AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದಡಿ ದೂರು ದಾಖಲು

ಕೋಡಿಹಳ್ಳಿ ಚಂದ್ರಶೇಖರ್ ಜನರಿಗೆ​ ತಪ್ಪು ಮಾಹಿತಿ ನೀಡಿದ್ದಾರೆ. ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ದಾರಿ ತಪ್ಪಿಸಿದ್ದಾರೆ. ಈಗಾಗಲೇ ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಸುಪ್ರೀಂಕೋರ್ಟ್​ ನೇಮಿಸಿದ್ದ ಸಮಿತಿಗೆ ದಾಖಲೆ ನೀಡದಂತೆ ಜನರ ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆಂದು ಆರೋಪಿಸಿ ಕೆ.ಮೋಹನ್ ಎಂಬುವವರು ದೂರು ನೀಡಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದಡಿ ದೂರು ದಾಖಲು
ಕೋಡಿಹಳ್ಳಿ ಚಂದ್ರಶೇಖರ್
TV9 Web
| Edited By: |

Updated on:Jun 28, 2021 | 8:01 PM

Share

ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ದೂರು ಬಿಡಿಎ ಇಂಜಿನಿಯರ್​​ ಆರ್.ಕೆ.ಮೋಹನ್ ಎಂಬುವವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವರಾಮ ಕಾರಂತ ಲೇಔಟ್​ ವಿರೋಧಿಸಿ ಧರಣಿ ನಡೆಸಿ ಬಿಡಿಎ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದಡಿ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಕೆ.ಮೋಹನ್ ಎಂಬುವವರು ದೂರು ದಾಖಲಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಜನರಿಗೆ​ ತಪ್ಪು ಮಾಹಿತಿ ನೀಡಿದ್ದಾರೆ. ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ದಾರಿ ತಪ್ಪಿಸಿದ್ದಾರೆ. ಈಗಾಗಲೇ ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ​ಸುಪ್ರೀಂಕೋರ್ಟ್​ ನೇಮಿಸಿದ್ದ ಸಮಿತಿಗೆ ದಾಖಲೆ ನೀಡದಂತೆ ಜನರ ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆಂದು ಆರೋಪಿಸಿ ಕೆ.ಮೋಹನ್ ಎಂಬುವವರು ದೂರು ನೀಡಿದ್ದಾರೆ.

ಡಾ. ಶಿವರಾಮ ಕಾರಂತ ಬಡಾವಣೆ ಯಾವ ಕಾರಣಕ್ಕೂ ನಿಲ್ಲೋದಿಲ್ಲ: ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ಡಾ. ಶಿವರಾಮ ಕಾರಂತ​ ಜಾಗದ ಕಟ್ಟಡ, ಮನೆಗಳ ಪರಿಶೀಲನೆ ನಡೆಸಲು ರಚಿಸಿರುವ ಸಮಿತಿಯ ಸದಸ್ಯರು, ದಾಖಲೆ ನೀಡಲು ನಿರಾಸಕ್ತಿ ತೋರುತ್ತಿದ್ದಾರೆ. ಒಂದು ತಿಂಗಳಿಗೆ 4 ಸಾವಿರ ದಾಖಲೆಗಳು ಬರಬಹುದೆಂದು ಲೆಕ್ಕ ಹಾಕಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರು ಬರುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ನೇತೃತ್ವದ ಸಮಿತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ 5ರಂದು ತಿಳಿಸಿದ್ದರು.

1,850 ಜನ ಮಾತ್ರ ಕಟ್ಟಡಗಳ ಮಾಹಿತಿ ಕೊಟ್ಟಿದ್ದಾರೆ. 350 ಜನ ಆನ್​ಲೈನ್ ಮೂಲಕ ದಾಖಲೆ ಸಲ್ಲಿಕೆ ಮಾಡಿದ್ದಾರೆ. 7,500 ಕಟ್ಟಡಗಳಿವೆ. ಜನರು ಬರುತ್ತಿಲ್ಲ ಆದರೆ, ಜನ ಹೆಚ್ಚು ಸಂಖ್ಯೆಯಲ್ಲಿ ಬರಬಹುದು ಎಂಬ ನಿರೀಕ್ಷೆಯಿತ್ತು. ಈ ತಿಂಗಳ 30ನೇ ತಾರೀಕು ದಾಖಲೆ ನೀಡಲು ಕೊನೆಯ ದಿನ ಎಂದು ಹೇಳಿಕೆ ನೀಡಿದ್ದರು.

ಕೋಡಿಹಳ್ಳಿ ಚಂದ್ರಶೇಖರ್​ ಜನರ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಶಿವರಾಮ ಕಾರಂತ ಬಡಾವಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೈ ಬಿಡುವ ಭರವಸೆ ನೀಡಿದ್ದಾರೆ. ಇದರಿಂದ ಜನರ ಹಾದಿ ತಪ್ಪುವಂತೆ ಆಗಿದೆ. ಶಿವರಾಮ ಕಾರಂತ ಬಡವಾಣೆಗೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ್ ಗೊಂದಲ ಸೃಷ್ಟಿಸಿದ್ದಾರೆ. ಶಿವರಾಮ​ ಕಾರಂತ ಬಡಾವಣೆ ಯಾವ ಕಾರಣಕ್ಕೂ ನಿಲ್ಲಿವುದಿಲ್ಲ ಎಂದು ಎ.ವಿ ಚಂದ್ರಶೇಖರ್ ತಿಳಿಸಿದ್ದರು.

ಇದನ್ನೂ ಓದಿ: 

Big Update: ರಾಜ್ಯದಲ್ಲಿ ಕೊವಿಡ್ 3ನೇ ಅಲೆ ಎದುರಿಸಲು ಹೊಸ ಸಮಿತಿ ರಚನೆಗೆ ತೀರ್ಮಾನ

ಕರ್ನಾಟಕದಲ್ಲಿ ಮತ್ತೊಮ್ಮೆ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ, ಸಭೆಯಲ್ಲಿ ದಿನಾಂಕ ನಿಗದಿ: ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ

(Case registered against Kodihalli Chandrashekar on the issue of Shivaram Karanth BDA layout Bengaluru)

Published On - 7:53 pm, Mon, 28 June 21