ರಕ್ತಹೀನತೆ ಹೊಂದಿರುವ ಮಕ್ಕಳು ಮತ್ತು ವಯಸ್ಕರ ಮೇಲೆ ಕೇಂದ್ರೀಕರಿಸಲಾಗುತ್ತದೆ.

ರಾಜ್ಯದಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್​​ ಸ್ಥಾಪನೆಗೆ ಸಂಪುಟ ಸಭೆ ಅಸ್ತು; ಪ್ರಾಯೋಗಿಕವಾಗಿ 3 ಜಿಲ್ಲೆ ಆಯ್ಕೆ
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on: Oct 06, 2023 | 1:10 PM

Share

ಬೆಂಗಳೂರು: ರಾಜ್ಯದಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ (Brain Health Initiative)​​ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಆರೋಗ್ಯ ಇಲಾಖೆ ಮತ್ತು ನಿಮ್ಹಾನ್ಸ್ (Nimhans) ಸಹಯೋಗದಲ್ಲಿ ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ (Bengaluru) ಪ್ರಾಯೋಗಿಕವಾಗಿ ಮೆದುಳು ಆರೋಗ್ಯ ಚಿಕಿತ್ಸಾಲಯ ಪ್ರಾರಂಭವಾಗಲಿವೆ. ಇವು ಯಶಸ್ವಿಯಾದರೆ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಈ ಮೂಲಕ ಈ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿದಂತಾಗುತ್ತದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಹೇಳಿದರು.

ಗುರುವಾರ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು  ಈ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳವನ್ನು ಪರಿಹರಿಸುವ ನಿರೀಕ್ಷೆಯಿದೆ. ರಕ್ತಹೀನತೆ ಮುಕ್ತ ಕರ್ನಾಟಕ ಇನಿಶಿಯೇಟಿವ್ (ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ – ಎಪಿಎಂಕೆ) ಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ. ಇದರ ಮೂಲಕ ತಾಯಂದಿರು ಸೇರಿದಂತೆ ರಕ್ತಹೀನತೆ ಹೊಂದಿರುವ ಮಕ್ಕಳು ಮತ್ತು ವಯಸ್ಕರ ಮೇಲೆ ಕೇಂದ್ರೀಕರಿಸಲಾಗುತ್ತದೆ. ಮತ್ತು ಫೋಲಿಕ್ ಮಾತ್ರೆಗಳು ಮತ್ತು ಜಂತುಹುಳು ನಿವಾರಕ ಔಷಧ ನೀಡಲಾಗುತ್ತದೆ. ಆಯ್ದ 102 ತಾಲೂಕುಗಳಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರವನ್ನೂ ಪೂರೈಸಲಾಗುತ್ತದೆ ಎಂದರು.

ಇದನ್ನೂ ಓದಿ: ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ; ಹೆಚ್​ಕೆ ಪಾಟೀಲ್ ಹೇಳಿದ್ದಿಷ್ಟು

2019-20ರ ಸಮೀಕ್ಷೆಯ ವರದಿಯ ಪ್ರಕಾರ, ಶೇಕಡಾ 52.2 ತಾಯಂದಿರಲ್ಲಿ, 5 ವರ್ಷದೊಳಗಿನ ಶೇಕಡಾ 67.1 ಮಕ್ಕಳು, 15 ರಿಂದ 49 ವರ್ಷ ವಯಸ್ಸಿನ ಶೇಕಡಾ 47.8 ಮಹಿಳೆಯರಲ್ಲಿ ಮತ್ತು ಶೇಕಡಾ 47.5ರಷ್ಟು 6 ರಿಂದ 9 ತಿಂಗಳಿನ ಗರ್ಭರ್ಣಿಯರಲ್ಲಿ ರಕ್ತಹೀನತೆ ಇದೆ ಎಂದು ಸಚವ ಹೆಚ್​​ಕೆ ಪಾಟೀಲ್​ ತಿಳಿಸಿದರು.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಡಿಯಲ್ಲಿ ಗೋದಾಮುಗಳನ್ನು ನಿರ್ಮಿಸುವ ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಲು ಸಂಪುಟ ಅನುಮೋದನೆ ನೀಡಿದೆ. ಅಪೂರ್ಣ ಹಂತದಲ್ಲಿರುವ ಗೋದಾಮುಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ