ಈ ಮದುಮಗನಿಗೆ ಮದುವೆಗಿಂತ ಎಲೆಕ್ಷನ್ ಮುಖ್ಯವಾಯ್ತು! ನಿಖಾಃ ಆದ ಕೂಡಲೇ ನಾಮಪತ್ರ ಸಲ್ಲಿಸಲು ಓಡೋಡಿ ಬಂದ..
ಮದುಮಗನೊಬ್ಬ ಮದುವೆ ಮಂಟಪದಿಂದ ನೇರವಾಗಿ ಬಂದು ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ. ಮಕ್ಬೂಲ್ ಬನ್ನೆಟ್ಟಿ ಎಂಬ ಮದುಮಗನಿಂದ ನಾಮಪತ್ರ ಸಲ್ಲಿಕೆಯಾಗಿದೆ.

ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಮದುಮಗ ಮಕ್ಬೂಲ್ ಬನ್ನೆಟ್ಟಿ
ವಿಜಯಪುರ: ಮದುಮಗನೊಬ್ಬ ಮದುವೆ ಮಂಟಪದಿಂದ ನೇರವಾಗಿ ಬಂದು ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ. ಮಕ್ಬೂಲ್ ಬನ್ನೆಟ್ಟಿ ಎಂಬ ಮದುಮಗನಿಂದ ನಾಮಪತ್ರ ಸಲ್ಲಿಕೆಯಾಗಿದೆ.
ಬಿದರಕುಂದಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕಾತರದಲ್ಲಿದ್ದ ಮಕ್ಬೂಲ್, ಅದಕ್ಕಾಗಿ ತನ್ನ ನಿಖಾಃ ಅಡ್ಡಿಬರಲು ಬಿಡಲಿಲ್ಲ. ಹಾಗಾಗಿ, ನಿಖಾಃ ಆದ ಕೂಡಲೇ ಮಕ್ಬೂಲ್ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಗ್ರಾಮ ಪಂಚಾಯಿತಿ ಕಚೇರಿಗೆ ವಿವಾಹದ ಹಾರ ತುರಾಯಿ ಹಿಡಿದುಕೊಂಡೇ ಓಡೋಡಿ ಬಂದಿದ್ದನು. ಮದುವೆ ಮಂಟಪದಿಂದಲೇ ಆಗಮಿಸಿ ನಾಮಪತ್ರ ಸಲ್ಲಿಸಿದ ಮಕ್ಬೂಲ್ ಈ ಮೂಲಕ ಎಲ್ಲರ ಗಮನ ಸೆಳೆದರು.

HD ಕುಮಾರಸ್ವಾಮಿಗೆ ನಾಚಿಕೆಯಾಗಬೇಕು -ಸಿದ್ದರಾಮಯ್ಯ ಕೆಂಡಾಮಂಡಲ
Published On - 5:04 pm, Thu, 10 December 20



