ಪುತ್ರನಿಗೇ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ನಿವೃತ್ತಿ ಘೋಷಿಸಿದ ಯಡಿಯೂರಪ್ಪ ನಿರ್ಧಾರಕ್ಕೆ ಯಾರು ಏನಂದರು?

| Updated By: ಸಾಧು ಶ್ರೀನಾಥ್​

Updated on: Jul 22, 2022 | 3:14 PM

ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ ವಿಚಾರವಾಗಿ ದಾವಣಗೆರೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಜಮೀರ್​ ಅಹ್ಮದ್​ಖಾನ್​ ಅವರು ಬಿಜೆಪಿಯಲ್ಲಿ ಕಾರ್ಯಕರ್ತರು ಇಲ್ಲವೇ? ಬೇರೆಯವರಿಗೆ ಬಿಟ್ಟುಕೊಡಲಿ ಎಂದು ಹೇಳಿದ್ದಾರೆ.

ಪುತ್ರನಿಗೇ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ನಿವೃತ್ತಿ ಘೋಷಿಸಿದ ಯಡಿಯೂರಪ್ಪ ನಿರ್ಧಾರಕ್ಕೆ ಯಾರು ಏನಂದರು?
ಬಿ ಎಸ್ ಯಡಿಯೂರಪ್ಪ
Follow us on

ಅತ್ತ ರಾಜಕೀಯ ನಿವೃತ್ತಿ ಘೋಷಿಸುವ ಮಾರ್ಗದಲ್ಲಿ ದಾಪುಗಾಲು ಹಾಕಿರುವ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ (BY Vijayendra) ತಾವು ಪ್ರತಿನಿಧಿಸುತ್ತಿರುವ ಶಿಕಾರಿಪುರ ಕಗ್ಷೇತ್ರವನ್ನು ಧಾರೆಯೆರೆದಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ (BS Yediyurappa) ಅವರ ಈ ಧಿಡೀರ್​ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಬಿಎಸ್​ವೈ ಯಾಕೆ ಈ ನಿರ್ಧಾರ ತಗೊಂಡ್ರು? ರಾಜಕೀಯ ಲೆಕ್ಕಾಚಾರವೇನು? ಬಿಎಸ್​ವೈ ರಣತಂತ್ರವೇನು? ತಕ್ಷಣಕ್ಕೆ ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟಿರೋದು ಯಾಕೆ? ಉತ್ತರಾಧಿಕಾರಿ ನನ್ನ ಕರ್ಮ ಭೂಮಿಯಿಂದ (Shikaripura) ಹೋಗಲಿ ಅನ್ನೋ ಸಂದೇಶ ನೀಡಿದ್ದಾರಾ? ಅಥವಾ ಪ್ರಧಾನಿ ಮೋದಿ ಗಟ್ಟಿ ನಿಲುವೇ ಬಿಎಸ್​ವೈ ಈ ನಿರ್ಧಾರಕ್ಕೆ ಕಾರಣವಾಯಿತಾ? ಅಷ್ಟಕ್ಕೂ ಬಿಎಸ್​ವೈಗೆ ಅನಿವಾರ್ಯವಾಗಿತ್ತಾ ಈ ನಿರ್ಧಾರ? ಬಿಎಸ್​ವೈ ಮುಂದೆ ಬೇರೆ ಆಯ್ಕೆ ಇರಲಿಲ್ವಾ? ವಿಜಯೇಂದ್ರನನ್ನ ಮೈಸೂರು ಭಾಗದಲ್ಲಿ ತರಬೇಕು ಅಂತಾ ಬಿಎಸ್​ವೈ ಅವರಿಗಿತ್ತು. ವರುಣಾಗೆ ಅವರೇ ಹುರಿಯಾಳಾಗಬೇಕಿತ್ತು. ಪಕ್ಷದ ವರಿಷ್ಠರು ಕೊನೆಯ ಹಂತದಲ್ಲಿ ಹಿಂದೆ ತೆಗೆದುಕೊಂಡು, ಪಕ್ಷದ ನಿರ್ಣಯ ಒಪ್ಪಿಕೊಳ್ಳಬೇಕು ಅಂದಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಎಸ್​ ಯಡಿಯೂರಪ್ಪಗೆ ಮನಸ್ತಾಪ ಹೆಚ್ಚಾಯಿತಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ರಾಜ್ಯ ರಾಜಕೀಯದಲ್ಲಿ ಪ್ರಮುಖ ನಾಯಕರು ಯಡಿಯೂರಪ್ಪ ನಿರ್ಧಾರದ ಬಗ್ಗೆ ನಾನಾ ಪ್ರತಿಕ್ರಿಯೆ ನೀಡಿದ್ದಾರೆ.

80 ವರ್ಷ ಆಗಿದ್ದರಿಂದ ಟಿಕೆಟ್ ಸಿಗಲ್ಲವೆಂದು ಈ ನಿರ್ಧಾರವಿರಬಹುದು -ಹೆಚ್‌. ವಿಶ್ವನಾಥ್

ಪುತ್ರ ವಿಜಯೇಂದ್ರಗೆ BSY ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರವಾಗಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಹೆಚ್‌. ವಿಶ್ವನಾಥ್ ಟಿವಿ9 ಜೊತೆ ಮಾತನಾಡಿದ್ದು, ಯಡಿಯೂರಪ್ಪ ಸ್ಪರ್ಧೆ ಮಾಡೋದಿಲ್ಲ ಅನ್ನೋದು ಸತ್ಯ. 80 ವರ್ಷ ಆಗಿದೆ ಟಿಕೆಟ್ ಸಿಗಲ್ಲ ಅನ್ನೋದು ಕೂಡಾ ಸತ್ಯ. ಟಿಕೆಟ್ ಸಿಗಲ್ಲ ಅಂತಾ ಯಾವಾಗ ಗೊತ್ತಾಯ್ತೋ ಆಗ ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ನಿಂತುಕೊಳ್ಳಲಿ ಬಿಡಿ, ಯಂಗಸ್ಟರ್ ಬರಲಿ. ಬಿ.ವೈ.ವಿಜಯೇಂದ್ರ ಯುವ ನಾಯಕ, ಚುನಾವಣೆಯಲ್ಲಿ ಸ್ಪರ್ಧಿಸಲಿ. 75 ವರ್ಷ ಆದ ಮೇಲೆ ಬಿಜೆಪಿಯಲ್ಲಿ ಟಿಕೆಟ್‌ ಕೊಡಲ್ಲ. BSYಗೆ ಒಂದು ವಿನಾಯಿತಿ ಕೊಟ್ಟಿದ್ರು, ಇದು ಅವರಿಗೂ ಗೊತ್ತಿದೆ. ಯಾವ ನಿರ್ಧಾರ ಕೈಗೊಳ್ಳಬೇಕೆಂದು ಯಡಿಯೂರಪ್ಪಗೆ ಗೊತ್ತಿದೆ. ಯಡಿಯೂರಪ್ಪ ಇಲ್ಲದೆ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ, ಅವರ ವೈಯಕ್ತಿಕ ನಿರ್ಧಾರದ ಬಗ್ಗೆ ಕಾಮೆಂಟ್ ಮಾಡಲ್ಲ. ಯಡಿಯೂರಪ್ಪನಂತಹವರ ಅನುಭವ ಆಡಳಿತ, ಸರ್ಕಾರಕ್ಕೆ ಬೇಕು ಎಂದು ವ್ಯಾಖ್ಯಾನಿಸಿದ್ದಾರೆ.

ಬಿಜೆಪಿಯಲ್ಲಿ ಕಾರ್ಯಕರ್ತರು ಇಲ್ಲವೇ? ಬೇರೆಯವರಿಗೆ ಬಿಟ್ಟುಕೊಡಲಿ -ಮಾಜಿ ಸಚಿವ ಜಮೀರ್

ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ ವಿಚಾರವಾಗಿ ದಾವಣಗೆರೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಜಮೀರ್​ ಅಹ್ಮದ್​ಖಾನ್​ ಅವರು ಬಿಜೆಪಿಯಲ್ಲಿ ಕಾರ್ಯಕರ್ತರು ಇಲ್ಲವೇ? ಬೇರೆಯವರಿಗೆ ಬಿಟ್ಟುಕೊಡಲಿ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪರನ್ನು ಸಿಎಂ ಮಾಡಿದ್ದರು. ಪುತ್ರನ ಬದಲು ಕಾರ್ಯಕರ್ತರಿಗೆ BSY ಕ್ಷೇತ್ರ ಬಿಟ್ಟುಕೊಡಬೇಕಿತ್ತು ಎಂದು ಜಮೀರ್​ ಹೇಳಿದ್ದಾರೆ.