1 ಕೋಟಿ ನೀಡಿದರೆ 1 ಗಂಟೆಗೆ ಶೇ. 10 ಕಮಿಷನ್ ಕೊಡ್ತಾರಂತೆ! ಆಮೇಲೆ?

|

Updated on: May 18, 2020 | 8:45 PM

ಬೆಂಗಳೂರು: ಪರ್ಸೆಂಟೇಜ್​ ಆಸೆಗೆ ಎಟಿಎಂ ಕಸ್ಟೋಡಿಯನ್ 1 ಕೋಟಿ ಹಣ ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪರ್ಸೆಂಟೇಜ್​ ಆಸೆಗೆ ಬಿದ್ದು, ಎಟಿಎಂನಲ್ಲಿ ತುಂಬಬೇಕಿದ್ದ ಹಣವನ್ನು ಎಟಿಎಂ ಕಸ್ಟೋಡಿಯನ್ ಕಳೆದುಕೊಂಡಿದ್ದಾನೆ. ಆದರೆ ನಮ್ಮ ಪೊಲೀಸರ ಕಾಱಚರಣೆಯಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮೇ 14ರಂದು ಎಟಿಎಂಗಳಿಗೆ ಹಣ ತುಂಬಬೇಕಿದ್ದ ಸೆಕ್ಯೂರ್​ ವ್ಯಾಲ್ಯೂ ಇಂಡಿಯಾ ಕಂಪನಿ ನೌಕರರಾದ ಕಸ್ಟೋಡಿಯನ್ ಅಶೋಕ್, ಶ್ರೀನಿವಾಸ್, ರಾಮು ಎಂಬುವವರು ಆಮಿಷಕ್ಕೆ ಒಳಗಾಗಿ ಹಣವನ್ನು ಎಗರಿಸಿದ್ದಾರೆ. 1 ಕೋಟಿ ಹಣ ನೀಡಿದರೆ ಗಂಟೆಗೆ ಶೇಕಡಾ 10ರಷ್ಟು […]

1 ಕೋಟಿ ನೀಡಿದರೆ 1 ಗಂಟೆಗೆ ಶೇ. 10 ಕಮಿಷನ್ ಕೊಡ್ತಾರಂತೆ! ಆಮೇಲೆ?
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ
Follow us on

ಬೆಂಗಳೂರು: ಪರ್ಸೆಂಟೇಜ್​ ಆಸೆಗೆ ಎಟಿಎಂ ಕಸ್ಟೋಡಿಯನ್ 1 ಕೋಟಿ ಹಣ ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪರ್ಸೆಂಟೇಜ್​ ಆಸೆಗೆ ಬಿದ್ದು, ಎಟಿಎಂನಲ್ಲಿ ತುಂಬಬೇಕಿದ್ದ ಹಣವನ್ನು ಎಟಿಎಂ ಕಸ್ಟೋಡಿಯನ್ ಕಳೆದುಕೊಂಡಿದ್ದಾನೆ. ಆದರೆ ನಮ್ಮ ಪೊಲೀಸರ ಕಾಱಚರಣೆಯಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಮೇ 14ರಂದು ಎಟಿಎಂಗಳಿಗೆ ಹಣ ತುಂಬಬೇಕಿದ್ದ ಸೆಕ್ಯೂರ್​ ವ್ಯಾಲ್ಯೂ ಇಂಡಿಯಾ ಕಂಪನಿ ನೌಕರರಾದ ಕಸ್ಟೋಡಿಯನ್ ಅಶೋಕ್, ಶ್ರೀನಿವಾಸ್, ರಾಮು ಎಂಬುವವರು ಆಮಿಷಕ್ಕೆ ಒಳಗಾಗಿ ಹಣವನ್ನು ಎಗರಿಸಿದ್ದಾರೆ.

1 ಕೋಟಿ ಹಣ ನೀಡಿದರೆ ಗಂಟೆಗೆ ಶೇಕಡಾ 10ರಷ್ಟು ಕಮಿಷನ್ ನೀಡುವುದಾಗಿ ಸಂತೋಷ್ ಎಂಬಾತ ಆಮಿಷವೊಡ್ಡಿದ್ದ. ಸಂತೋಷ್​ನ ಮಾತು ನಂಬಿ ಎಟಿಎಂಗಳಲ್ಲಿ ಹಾಕಬೇಕಿದ್ದ 1 ಕೋಟಿ ಹಣವನ್ನು ಸಂತೋಷ್​ಗೆ ಹಸ್ತಾಂತರಿಸಿದ್ದಾರೆ. ನಂತರ 2 ಗಂಟೆಗಳಾದ್ರೂ ಸಂತೋಷ್ ಸಿಗದೇ ಸತಾಯಿಸಿದ್ದಾನೆ.

ಎಟಿಎಂಗಳಲ್ಲಿ ಹಣ ಜಮಾವಣೆಯಾಗದನ್ನು ಗಮನಿಸಿದ ಸೆಕ್ಯೂರ್​ ವ್ಯಾಲ್ಯೂ ಇಂಡಿಯಾ ಕಂಪನಿ, ಕಸ್ಟೋಡಿಯನ್​ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಕಾಱಚರಣೆಗಿಳಿದ ಪೊಲೀಸರ ತಂಡ ಅಶೋಕ್, ಶ್ರೀನಿವಾಸ್​ನನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬಗ್ಗೆ ಮಾಹಿತಿ ಹೊರಬಿದ್ದಿದೆ. ಪೊಲೀಸರು ಮೊಬೈಲ್​ ಕರೆ ಆಧರಿಸಿ ಹಣ ಪಡೆದು ತಲೆಮರೆಸಿಕೊಂಡಿದ್ದ ಸಂತೋಷ್​ನನ್ನು 1 ಕೋಟಿ ಸಮೇತ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರಾಮುಗಾಗಿ ಪೊಲೀಸರ ಶೋಧ ಮುಂದುವರೆದಿದೆ.

Published On - 7:51 pm, Mon, 18 May 20