ಹಾವೇರಿ ರೈತನ ಜಮೀನಿನಲ್ಲಿ ದೇವರ ಅಸ್ಪಷ್ಟ ಮೂರ್ತಿಗಳು ಉದ್ಭವ? ಸ್ಥಳದಲ್ಲೇ ಮೌನವಾಗಿ ಬಿಡಾರ ಹೂಡಿದ ದಾವಣಗೆರೆ ಸ್ವಾಮೀಜಿ
ಗ್ರಾಮದ ಉಡಚಪ್ಪ ಕೊಡೆಪ್ಪನವರ ಎಂಬುವರ ಜಮೀನಿನಲ್ಲಿ ದೇವರ ಅಸ್ಪಷ್ಟ ಮೂರ್ತಿಗಳು ಉದ್ಭವವಾಗಿವೆಯಂತೆ. ಕಳೆದೊಂದು ವರ್ಷದಿಂದ ರೈತ ಉಡಚಪ್ಪ ಮತ್ತು ಆತನ ಪತ್ನಿ ಮಂಜವ್ವಳ ಕನಸಿನಲ್ಲಿ ಉಡಚಮ್ಮದೇವಿ ಬರುತ್ತಿದ್ದರಂತೆ.
ಹಾವೇರಿ: ರೈತರೊಬ್ಬರ ಜಮೀನಿನಲ್ಲಿ ದೇವರ ಉದ್ಭವ ಮೂರ್ತಿಗಳು ಪ್ರತ್ಯಕ್ಷವಾಗಿವೆ ಎಂಬ ವದಂತಿ ಹಬ್ಬಿದ್ದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಾದ್ಯಂತ ಹರಡಿದೆ. ವಿಗ್ರಹಗಳನ್ನು ನೋಡಲು ನೂರಾರು ಜನರು ಇಚ್ಚಂಗಿಯ ರೈತನ ಜಮೀನಿಗೆ ಬರುತ್ತಿದ್ದಾರೆ.
ಗ್ರಾಮದ ಉಡಚಪ್ಪ ಕೊಡೆಪ್ಪನವರ ಎಂಬುವರ ಜಮೀನಿನಲ್ಲಿ ದೇವರ ಅಸ್ಪಷ್ಟ ಮೂರ್ತಿಗಳು ಉದ್ಭವವಾಗಿವೆಯಂತೆ. ಕಳೆದೊಂದು ವರ್ಷದಿಂದ ರೈತ ಉಡಚಪ್ಪ ಮತ್ತು ಆತನ ಪತ್ನಿ ಮಂಜವ್ವಳ ಕನಸಿನಲ್ಲಿ ಉಡಚಮ್ಮದೇವಿ ಬರುತ್ತಿದ್ದರಂತೆ. ಇಪ್ಪತ್ತೊಂದು ದಿನಗಳ ಕಾಲ ಭಿಕ್ಷೆ ಬೇಡಿ ತನ್ನನ್ನ ಪೂಜಿಸಿದರೆ ಪ್ರತ್ಯಕ್ಷಳಾಗುತ್ತೇನೆ ಎಂದು ದೇವಿ ಕನಸಿನಲ್ಲಿ ಹೇಳಿದ್ದಳಂತೆ. ಅದರಂತೆ ರೈತ ಉಡಚಪ್ಪ ಮಳೆದ ಐದು ದಿನಗಳಿಂದ ಊರೂರು ಸುತ್ತಿ ಭಿಕ್ಷೆ ಬೇಡಿದ್ದನಂತೆ. ಆದ್ರೆ ಈಗ ಕೇವಲ ಐದೇ ದಿನಕ್ಕೆ ರೈತ ಉಡಚಪ್ಪನ ಜಮೀನಿನಲ್ಲಿ ಪಾರ್ವತಿ, ಪರಮೇಶ್ವರ, ಗಣೇಶ, ಉಡಚಮ್ಮ, ನಾಗವೇಣಿ, ಯಲ್ಲಮ್ಮಳ ಅಸ್ಪಷ್ಟ ಮೂರ್ತಿಗಳು ಗೋಚರಿಸಿವೆ.
ಮೂರ್ತಿಗಳು ಕಣ್ಣಿಗೆ ಬೀಳುತ್ತಿದ್ದಂತೆ ಜನ ಮರಳೋ ಜಾತ್ರೆ ಮರಳೋ ಎಂಬಂತೆ ಅಸ್ಪಷ್ಟ ಮೂರ್ತಿಗಳನ್ನ ನೋಡಿ ಪೂಜೆ ಮಾಡೋಕೆ ಜನರ ದಂಡೇ ಹರಿದು ಬರುತ್ತಿದೆ. ಇನ್ನು ದಾವಣಗೆರೆ ಜಿಲ್ಲೆ ಹರಪನಹಳ್ಳಿ ಮೂಲದ ಓರ್ವ ಸ್ವಾಮೀಜಿ ಮೂರ್ತಿಗಳು ಗೋಚರವಾದ ಸ್ಥಳದಲ್ಲೇ ಬಿಡಾರ ಹೂಡಿದ್ದಾರೆ, ಅವರು ಯಾರೊಂದಿಗೂ ಮಾತನಾಡದೆ ಮೌನ ತಾಳಿದ್ದಾರೆ. ಮೂರ್ತಿಗಳನ್ನು ನೋಡಲು ಬಂದ ಜನರು ಇದು ಪವಾಡವೋ ಏನೋ ಎಂದು ಕೇಳಿದ್ರೆ ಕೈಸನ್ನೆ, ಬಾಯಿ ಸನ್ನೆ ಮೂಲಕವೆ ಮೌನವಾಗಿ ಸ್ವಾಮೀಜಿ ಉತ್ತರಿಸುತ್ತಿದ್ದಾರೆ. ಇದರಿಂದ ಜನ ಅಚ್ಚರಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವು; 80 ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನದ ಮೇಲೂ ಕಣ್ಣು
Published On - 12:38 pm, Tue, 14 September 21