Lip-Lock Challenge: ಏನಿದು ಲಿಪ್‌ಲಾಕ್ ಚಾಲೆಂಜ್?; ಮಂಗಳೂರಿನ ಕಿಸ್ಸಿಂಗ್ ವಿಡಿಯೋ ಕೇಸ್ನಲ್ಲಿ 8 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
Mangaluru News: 6 ತಿಂಗಳ ಹಿಂದೆ ಮಂಗಳೂರಿನ ಖಾಸಗಿ ಫ್ಲಾಟ್‌ನಲ್ಲಿ ಈ ಘಟನೆ ನಡೆದಿತ್ತು. ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆದ ಬಳಿಕ ಕೇಸ್ ದಾಖಲಾಗಿದೆ. ಹಾಗಾದರೆ, ಏನಿದು ಲಿಪ್ ಲಾಕ್ ಚಾಲೆಂಜ್?
ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಆಗಾಗ ಅನೇಕ ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. ಇತ್ತೀಚೆಗಷ್ಟೇ ದೇಶಾದ್ಯಂತ ಹಿಜಾಬ್ ವಿವಾದ (Hijab Controversy) ಶುರುವಾಗಿದ್ದು ಕರ್ನಾಟಕದ ಕರಾವಳಿಯ ಕಾಲೇಜಿನಿಂದಲೇ. ಇದೀಗ ಮಂಗಳೂರಿನ ಕಾಲೇಜು (Mangalore Kissing Video) ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಲಿಪ್‌ಲಾಕ್ ಚಾಲೆಂಜ್ (Lip-Lock Challenge) ಸ್ವೀಕರಿಸಿದ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಕಿಸ್ ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದ್ದಂತೆ ಪೊಲೀಸರು 8 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ಲಿಪ್‌ಲಾಕ್ ಚಾಲೆಂಜ್ ಆಯೋಜಿಸಿದ್ದ ಮಂಗಳೂರಿನ 8 ವಿದ್ಯಾರ್ಥಿಗಳ ವಿರುದ್ಧ ದಕ್ಷಿಣ ಕನ್ನಡದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 6 ತಿಂಗಳ ಹಿಂದೆ ಕರ್ನಾಟಕದ ಮಂಗಳೂರಿನ ಖಾಸಗಿ ಫ್ಲಾಟ್‌ನಲ್ಲಿ ಈ ಘಟನೆ ನಡೆದಿತ್ತು. ಗೆಳೆಯರ ಸಮ್ಮುಖದಲ್ಲಿ ಬಾಲಕನೊಬ್ಬ ಶಾಲಾ ಬಾಲಕಿಗೆ ಮುತ್ತಿಟ್ಟಿರುವ ವಿಡಿಯೋ ವೈರಲ್ ಆದ ಬಳಿಕ ಕೇಸ್ ದಾಖಲಾಗಿದೆ. ಹಾಗಾದರೆ, ಏನಿದು ಲಿಪ್ ಲಾಕ್ ಚಾಲೆಂಜ್?
ಕಾಲೇಜು ವಿದ್ಯಾರ್ಥಿಗಳು 2 ತಿಂಗಳ ಕಾಲ ಫ್ಲಾಟ್ ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಮ್ಮ ಗರ್ಲ್ಫ್ರೆಂಡ್ಗಳನ್ನು ಕರೆದುಕೊಂಡು ಬಂದು ಟ್ರೂಥ್ ಆರ್ ಡೇರ್ ಆಟವನ್ನು ಆಡಿದರು. ಆ ವೇಳೆ ಫ್ಲಾಟ್‌ನಲ್ಲಿ ಅವರು ಲಿಪ್ ಲಾಕ್ ಸ್ಪರ್ಧೆಯನ್ನೂ ಆಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ; ವಿಡಿಯೋ ಲೀಕ್ ಆಗಿದ್ದು ಹೇಗೆ? ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು
ಹಲವಾರು ಜನರೆದುರು ತುಟಿಗೆ ತುಟಿಯನ್ನೊತ್ತಿ ಹುಡುಗ- ಹುಡುಗಿ ಮುತ್ತ ನೀಡಬೇಕೆಂಬುದು ಲಿಪ್‌ಲಾಕ್ ಚಾಲೆಂಜ್. ವೈರಲ್ ಆಗಿರುವ ವಿಡಿಯೋದಲ್ಲಿ ಕಾಲೇಜು ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ತುಟಿಗೆ ಚುಂಬಿಸುತ್ತಿರುವುದನ್ನು ಇನ್ನೊಬ್ಬ ವಿದ್ಯಾರ್ಥಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಅವರಿಬ್ಬರೂ ಲಿಪ್‌ಲಾಕ್ ಮಾಡುವಾಗ ಸುತ್ತಲೂ ಇದ್ದ ವಿದ್ಯಾರ್ಥಿಗಳು ಜೋರಾಗಿ ಚೀರಾಡುತ್ತಿದ್ದಾರೆ. ಲಿಪ್ ಲಾಕ್ ಸ್ಪರ್ಧೆಯ ಭಾಗವಾಗಿ ಈ ಕೃತ್ಯ ನಡೆದಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಗುಂಪಿನಲ್ಲಿದ್ದ ಹುಡುಗನೊಬ್ಬ ಈ ವಿಡಿಯೋವನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದ. ಈ ವಿಡಿಯೋ ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಲಾಗಿತ್ತು. ಇದಾದ ಬಳಿಕ ಈ ಲಿಪ್‌ಲಾಕ್ ಚಾಲೆಂಜ್ ಪ್ರಕರಣ ಬೆಳಕಿಗೆ ಬಂದಿದೆ.
ಈ ಲಿಪ್‌ಲಾಕ್ ಚಾಲೆಂಜ್ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದವರು. ಈ ವಿಡಿಯೋ ಪೋಷಕರಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸಿದ್ದಾರೆಯೇ ಎಂದು ಪರಿಶೀಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದ ಬಾಲಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ ಆರೋಪಿಗಳಲ್ಲಿ ಒಬ್ಬ ವಿದೇಶಕ್ಕೆ ಹೋಗಿದ್ದಾನೆ.
ಇದನ್ನೂ ಓದಿ: Students Kissing Video – ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್
ಕಿಸ್ಸಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿನಿಯರು ಕಾಲೇಜಿನ ಯೂನಿಫಾರಂ, ಐಡಿ ಕಾರ್ಡ್ ಧರಿಸಿದ್ದರಿಂದ ಇದು ಕಾಲೇಜಿಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ವಿಡಿಯೋ ವೈರಲ್ ಆದರೆ ಕಾಲೇಜಿನ ಮರ್ಯಾದೆಯೂ ಹೋಗುತ್ತದೆ ಎಂದು ಕೆಲವು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು.
ಸೆಕ್ಸ್ ವಿಡಿಯೋ ಕೂಡ ವೈರಲ್:
ಇದಿಷ್ಟೇ ಅಲ್ಲದೆ, ಈ ಕಿಸ್ಸಿಂಗ್ ವಿಡಿಯೋದ ಬೆನ್ನತ್ತಿದ ಪೊಲೀಸರಿಗೆ ಇನ್ನಷ್ಟು ಆಘಾತಕಾರಿ ಮಾಹಿತಿಯೂ ಲಭ್ಯವಾಗಿದೆ. ಲಿಪ್ ಕಿಸ್ ಮಾಡಿದ ಬಳಿಕ ವಿದ್ಯಾರ್ಥಿಗಳು ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಯುಸಿ ವಿದ್ಯಾರ್ಥಿಗಳು ನಗ್ನವಾಗಿ ಲೈಂಗಿಕ ಕ್ರಿಯೆ ನಡೆಸಿರುವ 51 ಸೆಕೆಂಡ್ಗಳ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬಳಾಗಿರುವ ವಿದ್ಯಾರ್ಥಿನಿ ತನಗೆ ಆ ಅಪಾರ್ಟ್‌ಮೆಂಟ್‌ನಲ್ಲಿರುವ ಹುಡುಗರ ಪರಿಚಯವಿತ್ತು. ಅವರಲ್ಲಿ ಒಬ್ಬನ ಜೊತೆ ತನಗೆ ದೈಹಿಕ ಸಂಬಂಧವಿತ್ತು. ಆತನ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಯಾರೋ ಅದನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ. ಇತರೆ ಹುಡುಗರು ಆ ವಿಡಿಯೋ ಬಳಸಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಹುಡುಗಿ ಹೇಳಿದ್ದಾಳೆ. ಆರೋಪಿಗಳ ಪೈಕಿ 17 ವರ್ಷದ ಬಾಲಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾನೆ.
Published On - 4:10 pm, Fri, 22 July 22