ವ್ಯಕ್ತಿಗೆ ಡಯಾಲಿಸಿಸ್ ಮಾಡಿಸಲು ಆಸ್ಪತ್ರೆಗೆ ಹೋಗ್ತಿದ್ದಾಗ ಕಾರು-ಲಾರಿ ಮುಖಾಮುಖಿ: ಕಾರಿನಲ್ಲಿದ್ದ 3 ಮಂದಿ ಸ್ಥಳದಲ್ಲೇ ಸಾವು
ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಧಾರವಾಡ: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿರುವ ಘಟನೆ ಸವದತ್ತಿ ರಸ್ತೆಯಲ್ಲಿ ನಡೆದಿದೆ. ಮೃತ ದುರ್ದೈವಿಗಳು ಸವದತ್ತಿ ಪಟ್ಟಣದ ನಾಗರಾಜ ಇಚ್ಚಂಗಿ(30), ವಿಜಯಾ(42) ಹಾಗೂ ರೇವಣಸಿದ್ದೇಶ್ವರ ಇಚ್ಚಂಗಿ(46) ಎಂದು ತಿಳಿದು ಬಂದಿದೆ.
ರೇವಣಸಿದ್ದೇಶ್ವರ ಇಚ್ಚಂಗಿಗೆ ಡಯಾಲಿಸಿಸ್ ಮಾಡಿಸಲು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದರು. ಎರಡೂ ವಾಹನಗಳ ಚಾಲಕರಿಗೆ ಹಿಡಿತ ಸಿಗದೇ ಕಾರು ಮತ್ತು ಲಾರಿಗೆ ಮುಖಾಮುಖಿ ಡಿಕ್ಕಿಯಾಗಿವೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ನಜ್ಜುಗುಜ್ಜಾದ ವಾಹನ.. ಸ್ಥಳದಲ್ಲೇ ಇಬ್ಬರ ಸಾವು
Published On - 3:37 pm, Wed, 30 December 20