ಬೆಂಗಳೂರು: ದಕ್ಷಿಣ ಕನ್ನಡ ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (Praveen Murder) ನನ್ನು ಜುಲೈ 26 ರಂದು ಆತನ ಕೋಳಿ ಅಂಗಡಿಗೆ ನುಗ್ಗಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದು, ನಿನ್ನೆ (ಜುಲೈ 27) ರಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಹೇಯಕೃತ್ಯ ಎಸಗಿದವರನ್ನ ಬಂಧಿಸಿ ಕಾನೂನಿನಡಿ ಹಂತಕರಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಮೂರು ವರ್ಷಗಳು ತುಂಬಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಹತ್ಯೆ ಸರ್ಕಾರಕ್ಕೆ ಆಘಾತ ನೀಡಿದೆ. ಅಲ್ಲದೆ, ಸರ್ಕಾರದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರವೀಣ್ ಹತ್ಯೆ: ಕಾರ್ಯಕರ್ತರ ಆಕ್ರೋಶ, ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಇಂದು ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಿದೆ. ಈ ಬಗ್ಗೆ ಮಧ್ಯರಾತ್ರಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಪ್ರವೀಣ್ ಅವರ ಹತ್ಯೆ ಸಂದರ್ಭದಲ್ಲಿ ಕಾರ್ಯಕ್ರಮ ಸೂಕ್ತವಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಹಾಗೂ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಕೊಪ್ಪ ಪಟ್ಟಣ ಬಂದ್ಗೆ ಕರೆ ನೀಡಿದ ಹಿಂದೂ ಪರ ಸಂಘಟನೆಗಳು
ಪ್ರವೀಣ್ ಹತ್ಯೆಗೆ ಟ್ವಿಸ್ಟ್!
ಸದ್ಯ ಪ್ರವೀಣ್ ಹತ್ಯೆಗೆ ಟ್ವಿಸ್ಟ್ ಸಿಕ್ಕಿದ್ದು, 40 ನಿಮಿಷ ಕಾದು ರಕ್ತದೋಕುಳಿ ಹರಿಸಿದ್ರಾ ಕಿಲ್ಲರ್ಸ್ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಕೊಲೆಗೂ ಮೊದಲು ಅದೊಂದು ಜಾಗದಲ್ಲೇ ಹಂತಕರು ಟೆಂಟ್ ಹಾಕಿದ್ದು, ಸಿಸಿಟಿವಿಯಲ್ಲಿ ಹಂತಕರ ಹೆಜ್ಜೆಗುರುತು ಸೆರೆಯಾಗಿದೆ. ಈ ಕುರಿತಾಗಿ ಟಿವಿ9 ಬಳಿ ಹಂತಕರ ಎಕ್ಸ್ಕ್ಲೂಸಿವ್ ವಿಡಿಯೋ ಲಭ್ಯವಾಗಿದೆ. ಪ್ರವೀಣ್ ಮರ್ಡರ್ಗೂ ಮೊದಲು ಹಂತಕರು ಭಯಾನಕ ಸಂಚು ರೂಪಿಸಿದ್ದು, ಪ್ರವೀಣ್ ಚಿಕನ್ ಅಂಗಡಿಯಿಂದ 50 ಮೀ. ದೂರದಲ್ಲಿ 40 ನಿಮಿಷದವರೆಗೂ ಒಂದೇ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ರಾತ್ರಿ 8 ಗಂಟೆ 1 ನಿಮಿಷ 51 ಸೆಕೆಂಡ್ಗೆ ಎಂಟ್ರಿ ಕೊಟ್ಟಿದ್ದು, 8 ಗಂಟೆ 1 ನಿಮಿಷ 57 ಸೆಕೆಂಡ್ಗೆ 50 ಮೀ. ದೂರ ಸ್ಟಾಪ್ ಮಾಡಿದ್ದಾರೆ. 8 ಗಂಟೆ 33 ನಿಮಿಷಕ್ಕೆ ಅಂಗಡಿ ಮುಂದೆ ಹೋಗಿದ್ದು, ಚಿಕನ್ ಅಂಗಡಿ ಮುಂದೆ ಹೋಗಿ ಮತ್ತೆ ಜಾಗದಲ್ಲಿ ಸ್ಟಾಪ್ ಆಗಿದ್ದಾರೆ.
ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮುತಾಲಿಕ್ ಪ್ರಚೋದನಾಕಾರಿ ಹೇಳಿಕೆ ನೀಡುವ ಹಿನ್ನೆಲೆ ಮುತಾಲಿಕ್ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದಾರೆ.ಹಾಗೂ ಈ ವೇಳೆ ಮಾತನಾಡಿದ ಅವರು, ಇದು ಕೊಲೆ ಮಾತ್ರವಲ್ಲ, ದೇಶದ್ರೋಹದ ಕೆಲಸ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆಯಾಗುತ್ತಿದೆ. ಅತಿ ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು. ಇದನ್ನು ಕೇವಲ ಒಂದು ಕೊಲೆ ಪ್ರಕರಣವಾಗಿ ನೋಡುವುದಿಲ್ಲ. ರಾಜ್ಯದಲ್ಲಿ ವಿಶೇಷವಾಗಿ ಮಂಗಳೂರು ಭಾಗಕ್ಕೆ NIA ಅಗತ್ಯವಿದೆ. ಅಗತ್ಯಬಿದ್ದರೆ ಪ್ರವೀಣ್ ಕೊಲೆ ಕೇಸ್‌ನ ತನಿಖೆ NIAಗೆ ವಹಿಸ್ತೇವೆ. ಹತ್ಯೆಗೆ ಬೆಂಬಲ ನೀಡಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಮುಸ್ಲೀಮರ ಮದರಸಗಳು ಮುಚ್ಚುವರೆಗೂ ಹಿಂದೂ ಕಾರ್ಯಕರ್ತರ ಹೆಣ ಬೀಳುತ್ತಾನೇ ಇರುತ್ತೆ. ಈ ಮುಸ್ಲಿಮರು 2050 ರ ಹೊತ್ತಿಗೆ ಮುಸ್ಲಿಂ ಏತರ ದೇಶವನ್ನ ಮಾಡುವುದಕ್ಕೆ ಹೊರಟಿದ್ದಾರೆ. ಸರ್ಕಾದ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಸ್ಲೋಗನ್ ಬಿಟ್ಟು. ಪ್ರತಿರೋಧ ಮಾಡಬೇಕಾಗಿದೆ. ಯಾವಾಗಾ ಒಂದು ತಲೆಗೆ ಮತ್ತೊಂದು ತಲೆ ಹೋಗತ್ತೊ. ಅಲ್ಲಿಯವರೆಗೂ ಇವರು ಬುದ್ದಿ ಕಲಿಯಲ್ಲ. ಸರ್ಕಾರ ನಿರ್ದಿಷ್ಟವಾದ ಕ್ರಮ ತೆಗೆದುಕೊಳ್ಳುವವರೆಗೂ ಹಿಂದೂ ಕಾರ್ಯಕರ್ತರು ಇದೇ ರೀತಿ ಪ್ರತಿಭಟನೆಗಳು ನಡೆಯುತ್ತಾನೇ ಇರುತ್ವೆ ಎಂದು ಪ್ರಶಾಂತ್ ಸಂಬರಗಿ ಆಕ್ರೋಶ ಹೊರ ಹಾಕಿದ್ದರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಾಥ್ ನೀಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಶಫೀಕ್, ಜಾಕೀರ್ನನ್ನು ಪುತ್ತೂರು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು ಎಸಿಜೆಎಂ ನ್ಯಾಯಾಲಯ ಬಂಧಿತ ಶಫೀಕ್, ಜಾಕೀರ್‌ಗೆ ಆ.11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರ ಹಾಕಿದ್ದಾರೆ. ಇದು ಇಲ್ಲಿಗೆ ನಿಲ್ಲಲ್ಲ, ಬಿಜೆಪಿ ಕಾರ್ಯಕರ್ತರ ಕೊಲೆ ಆಗ್ತಾವೆ. ಹಂತಕರನ್ನು ನಡುಬೀದಿಯಲ್ಲಿ ನಿಲ್ಲಿಸಿ ಶೂಟ್ ಮಾಡಬೇಕು. ನಮ್ಮ ಸರ್ಕಾರದ ವಿರುದ್ಧವೇ ಕೂಗುವಂತಹ ಪರಿಸ್ಥಿತಿ ಬಂದಿದೆ. ಸರ್ಕಾರದ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರ ನೆತ್ತರು ಹರಿಸಿ ವಿಧಾನಸೌಧದಲ್ಲಿ ಕೂತಿದ್ದಾರೆ. ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ವಾರದಲ್ಲಿ ಒಂದೇ ಭಾಗದಲ್ಲಿ ಎರಡು ಹತ್ಯೆಗಳು ಆಗಿವೆ. ಅವರ ಕುಟುಂಬ, ತಂದೆ, ತಾಯಿ ನೋಡಿದರೆ ಕನಿಕರ ಅನಿಸುತ್ತೆ. ವಯಸ್ಸಾದ ತಂದೆ ತಾಯಿ ಆರೋಗ್ಯ ಸರಿಯಿಲ್ಲ ಚಿಕ್ಕ ವಯಸ್ಸಿನ ಪತ್ನಿ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಭಜರಂಗದ ದಳ ಅಲ್. ಎಲ್ಲರೂ ಕ್ಷೇಮವಾಗಿ ನೆಮ್ಮದಿಯಾಗಿರಬೇಕು ಎಂದರು.
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಳ್ಳಾರೆಯಿಂದ ಸುಳ್ಯ ಕೋರ್ಟ್‌ಗೆ ಕರೆದೊಯ್ದಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಶಫೀಕ್, ಜಾಕೀರ್
ಇಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧದ ಭಿತ್ತಿಪತ್ರಗಳಿಗೆ ಆಕ್ಷೇಪ ವ್ಯಕ್ತವಾಗಿದೆ. ಪ್ರತಿಭಟನಾ ನಿರತರಿಗೆ ಹಂಚಿದ್ದ ಭಿತ್ತಿ ಪತ್ರ ಹಿಡಿದು ಕಾರ್ಯಕರ್ತರು ಓಡಾಡುತ್ತಿದ್ದರು. ಈ ಹಿನ್ನೆಲೆ ಕೈಯಲ್ಲಿ ಹಿಡಿದಿದ್ದ ಸರ್ಕಾರದ ವಿರುದ್ಧದ ಭಿತ್ತಿ ಪತ್ರಗಳನ್ನ ಬಳಸದಂತೆ ಬೆಂಗಳೂರು ನಗರ ಬಿಜೆಪಿ ಸಂಘಟನಾ ಕಾರ್ಯದರ್ಶಿ ದಶರಥ ಸೂಚಿಸಿದ್ದಾರೆ. ಕೇಂದ್ರವೂ ಬಿಜೆಪಿ, ರಾಜ್ಯವೂ ಬಿಜೆಪಿ, ಸಾವು ಕೂಡ ಬಿಜೆಪಿ ಕಾರ್ಯಕರ್ತರದೇ ಎಂದು ಘೋಷಣೆ ಕೂಗಲಾಗುತ್ತಿದೆ.
ಪ್ರವೀಣ್ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಟೌನ್ಹಾಲ್ ಬಳಿ ಹಿಂದೂ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಿದ್ದು ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿದ್ದಾರೆ.
ಮಂಗಳೂರು ಏರ್‌ಪೋರ್ಟ್‌ಗೆ ಸಿಎಂ ಬೊಮ್ಮಾಯಿ ಆಗಮಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರವೀಣ್ ಹತ್ಯೆ ಬಳಿಕ ಕಾಸರಗೋಡು ಪೊಲೀಸರ ಜೊತೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ. ಕೇರಳ ಪೊಲೀಸರು ತನಿಖೆಗೆ ಸೂಕ್ತ ಸಹಕಾರ ನೀಡುತ್ತಿದ್ದಾರೆ. ಪ್ರವೀಣ್ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಪ್ರಕರಣದ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಆದಷ್ಟು ಬೇಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತೆ. ಪ್ರವೀಣ್ ಕುಟುಂಬಸ್ಥರ ಭೇಟಿ ಬಳಿಕ ಪರಿಹಾರ ಘೋಷಿಸುವೆ. ರಾಜ್ಯ ಸರ್ಕಾರದಿಂದ ನೀಡಬೇಕಾದ ಪರಿಹಾರ ಘೋಷಿಸುವೆ ಎಂದರು.
ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆದಾಗ ಪ್ರವೀಣ್ ಉಳಿಸಲು ಅಂತಿಮ ಪ್ರಯತ್ನ ಮಾಡಿದ್ದ ಆ್ಯಂಬುಲೆನ್ಸ್ ಚಾಲಕ ಟಿವಿ9 ಜೊತೆ ಮಾತನಾಡಿದ್ದಾರೆ. ಶಮ್ಸುಲ್ ಉಲಾಮಾ ಚಾರಿಟೇಬಲ್ ಟ್ರಸ್ಟ್ ನ ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಆಶಿಕ್, ಪ್ರವೀಣ್ ಪ್ರಾಣ ಉಳಿಸಲು ಹೋರಾಡಿದ್ದರು. ಇವರು ಪ್ರವೀಣ್ ಕೊನೆಯ ಸಾವಿನ ಸಮಯ ಹೇಗಿತ್ತು ಅನ್ನೋದನ್ನ ಹಂಚಿಕೊಂಡಿದ್ದಾರೆ. 8.40ಕ್ಕೆ ಸರಿಯಾಗಿ ಪ್ರವೀಣ್ ಇದ್ದ ಸ್ಥಳಕ್ಕೆ ಬಂದೆ. ತಲೆಗೆ, ಕತ್ತಿಗೆ ಗಾಯ ಆಗಿ ರಕ್ತ ಸೋರ್ತಿತ್ತು. ನಾವು ಆತನನ್ನ ಆ್ಯಂಬುಲೆನ್ಸ್ ನಲ್ಲಿ ಹಾಕಿಕೊಂಡು ಹೊರಟ್ವಿ. ಕುಮ್ರಾ ಹೋಗೋವವರೆಗೂ ಆತನ ಆರ್ತನಾದ ಕೇಳ್ತಾ ಇತ್ತು. ಬೆಳ್ಳಾರೆಯಿಂದ 18 ಕಿ.ಮೀ.ದೂರದಲ್ಲಿರುವ ಕುಮ್ರಾ ಇದೆ. ಆದ್ರೆ ದಾರಿ ನಡುವೆಯೇ ಆತನ ಪ್ರಾಣಪಕ್ಷಿ ಹಾರಿಹೋಯ್ತು ಎಂದರು.
ಬಿಜೆಪಿಯವರಿಗೆ ಸಾವಿನ ಮನೆ ರಾಜಕಾರಣ ಮಾಡೋದು ಇನ್ನೂ ತಪ್ಪಿಲ. ಅವರ ಪಕ್ಷದ ಕಾರ್ಯಕರ್ತರು ಅವರ ಮೇಲೆ ತಿರುಗಿ ಬಿದ್ದಿದರಿಂದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಾರೆ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದು ಅವರಿಗೆ ಬಿಟ್ಟಿದ್ದು. ಪ್ರಚೋದನಕಾರಿ ಹೇಳಿಕೆ ಕೊಟ್ಟು, ಕೊಟ್ಟು ಬಲಿ ತೆಗೆದುಕೊಂಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಖಂಡಿಸಿ ವಿಜಯಪುರ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಸಂಚಾಲಕ ಹುದ್ದೆಗೆ ಡಾ.ಬಾಬು ರಾಜೇಂದ್ರ, ಹಾಗೂ ಬಿಜೆಪಿ ಯುವ ಮೋರ್ಚಾ ಮಂಡಲದ ಅಧ್ಯಕ್ಷ ಪುನೀತ್ ಹಿಪ್ಪರಗಿ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದ ಶಫೀಕ್, ಜಾಕೀರ್‌ಗೆ ಮಾಡಲಾದ ವೈದ್ಯಕೀಯ ಪರೀಕ್ಷೆ ಮುಕ್ತಾಯಗೊಂಡಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲೇ ಆರೋಪಿಗಳಿಗೆ ವೈದ್ಯರು ಪರೀಕ್ಷೆ ನಡೆಸಿದರು.
ಸಿ.ಟಿ.ರವಿ ವಿಷಯಾಂತರ ಮಾಡುವ ಕೆಲಸ ಮಾಡ್ತಿದ್ದಾರೆ. ಮಸೂದ್, ಪ್ರವೀಣ್ ಇಬ್ಬರ ಹತ್ಯೆಗೂ ನ್ಯಾಯ ಸಿಗಬೇಕು. ಸರ್ಕಾರದ ವೈಫಲ್ಯ ಮುಚ್ಚಿಸಲು ವಿಷಯಾಂತರ ಮಾಡ್ತಿದ್ದಾರೆ. ದ್ವೇಷ ರಹಿತ ಸರ್ಕಾರ, ತಾರತಮ್ಯರಹಿತ ಸರ್ಕಾರ ಇರಬೇಕು. ಬಿಕ್ಕಟ್ಟು ಸೃಷ್ಟಿಸುವ ಸರ್ಕಾರ ಬೇಡ ಎಂದು ಯು.ಟಿ.ಖಾದರ್ ಹೇಳಿದ್ರು.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತನಾದ ಶಫೀಕ್ ಕೆಲಸ ಮಾಡ್ತಿದ್ದ ಅಂಗಡಿ ಧ್ವಂಸ ಮಾಡಲಾಗಿದೆ. ಉದ್ರಿಕ್ತರಿಂದ ಗುತ್ತಿಗಾರು ಗ್ರಾಮದ ಅಡಕೆ ಅಂಗಡಿ ಧ್ವಂಸಗೊಳಿಸಿ ಆಕ್ರೋಶ ಹೊರ ಹಾಕಿದ್ದಾರೆ.ಶಫೀಕ್ ಬಂಧನ ವಿಷಯ ತಿಳಿಯುತ್ತಿದ್ದಂತೆ ಶಫೀಕ್ ಕೆಲಸ ಮಾಡ್ತಿದ್ದ ಅಡಕೆ ಅಂಗಡಿ ಧ್ವಂಸಗೊಳಿಸಿ ಆಕ್ರೋಶ ಹೊರ ಹಾಕಲಾಗಿದೆ. ಆರೋಪಿ ಕೆಲಸ ಮಾಡ್ತಿದ್ದ ಅಕ್ಕಪಕ್ಕದ 5 ಅಂಗಡಿಗಳಿಗೂ ಹಾನಿಯಾಗಿದೆ. ಮುನ್ನೆಚ್ಚರಿಕೆಯಿಂದ ಗುತ್ತಿಗಾರಿನಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರವೀಣ್ ಎಂಬ ಯುವಕನ ಹತ್ಯೆ ಆಗಿದೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಘಟನೆಗಳು ಪುನರಾವರ್ತನೆ ಆಗಬಾರದು. ಆದಷ್ಟು ಬೇಗಾ ಅವರನ್ನು ಬಂಧನ ಮಾಡಬೇಕು. ಬಂಧನದ ಬಳಿಕ ಸರ್ಕಾರಿ ವಕೀಲರು ಸಮರ್ಥ ವಾದ ಮಾಡಿ ಶಿಕ್ಷೆ ಕೊಡಿಸಬೇಕು ಎಂದು ರಾಮಲಿಂಗರೆಡ್ಡಿ ಹೇಳಿದ್ರು.
ರಾಯಚೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಂಬಣ್ಣ ಮಂದಕಲ್, ಸಿಂಧನೂರು ತಾಲೂಕು ಮಂಡಲ ಅಧ್ಯಕ್ಷ ರವಿ ಉಪ್ಪಾರ, ಸಿಂಧನೂರು ಗ್ರಾಮೀಣ ಅಧ್ಯಕ್ಷ ಸಿದ್ದು ಹೂಗಾರ, ಮಸ್ಕಿ ಮಂಡಲ ಅಧ್ಯಕ್ಷ ನಿರುಪಾದಿ, ಶಿಕ್ಷಕ ಪ್ರಕೋಷ್ಟದ ಜಿಲ್ಲಾಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ್ ರಾಜೀನಾಮೆ ನೀಡಿದ್ದಾರೆ.
ಪ್ರವೀಣ್ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಬೆಳ್ಳಾರೆ ಪೊಲೀಸರು ಕೆಲವು ಮಾಹಿತಿ, ಫೋಟೋಗಳನ್ನು ನೀಡಿದ್ದರು. ಕೆಲ ಸಂಘಟನೆಗಳ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದರು.ಅಪರಾಧ ಹಿನ್ನೆಲೆಯುಳ್ಳ ಶಂಕಿತರನ್ನ ವಶಕ್ಕೆ ಪಡೆದು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪ್ರಕರಣ ಸಂಬಂಧ ಏನಾದರೂ ಮಾಹಿತಿ ಇದ್ದರೆ ನೀಡಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರ ಮನೆಯವರಿಗೆ ವಿಚಾರ ತಿಳಿಸಿಯೇ ಶಂಕಿತರನ್ನು ವಶಕ್ಕೆ ಪಡೆದಿದ್ದೇವೆ ಎಂದು ಟಿವಿ9ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನ ಟೌನ್ಹಾಲ್ ಮುಂದೆ ಪ್ರತಿಭಟನೆ ಹಿನ್ನೆಲೆ ಟೌನ್ಹಾಲ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಎಲ್ಲಾ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಓರ್ವ ಡಿವೈಎಸ್ಪಿ, ಇಬ್ಬರು ಎಸಿಪಿ, 7 ಇನ್ಸ್ಪೆಕ್ಟರ್ಗಳು, 21 ಸಬ್ಇನ್ಸ್ಪೆಕ್ಟರ್, 4 KSRP ತುಕಡಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿಭಟನೆ ವೇಳೆ ಪೊಲೀಸರು ಱಲಿಗೆ ಅವಕಾಶ ನೀಡಿಲ್ಲ. ಒಂದು ವೇಳೆ ಱಲಿ ಮಾಡಲು ಮುಂದಾದ್ರೆ ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. KSRP ಜೊತೆಗೆ ಮೂರ್ನಾಲ್ಕು BMTC ಬಸ್ಗಳ ನಿಯೋಜನೆ ಮಾಡಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ 27 ಶಂಕಿತರನ್ನು ವಿಚಾರಣೆ ನಡೆಸಿದ್ದಾರೆ. ಮಂಗಳೂರು ನಗರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಠಾಣೆಗಳ ಮುಂದೆ ಶಂಕಿತರ ಕುಟುಂಬಸ್ಥರು ಜಮಾಯಿಸಿದ್ದಾರೆ.
ಪ್ರವೀಣ್ ಹತ್ಯೆ ಖಂಡಿಸಿ ಬೆಂಗಳೂರಲ್ಲಿಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಸಂಜೆ 5 ಗಂಟೆಗೆ ಟೌನ್ಹಾಲ್ ಬಳಿ ಹಿಂದೂ ಸಂಘಟನೆಗಳು ಧರಣಿ ನಡೆಸಲು ಮುಂದಾಗಿದ್ದಾರೆ. ಪ್ರತಿಭಟನೆಗೂ ಮುನ್ನ ಸಂಜೆ 4 ಗಂಟೆಗೆ ಬೆಂಗಳೂರು ಡಿಸಿಗೆ ಆರೋಪಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಪ್ರತಿಭಟನೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಲಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜನರ ಆಕ್ರೋಶ ಹೆಚ್ಚಾದ ಬಳಿಕ ಸಿಎಂ ಹೃದಯ ಕರಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತೀಕೆ ಮಾಡಿದ್ದಾರೆ. ಸುನಿಲ್ ಕುಮಾರ್, ಕಟೀಲುಗೆ ಜನರು ದಿಗ್ಬಂಧನ ಹಾಕಿದ್ರು. ಸರ್ಕಾರದಿಂದ ನ್ಯಾಯ ಸಿಗಲ್ಲ ಅಂತ ಪ್ರವೀಣ್ ಪತ್ನಿ ಹೇಳಿದ್ದಾರೆ. ಸಿಎಂ, ಗೃಹ ಸಚಿವರು ಇದ್ದಾರ ಅಂತ ಅನುಮಾನ ಬರ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರು ಮರ್ಯಾದೆ ಕೊಡಲ್ಲ. ಹೀಗಿದ್ದಾಗ ಪೊಲೀಸರು ಗೃಹ ಸಚಿವರಿಗೆ ಹೇಗೆ ಮರ್ಯಾದೆ ಕೊಡ್ತಾರೆ. ಅದಕ್ಕೆ ಗಟ್ಟಿ ಗೃಹ ಸಚಿವರು ಬೇಕೆಂದು ಯತ್ನಾಳ್ ಹೇಳಿದ್ದಾರೆ ಎಂದರು.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಗೂಂಡಾಗಳಿಂದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಅವರು ಮಾನಸಿಕ ಸ್ಥಿತಿಯನ್ನು ಬದಲಾವಣೆ ಮಾಡಿಕೊಂಡಿಲ್ಲ. ಒಬ್ಬನೇ ಇದ್ದಾಗ ಹತ್ಯೆಗೈದು ಹೇಡಿಗಳ ರೀತಿ ಓಡಿ ಹೋಗಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮಾಜದ ಹಿರಿಯರು ಗೂಂಡಾಗಳಿಗೆ ತಿಳಿಹೇಳಬೇಕು. ಇಡೀ ರಾಜ್ಯದ ಶಾಂತಿ, ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದರು.
ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಮಾತನಾಡಿದ್ದು, ಸರ್ಕಾರ ಏನೂ ಮಾಡ್ತಾ ಇಲ್ಲ ಅನೋ ಭಾವನೆ ತಪ್ಪು. ಘಟನೆಯನ್ನು ಖಂಡಿಸುತ್ತೇನೆ. ಸಿಎಂ, ಗೃಹ ಸಚಿವರಲ್ಲಿ ವಿನಂತಿ ಮಾಡುತ್ತೇನೆ. ಭಾರತ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಆಗಬೇಕು. ಎರಡನೇ ಘಟನೆಯಾಗಿದ್ದು ಕಟ್ಟು ನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯ. ವಿಶೇಷ ಕೋರ್ಟ್ ಮಾಡಿ ಶೀಘ್ರದಲ್ಲೇ ಶಿಕ್ಷೆ ಪ್ರಕಟ ಮಾಡಬೇಕು ಎಂದರು.
ಕಾರವಾರ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಹಿನ್ನೆಲೆ ಬಿಜೆಪಿ ಯುವ ಮೋರ್ಚಾದ ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲದ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಒಟ್ಟು 42 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆಯಷ್ಟೇ ಪ್ರತಿಭಟನೆ ನಡೆಸಿ ರಾಜೀನಾಮೆ ಸಲ್ಲಿಸಿದ್ದ 20ಕ್ಕೂ ಹೆಚ್ಚು ಕಾರವಾರ ನಗರ ಯುವ ಮೋರ್ಚಾದ ಸದಸ್ಯರು..
ಆದರೆ, ಮಧ್ಯಾಹ್ನದ ಬಳಿಕ ಯುವ ಮೋರ್ಚಾದ ಗ್ರಾಮೀಣ ಮಂಡಲದ ಸದಸ್ಯರಿಂದಲೂ ರಾಜೀನಾಮೆ ನೀಡಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಶಫೀಕ್ ಬೆಳ್ಳಾರೆ ತಂದೆ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಶಫೀಕ್ ಬೆಳ್ಳಾರೆ ಪ್ರವೀಣ್ನನ್ನು ಕೊಲೆ ಮಾಡಿಲ್ಲ. ಪ್ರವೀಣ್ ಕೊಲೆ ನಡೆದಾಗ ನನ್ನ ಮಗ ಮನೆಯಲ್ಲಿದ್ದ. ಶಫೀಕ್ ಎಸ್ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಕೊಲೆಯಾದ ಪ್ರವೀಣ್ ನಮ್ಮ ಜೊತೆಗೂ ಆತ್ಮೀಯವಾಗಿದ್ದ. ಆತನ ಚಿಕನ್ ಅಂಗಡಿಯಲ್ಲಿ 3 ತಿಂಗಳು ಕೆಲಸ ಮಾಡಿದ್ದೇನೆ. ಮೂರು ತಿಂಗಳ ಹಿಂದೆಯಷ್ಟೇ ಚಿಕನ್ ಅಂಗಡಿ ಕೆಲಸ ಬಿಟ್ಟಿದ್ದೆ. ನನ್ನ ಮಗ ಶಫೀಕ್ ಕೊಲೆ ಮಾಡಿಲ್ಲ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ರಾಜೀನಾಮೆ ಪರ್ವ ಮುಂದುವರೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ನಾಯಕರು ರಾಜೀನಾಮೆ ನೀಡುತ್ತಿದ್ದಾರೆ. ಚಿಂಚೋಳಿ ತಾಲೂಕಿನ ಒಬಿಸಿ ಮೋರ್ಚಾ ಕಾರ್ಯದರ್ಶಿ ಸ್ಥಾನಕ್ಕೆ ಜಯಪ್ರಕಾಶ್ ರಾಜೀನಾಮೆ ನೀಡಿದ್ದಾರೆ. ಹಾಗೂ ಪ್ರವೀಣ್ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ನಿರ್ಧರಿಸಿದ್ದೇವೆ. ಈ ರೀತಿಯ ಪುಂಡಾಟಿಕೆಗಳನ್ನು ತಡೆಯಲು ರಾಜ್ಯ ಪೊಲೀಸ್ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಮಂಗಳೂರಿನಲ್ಲಿ ಟಿವಿ9ಗೆ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಪ್ರವೀಣ್ ಕೊಲೆ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತೇವೆ. ಆರೋಪಿಗಳಿಗೆ ಹಣಕಾಸಿನ ನೆರವು ನೀಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಸಾಮೂಹಿಕ ರಾಜೀನಾಮೆ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಬಿಜೆಪಿ ಪದಾಧಿಕಾರಿ ರಾಜೀನಾಮೆ ನೀಡಿದ್ದಾರೆ. ಜೊತೆಗೆ ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಚಂದ್ರಶೇಖರ್, ನಾಗೇಂದ್ರ, ಸುದರ್ಶನ್ ಆಳ್ವಾರ್ ಸೇರಿ ಹಲವರು ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಬಿಜೆಪಿಯಿಂದ 25 ಲಕ್ಷ ರೂ. ನೆರವು ನೀಡಲು ನಿರ್ಧರಿಸಲಾಗಿದೆ. ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡುವ ಜವಾಬ್ದಾರಿಯನ್ನು ನಳಿನ್ ಕುಮಾರ್ ಕಟೀಲು ತೆಗೆದುಕೊಂಡಿದ್ದಾರೆ. ಇಂದು ಸಂಜೆ ನೆಟ್ಟಾರು ಗ್ರಾಮಕ್ಕೆ ಭೇಟಿ ನೀಡಲಿದ್ದೇನೆ ಎಂದು ಕಟೀಲು ತಿಳಿಸಿದ್ದಾರೆ.
ಇಂದು ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳುತ್ತೇವೆ. ಪ್ರವೀಣ್ ಕುಟುಂಬಸ್ಥರ ಎಲ್ಲ ಆಶಯಗಳನ್ನೂ ಈಡೇರಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ. ನಾನು, ಸಿಎಂ ನೆಟ್ಟಾರಿಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇವೆ. ಪ್ರವೀಣ್ ಕುಟುಂಬದ ಜೊತೆ ನಾವಿದ್ದೇವೆ, ನಮ್ಮ ಸರ್ಕಾರವಿದೆ. ಕಠಿಣ ಕಾನೂನು ಜಾರಿಮಾಡುವ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ. ಅಂತಹ ಕಠಿಣ ಕಾನೂನು ನಮ್ಮ ಸರ್ಕಾರ ಜಾರಿ ಮಾಡುತ್ತದೆ. ಘಟನೆ ಹಿಂದೆ PFI ಕೈವಾಡ ಇರುವ ಬಗ್ಗೆ ಮಾತು ಕೇಳಿ ಬರ್ತಿವೆ. ಪಿಎಫ್ಐ ಸಂಘಟನೆ ನಿಷೇಧಗೊಳಿಸುವಂತೆ ಒತ್ತಾಯಿಸುತ್ತೇನೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರು ಗ್ರಾಮಕ್ಕೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ. ಪ್ರವೀಣ್ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ಸಿಎಂ, ಗೃಹ ಮಂತ್ರಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ. SDPI, PFI ಯಾರೇ ಇದ್ರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಇಂದೇ ನೆಟ್ಟಾರು ಗ್ರಾಮಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದು, ಮಧ್ಯಾಹ್ನ 3.15ರ ಫ್ಲೈಟ್ನಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರು ನೆಟ್ಟಾರು ಗ್ರಾಮಕ್ಕೆ ಪ್ರಯಾಣ ಮಾಡಲಿದ್ದಾರೆ.
ಪ್ರವೀಣ್ ನೆಟ್ಟಾರು ಕೊಂದ ಹಂತಕರಿಗಾಗಿ ತೀವ್ರ ಶೋಧ ನಡೆಯುತ್ತಿದ್ದು, ಐದಕ್ಕೂ ಹೆಚ್ಚು ವಿಶೇಷ ತಂಡಗಳಿಂದ ಹಂತಕರಿಗೆ ಶೋಧ ನಡುಯುತ್ತಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಪೊಲೀಸರಿಂದ ಟ್ರ್ಯಾಕಿಂಗ್ ಮಾಡಲಾಗುತ್ತಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರಿನಲ್ಲಿ ಟಿವಿ9ಗೆ ಅಲೋಕ್ ಕುಮಾರ್ ಹೇಳಿಕೆ ನೀಡಿದರು. ನಿನ್ನೆ ಸಂಜೆ ವಶಕ್ಕೆ ಪಡೆದು ಇಂದು ಬಂಧಿಸಲಾಗಿದೆ. ಮೊಹ್ಮದ್ ಶಫೀಕ್ ಹಾಗೂ ಜಾಕೀರ್ ಬಂಧಿಸಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಕೊಲೆ ಪ್ರಕರಣ ಸಂಬಂಧ ಮುಂದಿನ ತನಿಖೆ ನಡೆಸಲಾಗ್ತಿದೆ ಎಂದು ಹೇಳಿದರು.
ಬೆಂಗಳೂರು: ಕಾರ್ಯಕರ್ತರ ಮನಸ್ಥಿತಿಗೆ ತಕ್ಕಂತೆ ಸರ್ಕಾರ ಬದಲಾಗಬೇಕು. ಅದಕ್ಕೆ ತಕ್ಕಂತೆ ನಾವು ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇವೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದರು. ಮೋದಿ ಮಾಡೆಲ್ ಕೂಡ ನಮ್ಮದೇ ಯೋಗಿ ಮಾಡೆಲ್ ಕೂಡ ನಮ್ಮದೇ. ಯುಪಿ ಮಾದರಿಯಲ್ಲಿ ಕಠಿಣ ಕ್ರಮ ಜಾರಿಗೊಳಿಸಲು ಶೀಫಾರಸು ಮಾಡುತ್ತೇವೆ ಎಂದರು.
ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಸಿಎಂ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ ಪ್ರವೀಣ್ ಸೂದ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಪ್ರಕರಣದ ತನಿಖೆ ಬಗ್ಗೆ ಸಿಎಂ ಬೊಮ್ಮಾಯಿ ಪಿನ್ ಟೂ ಪಿನ್ ಮಾಹಿತಿ ಪಡೆಯುತ್ತಿದ್ದಾರೆ.
ಮೃತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರಾಜ್ಯ ಬಿಜೆಪಿ ವತಿಯಿಂದ 25 ಲಕ್ಷ ರೂ. ನೆರವು ನೀಡಲು ನಿರ್ಧಾರ ಮಾಡಲಾಗಿದೆ.
ಪ್ರವೀಣ್ ಮನೆ ನಿರ್ಮಾಣ ಮಾಡಿಕೊಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇಂದು ಸಂಜೆ ಮತ್ತೆ ನೆಟ್ಟಾರಿಗೆ ತೆರಳಿ ಮೃತ ಪ್ರವೀಣ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಭೇಟಿ ನೀಡಲಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹ್ಮದ್ ಶಫೀಕ್ ಹಾಗೂ ಜಾಕೀರ್ ಬಂಧಿತರು. ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮಾಡಿದರು. ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪದಲ್ಲಿ ಅಂಗಡಿ ಮುಂಗಟ್ಟು, ಬಸ್ ಸಂಚಾರ ಬಂದ್ ಮಾಡಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ ಮೃತ ಪ್ರವೀಣ್ ನೆಟ್ಟಾರು ತಂದೆ ಶೇಖರ್ ಪೂಜಾರಿ ಅಸ್ವಸ್ಥರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಶೇಖರ್ ಬಳಲುತ್ತಿದ್ದು, ಆ್ಯಂಬುಲೆನ್ಸ್ನಲ್ಲಿ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರು.
ಶಾಲಾ ಕಟ್ಟಡಗಳಿಗೆ ವಿವೇಕ ಅಂತ ಬಿಸಿ ನಾಗೇಶ್ ಹೆಸರು ನೀಡಿದ್ದಾರೆ, ಮಠಗಳಿಗೂ ಕೂಡ ಸಹಾಯ ಮಾಡಿದ್ದೇವೆ, ಪ್ರಗತಿಪರ ಉದ್ಯೋಗ ಸೃಷ್ಟಿ ಮಾಡುವವರಿಂದ ಹಿಡಿದು ಮಹಿಳೆಯರು ಯುವಕರು ಎಲ್ಲರಿಗೂ ಕೂಡ ಸಾರ್ಥಕತೆ ನೀಡುವ ಕೆಲಸ ಆಗಿದೆ.
ಸರ್ವರ ವಿಕಾಸ ಆಗುವ ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದೇವೆ, ಐದು ಹೊಸ ನಗರ ಕಟ್ಟುವ ನಿರ್ಧಾರ ಆಗಿದೆ, ಸವಾಲುಗಳ ಬಗ್ಗೆಯೂ ಕೂಡ ಚಿಂತನೆ ಮಾಡಿದ್ದೇವೆ, ಕೋಮು ಸೌಹಾರ್ದ ಕದಡುವ ಶಕ್ತಿಗಳು ಹೆಚ್ಚಾಗಿವೆ.
ಎಲ್ಲೆಲ್ಲಿ ಸಮಸ್ಯೆ ಇದೆ ಜನರು ಕಷ್ಟದಲಿದ್ದಾರೆ ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. 75 ಯುನಿಟ್ ಉಚಿತ ವಿದ್ಯುತ್ ನೀಡ್ತಿದ್ದೇವೆ ಅದಕ್ಕೆ ಡಿಬಿಟಿ ಇವತ್ತಿನಿಂದ ಪ್ರಾರಂಭ ಮಾಡ್ತೇವೆ. 100 ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿದ್ದೇವೆ 8 ಸಾವಿರ ಶಾಲಾ ಕೊಠಡಿಗಳನ್ನು ಕಟ್ಟಿಸಲಾಗಿದೆ
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ, 100 ಪಿಎಚ್ಇ ಸೆಂಟರ್ ಅಭಿವೃದ್ಧಿ ಗೆ ಚಾಲನೆ ನೀಡಿದ್ದೇವೆ.
ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯಿತ್ತೇವೆ, ಕೇವಲ ಬಾಯಿ ಮಾತಲ್ಲಿ ಮಾತ್ರವಲ್ಲ ಕಠಿಣ ಕ್ರಮಗಳನ್ನು, ತೆಗೆದುಕೊಂಡಿದ್ದೇವೆ, ಕೇವಲ ಮಾತಲ್ಲಿ ಉಳಿಯೋದಿಲ್ಲ, ಕೆಲಸ ಮಾಡ್ತೇವೆ, ಕರ್ನಾಟಕ ನಿಯಂತ್ರಣಕ್ಕೆ ಹಲವಾರು ಕ್ರಮ ಆಗಿದೆ.
ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಂಡ ರಾಜ್ಯ ನಮ್ಮದು, ಆರೋಗ್ಯ ಇಲಾಖೆಯಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ, 750 ಗ್ರಾ.ಪಂ.ಗಳಿಗೆ ಅಮೃತ್ ಯೋಜನೆ ಅಡಿ ಮಾಡಲಾಗಿದೆ, ಕರ್ನಾಟಕದಲ್ಲಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ ಬಂದಿದೆ , ನೀತಿ ಆಯೋಗದಲ್ಲಿ ಕರ್ನಾಟಕ ನಂಬರ್ ಒನ್ ಇದೆ. 1.15 ಲಕ್ಷ ಕೋಟಿ ಒಡಂಬಡಿಕೆಗಳಿಗೆ ಸಹಿ ಮಾಡಿದ್ದೇನೆ.
ಹರ್ಷನ ವಿಚಾರದಲ್ಲಿ 24 ಗಂಟೆಗಳಲ್ಲಿ ಕ್ರಮ ತೆಗೆದುಕೊಂಡಿದ್ದೇವೆ, ಕೇವಲ ಮಾತಲ್ಲ ಮಾಡಿತೋರಿಸುತ್ತೇವೆ ಹಾಗೆಯೇ ಪ್ರವೀಣ್ ವಿಚಾರದಲ್ಲೂ ಅದೇ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.
ಕರ್ನಾಟಕವನ್ನು ನಿಯಂತ್ರಣ ಮಾಡಲು ಯಾವ ವಿಧಾನಗಳಿವೆ ಅವುಗಳೆಲ್ಲವನ್ನೂ ಪ್ರಯತ್ನ ಮಾಡುತ್ತಿದ್ದೇವೆ.
ಸಂದರ್ಭ ಬಂದರೆ ಯೋಗಿ ಮಾದರಿಯ ಸರ್ಕಾರವನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿದ್ಯಾನಿಧಿ: 50 ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ವಿದ್ಯಾನಿಧಿಯ ಸೌಲಭ್ಯ ಸಿಗಲಿದೆ
28 ಗ್ರಾಮಗಳಲ್ಲಿ ಸ್ತ್ರೀಶಕ್ತಿಯಂತೆಯೇ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಒಂದು ಸ್ವಾಮಿ ವಿವೇಕಾನಂದ ಸಂಘವನ್ನು ಮಾಡಿ ಒಂದೂವರೆ ಲಕ್ಷ ಕೊಟ್ಟು ಉತ್ಪಾದನೆ ತರಬೇತಿ ನೀಡಲಾಗುತ್ತದೆ.
ಮಹಿಳೆಯರು ಯುವಕರ ಕಾರ್ಯಕ್ರಮಗಳು, ಬಡ ಜನರಿಗೆ, ಎಸ್ಸಿ-ಎಸ್ಟಿ, ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳ ಬಗ್ಗೆ ಘೋಷಣೆ ಮಾಡುತ್ತಿದ್ದಾರೆ.
ಹೆಬ್ಬಾಳ ಫ್ಲೈಓವರ್ ಹಾಗೂ ಗುರಗುಂಟೆ ಪಾಳ್ಯ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ, ಎಲ್ಲೆಲ್ಲಿ ಸಮಸ್ಯೆಯಿದೆ ಅಲ್ಲಲ್ಲಿ ಜವಾಬ್ದಾರಿಯುತವಾಗಿ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ.
ನೀರಾವರಿಗೆ ಸಣ್ಣ ನೀರಾವರಿ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಯೋಜನೆಗಳಲ್ಲಿ ಬದಲಾವಣೆ ಮಾಡಿದ್ದೇವೆ. ಪ್ರಧಾನಿ ಮೋದಿ ಹೇಳಿರುವುವಂತೆ ಹಿಂದುಳಿದ ಜಿಲ್ಲೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಟಿವಿ9ಗೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ ನಿಡಿದ್ದು, ಇಲ್ಲಿಯವರೆಗೆ ಸುಮಾರು 21 ಜನರನ್ನು ವಶಕ್ಕೆ ಪಡೆದಿದ್ದೇವೆ. SDPI, PFI ಸೇರಿ ಕೆಲ ಶಂಕಿತರನ್ನೂ ವಶಕ್ಕೆ ಪಡೆದಿದ್ದೇವೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಪ್ರಾಣಿ ಪ್ರೇಮಿಯಾಗಿದ್ದ ಪ್ರವೀಣ್ ನೆಟ್ಟಾರು, ಬೀದಿ ನಾಯಿಮರಿಗಳನ್ನ ತಂದು ಸಾಕುತ್ತಿದ್ದ. ಅನಾಥ ನಾಯಿ ಮರಿಗಳನ್ನ ಅಕ್ಕರೆಯಿಂದಕಾಣುತ್ತಿದ್ದ. ಇಂದಿಗೂ ಅನಾಥ ನಾಯಿ ಮರಿ ಪ್ರವೀಣ್ ಮನೆಯಲ್ಲಿದೆ. ಪ್ರವೀಣ್ ಪ್ರಾಣಿ ಪ್ರೀತಿಯನ್ನ ನೆನೆದು ಪತ್ನಿ ನೂತನ ಭಾವುಕರಾದರು.
ಉಡುಪಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ ಉಡುಪಿ ಬೈಲಕೆರೆ ವಾರ್ಡ್ನ 7 ಬಿಜೆಪಿ ಸದಸ್ಯರ ರಾಜೀನಾಮೆ ನೀಡಿದ್ದಾರೆ. ಸುರಕ್ಷತೆ ಬಗ್ಗೆ ಸರ್ಕಾರದ ಮೇಲೆ ವಿಶ್ವಾಸ ಕಳೆದುಹೋಗಿದೆ. ಹೀಗಾಗಿ ಅತ್ಯಂತ ನೋವಿನಿಂದ ಕ್ರಮ ತೆಗೆದುಕೊಂಡಿದ್ದೇವೆ.
ಕೊಪ್ಪಳ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಗ್ರಾಮೀಣ ಮಂಡಲದ ಕೋಷ್ಟಾಧ್ಯಕ್ಷ ಸ್ಥಾನಕ್ಕೆ ಅಣ್ಣಯ್ಯ ಹಿಟ್ನಾಳ್ ರಾಜೀನಾಮೆ ನೀಡಿದ್ದಾರೆ. ಓಲೈಕೆ ರಾಜಕಾರಣ ಮಾಡಬೇಡಿ ಎಂದು ಅಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹಿಂದೂಗಳ ಕೊಲೆ ನಡೆಯುತ್ತಿರುವುದು ಬೇಸರ. ಬೇರೆ ರಾಜ್ಯದಿಂದ ಜನರನ್ನು ಕರೆಸಿ ಕೊಲೆ ಪಿತೂರಿ ನಡೀತಿದೆ ಎಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದರು. ರಾಜ್ಯದಲ್ಲಿ ಹಿಂದೂಗಳು ಒಗ್ಗಟ್ಟಾಗಬೇಕು. ಎಸ್ಡಿಪಿಐ, ಪಿಎಫ್ಐ ಸಂಘಟನೆಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಕೊಲೆ ಆರೋಪಿಗಳ ಬಂಧನಕ್ಕೆ ತಂಡಗಳ ರಚನೆ ಮಾಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ ಇಂದು ಮೃತ ಪ್ರವೀಣ್ ನಿವಾಸಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಮಧ್ಯಾಹ್ನದ ವೇಳೆಗೆ ಬೆಳ್ಳಾರೆಗೆ ವಿಜಯೇಂದ್ರ ತಲುಪಲಿದ್ದಾರೆ.
ಚಿಕ್ಕಮಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣ ಬಂದ್ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. ಸೂಕ್ತ ನ್ಯಾಯಕ್ಕೆ ಆಗ್ರಹಿಸಿ ಕೊಪ್ಪ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ: ಪ್ರವೀಣ್ ಹತ್ಯೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಉಂಟಾಗಿದ್ದು, ನೆಲಮಂಗಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ಗಳನ್ನ ಹಾಕಿ ಸರ್ಕಾರದ ವಿರುದ್ಧ ಬಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ.
Published On - 9:39 am, Thu, 28 July 22