ಕೆರೆಯ ಅಳ ತಿಳಿಯದೆ ಒಬ್ಬರಿಗೊಬ್ಬರು ತಬ್ಬಿಕೊಂಡು ಜಲಸಮಾಧಿಯಾದ ಬಾಲಕರು!
ನೆಲಮಂಗಲ: ಬಾಲಕರಿಬ್ಬರು ಬೇಸಿಗೆ ರಜೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದಾಗ ಜಲ ಸಮಾಧಿಯಾಗಿದ್ದಾರೆ. ಕೆರೆಯ ಅಳ ತಿಳಿಯದೆ ಮುಳುಗುವಾಗ ಒಬ್ಬರಿಗೊಬ್ಬರು ತಬ್ಬಿಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹತ್ತುಕುಂಟೆಪಾಳ್ಯ ಬಳಿಯ ಕೆರೆಯಲ್ಲಿ ಮುಳುಗಿ ಪುರುಷೋತ್ತಮ್(14) ಮತ್ತು ನಾಗೇಶ್(17) ಸಾವಿಗೀಡಾಗಿದ್ದಾರೆ. ಮೃತ ದುರ್ದೈವಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುಗೆ ಸೇರಿದವರು. ಗ್ರಾಮಸ್ಥರ ಸಹಾಯದಿಂದ ಕೆರೆಯಲ್ಲಿ ಮುಳುಗಿದ್ದ ಯುವಕರ ಶವಗಳನ್ನು ಮೇಲಕ್ಕೆ ಎತ್ತಲಾಗಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ: ಬಾಲಕರಿಬ್ಬರು ಬೇಸಿಗೆ ರಜೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದಾಗ ಜಲ ಸಮಾಧಿಯಾಗಿದ್ದಾರೆ. ಕೆರೆಯ ಅಳ ತಿಳಿಯದೆ ಮುಳುಗುವಾಗ ಒಬ್ಬರಿಗೊಬ್ಬರು ತಬ್ಬಿಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹತ್ತುಕುಂಟೆಪಾಳ್ಯ ಬಳಿಯ ಕೆರೆಯಲ್ಲಿ ಮುಳುಗಿ ಪುರುಷೋತ್ತಮ್(14) ಮತ್ತು ನಾಗೇಶ್(17) ಸಾವಿಗೀಡಾಗಿದ್ದಾರೆ.
ಮೃತ ದುರ್ದೈವಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುಗೆ ಸೇರಿದವರು. ಗ್ರಾಮಸ್ಥರ ಸಹಾಯದಿಂದ ಕೆರೆಯಲ್ಲಿ ಮುಳುಗಿದ್ದ ಯುವಕರ ಶವಗಳನ್ನು ಮೇಲಕ್ಕೆ ಎತ್ತಲಾಗಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:32 pm, Mon, 18 May 20