ಯಡಿಯೂರಪ್ಪಗೆ ಯಾಮಾರಿಸಿದ ಎಚ್​ ಡಿ ರೇವಣ್ಣ: ನಿಮಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೋರಿಕೊಂಡೆ ಎಂದರು!

| Updated By: ಸಾಧು ಶ್ರೀನಾಥ್​

Updated on: Sep 14, 2021 | 12:20 PM

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಎರಡನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ನಿಧನರಾದ ಕಾಂಗ್ರೆಸ್​ ಹಿರಿಯ ನಾಯಕ ಅಸ್ಕರ್ ಫರ್ನಾಂಡಿಸ್​ ಅವರಿ ಸಂತಾಪ ಸೂಚಿಸಿ, ಮಾತನಾಡುತ್ತಿದ್ದಾರೆ. ಇನ್ನು ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಲಾಂಜ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಜೆಡಿ ಎಸ್​ ಹಿರಿಯ ಶಾಸಕ ಎಚ್​ ಡಿ ರೇವಣ್ಣ ಅವರು ಮುಖಾಮುಖಿಯಾಗಿ ಸ್ವಾರಸ್ಯಕರವಾಗಿ ಮಾತನಾಡಿಕೊಂಡರು. ಮಾಧ್ಯಮಗಳಿಗೆ ಏನು ಹೇಳಿದೆ ರೇವಣ್ಣ ಎಂದು ಬಿ ಎಸ್​ ಯಡಿಯೂರಪ್ಪ ನೇರವಾಗಿ […]

ಯಡಿಯೂರಪ್ಪಗೆ ಯಾಮಾರಿಸಿದ ಎಚ್​ ಡಿ ರೇವಣ್ಣ:  ನಿಮಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೋರಿಕೊಂಡೆ ಎಂದರು!
ಯಡಿಯೂರಪ್ಪಗೆ ಯಾಮಾರಿಸಿದ ಎಚ್​ ಡಿ ರೇವಣ್ಣ: ನಿಮಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೋರಿಕೊಂಡೆ ಎಂದರು!
Follow us on

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಎರಡನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ನಿಧನರಾದ ಕಾಂಗ್ರೆಸ್​ ಹಿರಿಯ ನಾಯಕ ಅಸ್ಕರ್ ಫರ್ನಾಂಡಿಸ್​ ಅವರಿ ಸಂತಾಪ ಸೂಚಿಸಿ, ಮಾತನಾಡುತ್ತಿದ್ದಾರೆ. ಇನ್ನು ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಲಾಂಜ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಜೆಡಿ ಎಸ್​ ಹಿರಿಯ ಶಾಸಕ ಎಚ್​ ಡಿ ರೇವಣ್ಣ ಅವರು ಮುಖಾಮುಖಿಯಾಗಿ ಸ್ವಾರಸ್ಯಕರವಾಗಿ ಮಾತನಾಡಿಕೊಂಡರು.

ಮಾಧ್ಯಮಗಳಿಗೆ ಏನು ಹೇಳಿದೆ ರೇವಣ್ಣ ಎಂದು ಬಿ ಎಸ್​ ಯಡಿಯೂರಪ್ಪ ನೇರವಾಗಿ ಕೇಳಿದಾಗ, ಏನೂ ಇಲ್ಲ ಸರ್ ಬಿ ಎಸ್​ಯಡಿಯೂರಪ್ಪಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೇಳಿರುವುದಾಗಿ ಹೇಳಿದ್ದೇನೆ ಎಂದು ರೇವಣ್ಣ ನಗೆಯಾಡುತ್ತಲೇ ಹೇಳಿದರು. ಅದಕ್ಕೆ ಎಚ್​ ಡಿ ರೇವಣ್ಣ ಅವರ ಭುಜ ತಟ್ಟಿ ಯಡಿಯೂರಪ್ಪ ಮುಂದಕ್ಕೆ ತೆರಳಿದರು.

ರೇವಣ್ಣ ಮಾಧ್ಯಮದವರ ಜೊತೆ ಮಾತನಾಡಿದ್ದು ಕಲ್ಬುರ್ಗಿ ಪಾಲಿಕೆ ವಿಚಾರವಾಗಿ!

ಸದನ ಸಲಹಾ ಸಮಿತಿಯ (ಬಿಎಸಿ) ಸಭೆ ಮುಗಿಸಿಕೊಂಡು ಹೊರಬಂದ ವೇಳೆ ಇಬ್ಬರೂ ನಾಯಕರು ಪರಸ್ಪರ ಮಾತನಾಡಿಕೊಂಡು ಹಾಸ್ಯದ ಚಟಾಕಿ ಹಾರಿಸಿದರು. ಬಿಎಸಿ ಸಭೆ ಮುಗಿಸಿ ವಿಧಾನಸಭೆಗೆ ತೆರಳುವ ವೇಳೆ ವಿಧಾನಸೌಧದ ಲಾಂಜ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಎದುರಾದ ಜೆಡಿಎಸ್ ಶಾಸಕ ಹೆಚ್‌‌.ಡಿ. ರೇವಣ್ಣ ಅವರನ್ನುದ್ದೇಶಿಸಿ, ಏನು ಹೇಳಿದ್ಯಯ್ಯಾ ಮೀಡಿಯಾಗೆ ಎಂದು ಯಡಿಯೂರಪ್ಪ ಕೇಳಿದರು.

ಏನೂ ಇಲ್ಲ ಸಾರ್, ಯಡಿಯೂರಪ್ಪ ಸಾಹೇಬ್ರಿಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದೇನೆ ಸಾರ್ ಎಂದರು ರೇವಣ್ಣ. ಅದಕ್ಕೆ ನಕ್ಕು ರೇವಣ್ಣ ಭುಜ ತಟ್ಟಿ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಯಡಿಯೂರಪ್ಪ ಒಳಹೋದರು. ಗಮನಾರ್ಹವೆಂದರೆ ಇದಕ್ಕೂ ಮುನ್ನ ಕಲ್ಬುರ್ಗಿ ಪಾಲಿಕೆ ವಿಚಾರವಾಗಿ ರೇವಣ್ಣ ಮಾಧ್ಯಮದವರ ಜೊತೆ ಮಾತನಾಡಿದರು.

Karnataka Assembly Session | ವಿಧಾನಸಭೆ​ ಕಲಾಪ ನೇರ ಪ್ರಸಾರ | TV9 Kannada Live

ಇದನ್ನೂ ಓದಿ:
ವಿಧಾನಸೌಧ ಎದುರು ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು! ಏನಾಯ್ತು ಅಲ್ಲಿ?

ಇದನ್ನೂ ಓದಿ:
ಕಾಂಗ್ರೆಸ್​ನವರು ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ಮಾಡಬೇಕಿತ್ತು; ಸದನದಲ್ಲೇ ತಕ್ಕ ಉತ್ತರ ನೀಡುವೆ – ಸಿಎಂ ಬೊಮ್ಮಾಯಿ

(bs yediyurappa and hd revanna meet during bac meet during karnataka assembly session)

Published On - 12:13 pm, Tue, 14 September 21