Kannada News Karnataka by election in karnataka 2024: Here is the congress channapatna candidate CP Yogeshwara's Asset Details, taja suddi
ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಚನ್ನಪಟ್ಟಣ ಅಖಾಡಕ್ಕಿಳಿದ ಯೋಗೇಶ್ವರ್ ಆಸ್ತಿ ವಿವರ ಇಲ್ಲಿದೆ
ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಇಂದು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಸಿ.ಪಿ.ಯೋಗೇಶ್ವರ್ ಒಟ್ಟು 27,94,06,412 ಮೌಲ್ಯದ ಸ್ಥಿರಾಸ್ತಿ ಮತ್ತು 7,25,20,470 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಅವರ ಪತ್ನಿ ಹೆಸರಿನಲ್ಲೂ ಸಾಕಷ್ಟು ಆಸ್ತಿ ಹೊಂದಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಚನ್ನಪಟ್ಟಣ ಅಖಾಡಕ್ಕಿಳಿದ ಯೋಗೇಶ್ವರ್ ಆಸ್ತಿ ವಿವರ ಇಲ್ಲಿದೆ
Follow us on
ರಾಮನಗರ, ಅಕ್ಟೋಬರ್ 24: ದಳಪತಿಗಳ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಜಿಲ್ಲೆಯ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ (CP Yogeshwara) ಇಂದು ನಾಮಿನೇಷನ್ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಉಪಸ್ಥಿತರಿದ್ದರು. ನಗದು, ಹೂಡಿಕೆ ಸೇರಿದಂತೆ 7,25,20,470 ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಸಿ.ಪಿ.ಯೋಗೇಶ್ವರ್ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ ವಿವರ ನೀಡಿದ್ದಾರೆ.
ಸಿ.ಪಿ.ಯೋಗೇಶ್ವರ್ ಬಳಿರುವ ಆಸ್ತಿ ಎಷ್ಟು?
ಸಿ.ಪಿ.ಯೋಗೇಶ್ವರ್ ಹೆಸರಿನಲ್ಲಿ ಒಟ್ಟು 27,94,06,412 ಮೌಲ್ಯದ ಸ್ಥಿರಾಸ್ತಿ ಇದ್ದು, ಪತ್ನಿ ಶೀಲಾ ಹೆಸರಲ್ಲಿ 25,35,37,740 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಪತ್ನಿ ಶೀಲಾ ಹೆಸರಿನಲ್ಲಿ 7,10,80,556 ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಶೇಷಗಿರಿಹಳ್ಳಿ, ಕೋತನಹಳ್ಳಿ, ಕೆಂಜಿಗರಹಳ್ಳಿ, ಕೇತೋಹಳ್ಳಿ, ಹಂಪಾಪುರ ಗ್ರಾಮದಲ್ಲಿ ಸಿ.ಪಿ.ಯೋಗೇಶ್ವರ್ ಸ್ಥಿರಾಸ್ತಿ ಹೊಂದಿದ್ದಾರೆ.
ಯೋಗೇಶ್ವರ್ ಹೆಸರಲ್ಲಿ 22,02,47,157 ರೂ. ಮೌಲ್ಯದ ಮತ್ತು ಪತ್ನಿ ಶೀಲಾ ಹೆಸರಿನಲ್ಲಿ 2,14,52,740 ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಶೀಲಾ ಹೆಸರಿನಲ್ಲಿ 6.65 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ.
ಸಿ.ಪಿ.ಯೋಗೇಶ್ವರ್ ಹೆಸರಿನಲ್ಲಿ 2,37,62,000 ಕೋಟಿ ರೂ. ಮೌಲ್ಯದ ಮತ್ತು ಶೀಲಾ ಹೆಸರಿನಲ್ಲಿ 15.45 ಕೋಟಿ ರೂ. ಮೌಲ್ಯದ ಮನೆಗಳಿವೆ.
ಯೋಗೇಶ್ವರ್ ಹೆಸರಲ್ಲಿ 25,86,31,284 ರೂ. ಸಾಲವಿದ್ದು, ಶೀಲಾ ಹೆಸರಿನಲ್ಲಿ 3,41,42,184 ರೂ. ಸಾಲವಿದೆ.
250 ಗ್ರಾಂ ಚಿನ್ನಾಭರಣವನ್ನು ಯೋಗೇಶ್ವರ್ ಹೊಂದಿದ್ದು, ಶೀಲಾ ಬಳಿ 1 ಕೆಜಿ 500 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಇದೆ. ಸಾರ್ವಜನಿಕರಿಂದ 1 ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಶೀಲಾ ಸ್ವೀಕರಿಸಿದ್ದಾರೆ.
ಯೋಗೇಶ್ವರ್ ಕಾಂಗ್ರೆಸ್ ಸೇರಿದ ದಿನವೇ ಎಐಸಿಸಿ ಟಿಕೆಟ್ ಘೋಷಣೆ ಮಾಡಿದೆ. ಅದರ ಬೆನ್ನಲ್ಲೇ ಇಂದು ಕಾಂಗ್ರೆಸ್ ಅಭ್ಯರ್ಥಿ ಆಗಿ ನಾಮಿನೇಷನ್ ಕೂಡ ಸಲ್ಲಿಸಲಿದ್ದಾರೆ. ಚನ್ನಪಟ್ಟಣ ಮಂಗಳವಾರ ಪೇಟೆಯಿಂದ ತಹಶೀಲ್ದಾರ್ ಕಚೇರಿ ವರೆಗೂ 1.5 ಕಿಲೋ ಮೀಟರ್ ರೋಡ್ ಶೋ ಮಾಡಲಾಗಿದೆ. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.